ಸರ್ಕಾರಿ ಹಾಸ್ಟೇಲ್‌ಗೆ ವಲಸಿಗರು
Team Udayavani, Jun 3, 2020, 5:21 PM IST
ಸಾಂದರ್ಭಿಕ ಚಿತ್ರ
ಮುದ್ದೇಬಿಹಾಳ: ಢವಳಗಿ ಗ್ರಾಮದ ಹೊರ ವಲಯದಲ್ಲಿರುವ ಬಾಲಕಿಯರ ಸರ್ಕಾರಿ ವಸತಿ ನಿಲಯದ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಕ್ಕೆ ಮಂಗಳವಾರ ದಿಢೀರ್‌ನೆ ಮಹಾರಾಷ್ಟ್ರದ ಮುಂಬೈನಿಂದ ಬಂದಿರುವ 18 ವಲಸಿಗರನ್ನು ತಂದಿರಿಸಿದ್ದಕ್ಕೆ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.
ಮುಂಬೈ-ಗದಗ ರೈಲು ಮೂಲಕ ವಿಜಯಪುರಕ್ಕೆ ಬಂದಿದ್ದ ಇವರನ್ನು ಜಿಲ್ಲಾಡಳಿತದ ಸೂಚನೆ ಮೇರೆಗೆ ಸಾರಿಗೆ ಸಂಸ್ಥೆ ಬಸ್ ಮೂಲಕ ವಸತಿ ನಿಲಯಕ್ಕೆ ಕರೆತಂದಿದ್ದು ಸರಿಯಲ್ಲ. ತಾಳಿಕೋಟೆ ಭಾಗದ 10, ಮಾವಿನಭಾವಿ, ಮಾದಿನಾಳದ ತಲಾ 4 ಜನರನ್ನು ಇಲ್ಲಿ ಇರಿಸಲಾಗಿದೆ. ಈ ಮೊದಲು ಇಲ್ಲಿ 197 ಜನರನ್ನು ಇರಿಸಲಾಗಿತ್ತು. ಅವರೆಲ್ಲರೂ ಕ್ವಾರಂಟೈನ್ ಅವಧಿ ಮುಗಿಸಿ ತಮ್ಮೂರುಗಳಿಗೆ ತೆರಳಿದ್ದಾರೆ. ಎಲ್ಲ ಮುಗಿದ ಮೇಲೆ ಅತಿ ಹೆಚ್ಚಿನ ಸೋಂಕು ಇರುವ ಮಹಾರಾಷ್ಟ್ರ ವಲಸಿಗರನ್ನು ಮತ್ತೇ ತಂದಿರಿಸಿದ್ದು ಸರಿಯಲ್ಲ, ನಮ್ಮ ಗ್ರಾಪಂ ವ್ಯಾಪ್ತಿ ಜನರನ್ನು ತಂದಿರಿಸಿದ್ದರೆ ಒಪ್ಪಿಕೊಳ್ಳಬಹುದಿತ್ತು. ಈಗ ಬೇರೆ ಬೇರೆ ಜನರನ್ನು ತಂದಿರಿಸುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗುವ ಸಂಭವ ಇದೆ ಎಂದು ಗ್ರಾಪಂ ಸದಸ್ಯ ಕುಮಾರೆಪ್ಪ ಕೋರಿ ಅಸಮಾಧಾನ ತೋಡಿಕೊಂಡಿದ್ದಾರೆ.
ಗೊಂದಲ: ವಸತಿ ನಿಲಯದಲ್ಲಿದ್ದ ಎಲ್ಲರೂ ಸಾಂಸ್ಥಿಕ ಕ್ವಾರಂಟೈನ್ ಅವಧಿ ಮುಗಿಸಿ ತಮ್ಮೂರಿಗೆ ತೆರಳಿದ್ದರಿಂದ ಕೇಂದ್ರದ ಉಸ್ತುವಾರಿ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿತ್ತು. ಈಗ ದಿಢೀರ್ 18 ಜನರನ್ನು ತಂದಿರಿಸಿದ ಮಾಹಿತಿ ತಿಳಿದ ಅಧಿಕಾರಿಗಳು ಕೆಲ ಹೊತ್ತು ಗೊಂದಲಕ್ಕೀಡಾಗಿದ್ದರು. ನಂತರ ಪರಿಸ್ಥಿತಿ ಎದುರಿಸಲು ಸಜ್ಜಾದ ತಾಲೂಕಾಡಳಿತ ತರಾತುರಿಯಲ್ಲಿ ಬಿಇಒ ಅವರನ್ನು ಕೇಂದ್ರಕ್ಕೆ ಕಳಿಸಿ ಸಿಬ್ಬಂದಿಗೆ ಕರೆ ಮಾಡಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
Vijayapura: ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವುದು ನಮ್ಮ ನಿಲುವು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Encroached; ಉತ್ತರಪ್ರದೇಶದಲ್ಲಿ ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯೇ ತೆರವು!
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.