ಮನೆ-ಮನೆಗೆ ಪಡಿತರ ಧಾನ್ಯ ತಲುಪಿಸಿ
ಪಡಿತರ ವಿತರಕರ ಸಭೆಯಲ್ಲಿ ಶಾಸಕ ನಡಹಳ್ಳಿ ಸೂಚನೆಅಗತ್ಯ ಸ್ವಯಂ ಸೇವಕರನ್ನು ಒದಗಿಸುವೆ
Team Udayavani, May 3, 2020, 2:37 PM IST
ಮುದ್ದೇಬಿಹಾಳ: ದಾಸೋಹ ನಿಲಯದಲ್ಲಿ ಶಾಸಕ ನಡಹಳ್ಳಿ ಪಡಿತರ ವಿತರಕರ ಸಭೆ ನಡೆಸಿದರು
ಮುದ್ದೇಬಿಹಾಳ: ಕೋವಿಡ್ ಹಾವಳಿ ಮುಗಿಯುವವರೆಗೆ ಎಲ್ಲ ಪಡಿತರ ವಿತರಕರು ಪಡಿತರ ಫಲಾನುಭವಿಗಳ ಮನೆಮೆನೆಗೆ ಪಡಿತರ ಸಾಮಗ್ರಿ ಒಯ್ದು ಕೊಡುವ ಯೋಜನೆ ರೂಪಿಸಿ ಜಾರಿಗೊಳಿಸಬೇಕು. ಇದಕ್ಕೆ ಅಗತ್ಯಬೀಳುವ ಸ್ವಯಂ ಸೇವಕರನ್ನು ತಾವು ಒದಗಿಸುವುದಾಗಿ ಶಾಸಕ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ದಾಸೋಹ ನಿಲಯ ಹೊರಾಂಗಣದಲ್ಲಿ ಶುಕ್ರವಾರ ನಡೆದ ಮುದ್ದೇಬಿಹಾಳ, ತಾಳಿಕೋಟೆ ತಾಲೂಕುಗಳ ಎಲ್ಲ ಪಡಿತರ ವಿತರಕರ ಸಭೆಯಲ್ಲಿ ಅವರು ಮಾತನಾಡಿದರು. ಈಗಿನ ವ್ಯವಸ್ಥೆಯಲ್ಲಿ ಪಡಿತರ ಅಂಗಡಿ ಮುಂದೆ ಶಾಮಿಯಾನ, ಸ್ಯಾನಿಟೈಸರ್, ಕುಡಿವ ನೀರು, ಸಾಮಾಜಿಕ ಅಂತರಕ್ಕೆ ವ್ಯವಸ್ಥೆ ಮಾಡಲೇಬೇಕು. ಮನೆಮೆನೆಗೆ ಪಡಿತರ ತಲುಪಿಸುವುದರಿಂದ ಖರ್ಚು ಉಳಿತಾಯವಾಗುವುದರ ಜೊತೆಗೆ ನೀವೂ ಸಹಿತ ಕೊರೊನಾ ಸೈನಿಕರಾಗಿ ಜನರ ಸೇವೆ ಮಾಡಲು ಇದೊಂದು ಉತ್ತಮ ಅವಕಾಶ ಎನ್ನುವುದನ್ನು ಅರಿತುಕೊಂಡು ಪಾಲಿಸಲು ಮುಂದಾಗಬೇಕು ಎಂದರು.
ನಕಾರಾತ್ಮಕ ಚಿಂತನೆಗಳನ್ನು ತೆಗೆದುಹಾಕಿ. ಪಡಿತರ ವಿತರಣೆಯಲ್ಲಿ ರಾಜಕೀಯ ಬೆರೆಸಬೇಡಿ. ಕೊರೊನಾ ಸಂಕಷ್ಟ ಕಾಲದಲ್ಲಿ ಜನರ ಸೇವೆ ದೊರಕಿದ ಸದವಕಾಶ ಎಂದು ತಿಳಿದುಕೊಳ್ಳಿ. ಯಾರಿಂದಲೂ ಹಣ ಪಡೆದುಕೊಳ್ಳಬೇಡಿ. ಇಷ್ಟುದಿನ ಪಡಿತರ ಅಂಗಡಿಕಾರನಾಗಿದ್ದೆ, ಇನ್ನು ಮುಂದೆ ಕೊರೊನಾ ಸೈನಿಕನಾಗಿ ಬಡವರ ಸೇವೆ ಮಾಡುತ್ತೇನೆ ಎಂದು ಪ್ರಮಾಣ ಮಾಡಿ. ಈ ಹೊಸ ವ್ಯವಸ್ಥೆಗೆ ಆಗೋದಿಲ್ಲ ಎನ್ನುವ ಮಾತು ಯಾರಿಂದಲೂ ಬರಬಾರದು. ಬಯೋಮೆಟ್ರಿಕ್‌ಗಿಂತ ಒಟಿಪಿಗೆ ಆದ್ಯತೆ ಕೊಡಿ. ಅತೀ ಅಗತ್ಯವಿದ್ದಲ್ಲಿ ಮಾತ್ರ ಸ್ಯಾನಿಟೈಸರ್ ಬಳಕೆ ಮಾಡಿ ಥಂಬ್ ಪಡೆದುಕೊಳ್ಳಿ. ಸರ್ಕಾರ ನಿಗದಿಪಡಿಸಿದ ಪ್ರಮಾಣದಷ್ಟೇ ಧಾನ್ಯ ಹಂಚಿಕೆ ಮಾಡಿ. ಆಹಾರಧಾನ್ಯ ಸಂಗ್ರಹಿಸುವ ಗೋದಾಮುಗಳ ಮ್ಯಾನೇಜರುಗಳು ಸ್ಥಳೀಯವಾಗಿ ವಾಸವಿರಬೇಕು ಎಂದು ಕಿವಿಮಾತು ಹೇಳಿದರು.
ಮುದ್ದೇಬಿಹಾಳ ತಹಶೀಲ್ದಾರ್ ಜಿ.ಎಸ್.ಮಳಗಿ, ತಾಳಿಕೋಟೆ ತಹಶೀಲ್ದಾರ್ ಅನಿಲಕುಮಾರ ಢವಳಗಿ ಮಾತನಾಡಿ, ಪಡಿತರ ಹಂಚಿಕೆ ನ್ಯಾಯಸಮ್ಮತವಾಗಿ ನಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಟಾಸ್ಕ್ ಫೋರ್ಸ್ ರಚಿಸಲಾಗುತ್ತಿದೆ. ಈ ತಂಡದ ಸದಸ್ಯರು ದಿಢೀರ್ ಭೇಟಿ ನೀಡಿ ವರದಿ ಸಂಗ್ರಹಿಸುತ್ತಾರೆ. ತಪ್ಪಿತಸ್ಥರ ಲೈಸನ್ಸ್ ರದ್ದುಪಡಿಸಲು ಜಿಲ್ಲಾ ಧಿಕಾರಿಗೆ
ಶಿಫಾರಸು ಮಾಡುತ್ತಾರೆ. ಕೊರೊನಾ ಸಂದರ್ಭ ಮಾಡುವ ತಪ್ಪುಗಳಿಗೆ ಕ್ಷಮೆ ಇರಲ್ಲ ಎಂದು ತಿಳಿಸಿದರು. ಈ ವೇಳೆ ಕೆಲ ವಿತರಕರು ಮಾತನಾಡಿ, ಹೊಸ ಯೋಜನೆ ಅಳವಡಿಕೆ ಕಷ್ಟಕರವಾಗಬಹುದು ಎಂದರೆ ಮತ್ತೇ ಹಲವರು ಒದೊಂದು ಸೇವೆಗೆ ಸದವಕಾಶವಾಗಿದ್ದು ಮನೆಮೆನೆಗೆ ಪಡಿತರ ತಲುಪಿಸಲು ಪ್ರಯತ್ನ ನಡೆಸುವ ಭರವಸೆ ನೀಡಿದರು.
ಸಿಪಿಐ ಆನಂದ ವಾಗಮೋಡೆ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ತಾಲೂಕು ಬಿಜೆಪಿ ಅಧ್ಯಕ್ಷ ಡಾ| ಪರಶುರಾಮ ಪವಾರ, ಬಿಜೆಪಿ ಧುರೀಣರಾದ ಮಲಕೇಂದ್ರಗೌಡ ಪಾಟೀಲ, ಮನೋಹರ ತುಪ್ಪದ, ತಹಶೀಲ್ದಾರ್ ಕಚೇರಿ ಆಹಾರ ವಿಭಾಗದ ಶಿರಸ್ತೇದಾರ ಎ.ಬಿ.ಹಿರೇಮಠ, ಆಹಾರ ನಿರೀಕ್ಷಕರು, ಗೋದಾಮು ಮ್ಯಾನೇಜರುಗಳು, 250ಕ್ಕೂ ಹೆಚ್ಚು ಪಡಿತರ ಅಂಗಡಿಕಾರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.