ನರ್ಸ್-ವೈದ್ಯರು ದೇವರ ಅವತಾರವಿದ್ದಂತೆ: ಪಾಟೀಲ
Team Udayavani, May 13, 2020, 11:29 AM IST
ಮುದ್ದೇಬಿಹಾಳ: ನರ್ಸ್, ವೈದ್ಯರು ದೇವರ ಅವತಾರವಿದ್ದಂತೆ. ಕೋವಿಡ್ ಸಾಂಕ್ರಾಮಿಕ ಹಾವಳಿ ಸಂದರ್ಭದಲ್ಲಿ ಇವರ ಮಹತ್ವ ಇಡೀ ಜಗತ್ತಿಗೆ ಗೊತ್ತಾಗಿದೆ. ಇವರನ್ನು ಎಲ್ಲರೂ ಗೌರವಿಸಬೇಕು ಎಂದು ಶಾಸಕ ಎ.ಎಸ್ .ಪಾಟೀಲ ನಡಹಳ್ಳಿ ಅವರ ಪತ್ನಿ ಮಹಾದೇವಿ ಪಾಟೀಲ ಹೇಳಿದರು.
ತಾಲೂಕು ಸಾರ್ವಜನಿಕ ಅಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ನರ್ಸ್ ದಿನಾಚರಣೆ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವದ ಮೊದಲ ನರ್ಸ್ ಫ್ಲಾರೆನ್ಸ್ ನೈಟಿಂಗೇಲ್ ಭಾವಚಿತ್ರಕ್ಕೆ ಮೇಣದ ಬತ್ತಿ ಬೆಳಗಿ ಗೌರವ ಸಲ್ಲಿಸಿ ಮಾತನಾಡಿ ಅವರು, ತಮ್ಮ ಆರೋಗ್ಯ ಕಾಳಜಿ ಬದಿಗಿಟ್ಟು ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಇವರ ಸೇವೆ ಅನನ್ಯ. ಇವರೇ ನಿಜವಾದ ಕೋವಿಡ್ ವಾರಿಯರ್ಸ್ ಗಳಾಗಿದ್ದಾರೆ ಎಂದರು.
ಆಸ್ಪತ್ರೆ ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ| ಅನಿಲಕುಮಾರ ಶೇಗುಣಸಿ ಮಾತನಾಡಿ, ಮೇ 12ರಂದು ಫ್ಲಾರೆನ್ಸ್ ಅವರ ಜನ್ಮ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಪ್ರತಿಯೊಬ್ಬ ನರ್ಸಗಳು ಹಾಗೂ ಅವರ ಸೇವೆ ಸ್ಮರಿಸುವ ದಿನ ಇದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಆಸ್ಪತ್ರೆ ಹಿರಿಯ ನರ್ಸ್ ಕೆ.ಡಿ. ಕುಲಕರ್ಣಿ ಅವರನ್ನು ಸಿಬ್ಬಂದಿ ಪರವಾಗಿ ಮಹಾದೇವಿ ಪಾಟೀಲ ಅವರು ಸನ್ಮಾನಿಸಿದರು. ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಬಸಮ್ಮ ಸಿದರಡ್ಡಿ, ಗೌರಮ್ಮ ಹುನಗುಂದ, ನೀಲಮ್ಮ ಚಲವಾದಿ, ಶಿಲ್ಪಾ ಶರ್ಮಾ, ಪ್ರಸನ್ನ ಹಿರೇಮಠ, ಹಿರಿಯ ಶುಶ್ರೂಷಕ ಅಧಿಕಾರಿಗಳಾದ ಬಿ.ಎನ್. ಸಾರವಾಡ, ಸಂಜಯ ಭೋಸಲೆ, ಎಂ.ಬಿ. ಬಾಗವಾನ, ವಿ.ಎಚ್. ಕಿಲಾರಹಟ್ಟಿ, ವೈ.ಎಸ್. ತೊನಶ್ಯಾಳ, ಎಸ್.ಎಸ್. ಮಾಗಿ, ರಾಜಅಹ್ಮದ್ ಖಾಜಿ, ಅಖೀಲಬೇಗಮ್, ಫಾರ್ಮಸಿಸ್ಟ್ ಈರಣ್ಣ ಚಿನಿವಾರ ಸೇರಿದಂತೆ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.