ಗುಳೆ ಹೋದ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ಸೂಚನೆ
ಶಾಸಕ ನಡಹಳ್ಳಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ,ಸ್ವ ಗ್ರಾಮಕ್ಕೆ ಆಗಮಿಸಿದ ಕಾರ್ಮಿಕರಿಗೆ ಉದ್ಯೋಗ ಕೊಡಿ
Team Udayavani, May 1, 2020, 1:39 PM IST
ಮುದ್ದೇಬಿಹಾಳ: ದಾಸೋಹ ನಿಲಯದಲ್ಲಿ ಶಾಸಕ ನಡಹಳ್ಳಿ ಅವರು ಪಿಡಿಒ, ಸರ್ಕಲ್, ಗ್ರಾಮ ಲೆಕ್ಕಿಗರ ಸಭೆ ನಡೆಸಿದರು.
ಮುದ್ದೇಬಿಹಾಳ: ಬೇರೆ ಜಿಲ್ಲೆ, ರಾಜ್ಯಗಳಿಗೆ ದುಡಿಯಲು ಗುಳೇ ಹೋಗಿರುವ ಮುದ್ದೇಬಿಹಾಳ ತಾಲೂಕಿನ ಕೂಲಿ ಕಾರ್ಮಿಕರ ಸಮಗ್ರ ಮಾಹಿತಿ ಸಂಗ್ರಹಿಸಬೇಕು. ಅವರನ್ನು ಸ್ವಗ್ರಾಮಕ್ಕೆ ಕರೆತಂದು ಉದ್ಯೋಗ ಕೊಡಲು ಪಿಡಿಒ, ಗ್ರಾಮಲೆಕ್ಕಿಗರು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಶಾಸಕ ಎ.ಎಸ್.ಪಾಟೀಲ ಸೂಚಿಸಿದ್ದಾರೆ.
ಇಲ್ಲಿನ ದಾಸೋಹ ನಿಲಯದಲ್ಲಿ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳು, ಸರ್ಕಲ್, ಪಿಡಿಒ, ಗ್ರಾಮಲೆಕ್ಕಿಗರ ಸಭೆಯಲ್ಲಿ ಅವರು ಮಾತನಾಡಿದರು. ಗುಳೇ ಹೋದ ಕಾರ್ಮಿಕರ ಪ್ರತಿಯೊಬ್ಬರ ಹೆಸರು, ಮೊಬೈಲ್ ಸಂಖ್ಯೆ, ಅವರು ವಾಸವಿರುವ ಸ್ಥಳ, ಸಮೀಪದ ಬಸ್ ನಿಲ್ದಾಣ ಅಥವಾ ಪೊಲೀಸ್ ಠಾಣೆ, ತಹಶೀಲ್ದಾರ್ ಕಚೇರಿ ಮಾಹಿತಿ ಪಡೆದುಕೊಂಡು ಶನಿವಾರ ಬೆಳಿಗ್ಗೆ 10 ಗಂಟೆಯೊಳಗೆ mailto:mlamuddebihal@gmail.
com ಇ-ಮೇಲ್ ವಿಳಾಸಕ್ಕೆ ಕಳಿಸಬೇಕು. ಒಂದೆರಡು ದಿನದಲ್ಲಿ ಹೆಲ್ಪ್ಲೈನ್ ಪ್ರಾರಂಭಿಸಿ ಎಲ್ಲರನ್ನೂ ಕರೆತರಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು. ಲಾಕ್‌ಡೌನ್ ದಿನದಿಂದ ಈವರೆಗೆ ಅವರು ಇದ್ದಲ್ಲೇ ಲಾಕ್ ಆಗಿದ್ದಾರೆ. ಇದೀಗ ಸರ್ಕಾರ ಅಂತರ್ ಜಿಲ್ಲೆ ಸಂಚಾರಕ್ಕೆ ಅನುಮತಿ ನೀಡಿದೆ. ಅಂತರ್ ರಾಜ್ಯ ಸಂಚಾರಕ್ಕೂ ಅವಕಾಶ ಕಲ್ಪಿಸಿದ್ದು 2-3 ದಿನಗಳಲ್ಲಿ ಈ ಕುರಿತ ಸ್ಪಷ್ಟ ಆದೇಶ ಹೊರಬೀಳಲಿದೆ. ಈ ತಾಲೂಕಿನ ಅಂದಾಜು 10000 ಕೂಲಿ ಕಾರ್ಮಿಕರು ಮರಳಿ ಸ್ವಗ್ರಾಮಕ್ಕೆ ಬರುವ ನಿರೀಕ್ಷೆ ಇದ್ದು, ಎಲ್ಲರಿಗೂ ಆಹಾರ ಸಾಮಗ್ರಿ, ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ ಎಂದರು.
ಬಡಜನರ ರಕ್ಷಣೆ ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ಯಾರೂ ಮೊಬೈಲ್ ನಾಟ್‌ರಿಚೇಬಲ್ ಮಾಡ್ಕೊàಬೇಡಿ. ಅಗತ್ಯ ಬಿದ್ದರೆ ಹೊಸ ಮೊಬೈಲ್, ಸಿಮ್ ಖರೀದಿಸಿ ಬೇರೆ ಜಿಲ್ಲೆ, ರಾಜ್ಯದಲ್ಲಿರುವವರಿಗೆ ಆ ಸಂಖ್ಯೆ ನೀಡಿ ನಿಮ್ಮನ್ನೇ ನೇರವಾಗಿ ಸಂಪರ್ಕಿಸುವಂತೆ ನೋಡಿಕೊಳ್ಳಿ. ಇದರಿಂದ ಗೊಂದಲ ಸೃಷ್ಟಿಯಾಗುವುದಿಲ್ಲ ಮತ್ತು ಅಂಥ ಕಾರ್ಮಿಕರು ಮರಳಿ ಬಂದಾಗ ನಿಮ್ಮ ಸಹಾಯವನ್ನು ಎಂದೂ ಮರೆಯುವುದಿಲ್ಲ. ನಾನು ನಡೆಸುತ್ತಿರುವ ಸಮಾಜ ಸೇವೆ, ದಾಸೋಹ ಸೇವೆಯಲ್ಲಿ ನೀವೂ ಭಾಗಿದಾರರಾಗಿ ಎಂದು ಪ್ರೋತ್ಸಾಹಿಸಿದರು.
ತಹಶೀಲ್ದಾರ್ ಜಿ.ಎಸ್.ಮಳಗಿ ಮಾತನಾಡಿ, ಮೇ 1ರಿಂದ ಪಡಿತರ ವಿತರಣೆ ಪ್ರಾರಂಭಿಸಲಾಗುತ್ತದೆ. ಪ್ರತಿಯೊಂದು ರೇಷನ್ ಅಂಗಡಿ ಎದುರು ಸಾಮಾಜಿಕ ಅಂತರ, ಸ್ಯಾನಿಟೈಸರ್, ನೀರು ಮತ್ತು ನೆರಳಿನ ಲಭ್ಯತೆ ಕಲ್ಪಿಸಿಕೊಡಬೇಕು. ಥಂಬ್ ಪಡೆಯುವುದರ ಬದಲಿಗೆ ಒಟಿಪಿ ಪರಿಗಣಿಸಿ. ಒಟಿಪಿ ಬರದಿ ರುವವರ ನೈಜತೆ ಖಚಿತಪಡಿಸಿಕೊಂಡು ಪಡಿತರ ನೀಡಿ. ಕೂಲಿಕಾರ್ಮಿಕರಿಗೆ ಉದ್ಯೋಗ ನೀಡಿ ಎಂದರು.
ತಾಪಂ ಇಓ ಶಶಿಕಾಂತ ಶಿವಪುರೆ ಮಾತನಾಡಿ, ಊರಲ್ಲಿ ಯಾರೇ ಮೃತಪಟ್ಟರೂ ಸಂಬಂಧಿಸಿದ ಪಿಡಿಒ ಕಡ್ಡಾಯವಾಗಿ ಹಾಜರಿದ್ದು ವರದಿ ಸಲ್ಲಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ
ಸಾಮಾಜಿಕ ಅಂತರ ಕಾಯ್ದುಕೊಂಡು ಕನಿಷ್ಠ 200 ಜನರಿಗೆ ಉದ್ಯೋಗ ಕೊಡಬೇಕು. ಕುಡಿವ ನೀರಿನ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕು. ಅಗತ್ಯಬಿದ್ದರೆ 14ನೇ ಹಣಕಾಸು ಅಡಿ ಖರ್ಚು ಮಾಡಬೇಕು ಎಂದರು.
ಪಿಡಿಒಗಳಾದ ಪಿ.ಎಸ್.ಕಸನಕ್ಕಿ, ನಿಂಗಣ್ಣ ದೊಡಮನಿ, ವೀರೇಶ ಹೂಗಾರ, ಆನಂದ ಹಿರೇಮಠ, ಶೋಭಾ ಮುದಗಲ್, ಬಸವರಾಜ ಕಾಳಗಿ, ಖೂಬಾಸಿಂಗ್ ಜಾಧವ, ಗ್ರಾಮಲೆಕ್ಕಿಗ ಸಿ.ಎಸ್.ಮಠಪತಿ, ಸರ್ಕಲ್ ವೆಂಕಟೇಶ ಅಂಬಿಗೇರ ಮತ್ತಿತರರು ಕೊರೊನಾ ಹಾವಳಿ ತಡೆಗಟ್ಟುವ ಕ್ರಮಗಳು, ಕ್ವಾರೆಂಟೈನ್ ಮಾಡುವ ಪದ್ಧತಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಸಿಪಿಐ ಆನಂದ ವಾಗಮೋಡೆ, ತಾಪಂ ಸಹಾಯಕ ನಿರ್ದೇಶಕ ಪ್ರಕಾಶ ದೇಸಾಯಿ, ಸಮಾಜ ಕಲ್ಯಾಣಾ ಧಿಕಾರಿ ಎನ್.ಆರ್. ಉಂಡಿಗೇರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂಗಮೇಶ ಹೊಲ್ದೂರ ಇದ್ದರು.
ಪಿಡಿಒಗಳು ಪಟ್ಟಿ ಮಾಡುವ ಗ್ರಾಮೀಣ ಭಾಗದ ಅಂದಾಜು 800 ನಿರ್ಗತಿಕರಿಗೆ ಲಾಕಡೌನ್ ಮುಗಿಯುವವರೆಗೂ ಆಹಾರಧಾನ್ಯದ ಕಿಟ್ ವಿತರಿಸಲು ತೀರ್ಮಾನಿಸಿದ್ದು ಈ ಜವಾಬ್ದಾರಿಯನ್ನು ಪಿಡಿಒಗಳು ನಿಭಾಯಿಸಬೇಕು.
ಎ.ಎಸ್.ಪಾಟೀಲ ನಡಹಳ್ಳಿ,
ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕಾಲುವೆಗೆ ಮಕ್ಕಳೊಂದಿಗೆ ತಾಯಿ ಹಾರಿದ ಪ್ರಕರಣ; ನಾಲ್ಕನೇ ಮಗುವಿನ ಶವ ಪತ್ತೆ
Vijayapura: ನಾಲ್ಕು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ; ಮಹಿಳೆ ಬಚಾವ್, 2 ಮಕ್ಕಳು ಸಾವು
Congress Government: ಡಿ.ಕೆ.ಶಿವಕುಮಾರ್ ಎಂದಿಗೂ ಸಿಎಂ ಆಗುವುದಿಲ್ಲ: ಯತ್ನಾಳ್
ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳದ 4-5 ಜನರೇ ಟಾರ್ಗೆಟ್: ಯತ್ನಾಳ್
BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್
MUST WATCH
ಹೊಸ ಸೇರ್ಪಡೆ
ನಗರಸಭೆ ಮತದಾನಕ್ಕೆ ಗೈರು, ಅಡ್ಡ ಮತದಾನ: ನಾಲ್ವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ
Ramesh Bidhuri: ದೆಹಲಿ ಸಿಎಂ ಆತಿಶಿಯನ್ನು ಜಿಂಕೆಗೆ ಹೋಲಿಸಿ ವಿವಾದ ಸೃಷ್ಟಿಸಿದ ಬಿಧೂರಿ
Wayanad Landslide: ನಾಪತ್ತೆ ಆದವರು ಮೃತರೆಂದು ಘೋಷಣೆಗೆ ಕೇರಳ ತೀರ್ಮಾನ
Dharwad: ಕಟಾವಿವೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು
ಗುಜರಾತ್‌ಗೆ ತಲುಪಿಸಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆಯ ವಂಚಿಸಿದ ಖದೀಮರ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.