![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
Team Udayavani, Jun 11, 2020, 11:44 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುದ್ದೇಬಿಹಾಳ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗಾಗಿ ರಿಯಾಯಿತಿ ದರದ ಬಿತ್ತನೆ ಬೀಜ ಪೂರೈಕೆಗೆ ಚಾಲನೆ ನೀಡಲಾಗಿದ್ದುಮ ತಾಲೂಕಿನ ಮುದ್ದೇಬಿಹಾಳ, ತಾಳಿಕೋಟೆ, ಢವಳಗಿ, ನಾಲತವಾಡ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳ ಅಡಿ ಬರುವ ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್. ಯರಝರಿ ಮನವಿ ಮಾಡಿದ್ದಾರೆ.
ತಾಲೂಕಿನ ಢವಳಗಿ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಬಿತ್ತನೆ ಬೀಜ ಪಡೆಯಲು ಆಧಾರ್ ಕಾರ್ಡ್, ಜಮೀನಿನ ಉತಾರ ಸೇರಿದಂತೆ ಅಗತ್ಯ ದಾಖಲೆ ಸಮೇತ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು.
ಬೀಜ ಪಡೆದುಕೊಳ್ಳುವಾಗ ಪ್ರತಿ ರೈತ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂದು ಕಿವಿಮಾತು ಹೇಳಿದರು. ಕೃಷಿ ಅಧಿಕಾರಿ ಪ್ರಭುಗೌಡ ಕಿರದಳ್ಳಿ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಅರಿವು ಮೂಡಿಸಿ ಬಿತ್ತನೆ ಪೂರ್ವ ಬೀಜೋಪಚಾರದ ಮಹತ್ವ ತಿಳಿಸಿಕೊಟ್ಟರು. ಕೃಷಿ ಅ ಧಿಕಾರಿ ಬಸವರಾಜ ಟಕ್ಕಳಕಿ, ಸಂಗಮೇಶ ಸಜ್ಜನ, ಎಸ್.ಎಸ್. ಚೌಧರಿ, ಶರಣಬಸು ಪಾಟೀಲ, ನಾಗರಾಜ ಹಳಬರ, ರೈತರಾದ ಶಿವಬಸಪ್ಪ ಮೇಟಿ, ನಡಿಗೇರಪ್ಪ ಬೀರಗೊಂಡ ಮತ್ತಿತರರು ಇದ್ದರು.
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ
You seem to have an Ad Blocker on.
To continue reading, please turn it off or whitelist Udayavani.