ಕೋವಿಡ್ : ಬಸರಕೋಡ-ಕಾಳಗಿಯಲ್ಲಿ ಸೀಲ್‌ಡೌನ್
Team Udayavani, Jun 6, 2020, 11:15 AM IST
ಸಾಂದರ್ಭಿಕ ಚಿತ್ರ
ಮುದ್ದೇಬಿಹಾಳ: 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದ ನಾಲ್ವರಿಗೆ ಕೋವಿಡ್ ಸೋಂಕಿನ ಪಾಸಿಟಿವ್ ಕಂಡು ಬಂದಿದ್ದರಿಂದ ಅವರು ವಾಸವಿದ್ದ ಪ್ರದೇಶ, ಗ್ರಾಮವನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕಾಡಳಿತ ಶುಕ್ರವಾರ ಸೀಲ್‌ಡೌನ್ ಮಾಡಿದೆ.
ಮಹಾರಾಷ್ಟ್ರದ ಮುಂಬೈನಿಂದ ಮರಳಿ ಬಂದಿದ್ದ ಇವರೆಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಟ್ಟು 14ನೇ ದಿನ ಗಂಟಲುದ್ರವದ ಮಾದರಿ ಸಂಗ್ರಹಿಸಿ 7 ದಿನಗಳ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ತಿಳಿಸಿ ಮನೆಗೆ ಕಳಿಸಲಾಗಿತ್ತು. ಇದೀಗ ಇವರ ಗಂಟಲು ದ್ರವದ ವರದಿ ಪಾಸಿಟಿವ್ ಬಂದಿದ್ದರಿಂದ ತಾಲೂಕಾಡಳಿತ ಈ ಕ್ರಮ ಕೈಗೊಂಡಿದೆ. ಬಸರಕೋಡದಲ್ಲಿ ಒಂದು ಪ್ರಕರಣ ವರದಿಯಾಗಿದ್ದರಿಂದ ಅದೇ ಗ್ರಾಮದವರಾಗಿರುವ ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಪಿಡಿಒ ಎಸ್.ಐ. ಹಿರೇಮಠ ಅವರು ಮುಂದೆ ನಿಂತು ಸೋಂಕು ವರದಿಯಾದ ವ್ಯಕ್ತಿ ವಾಸವಿದ್ದ ಪ್ರದೇಶವನ್ನು ಸೀಲ್‌ಡೌನ್ ಮಾಡಿಸಿ ಜನರಲ್ಲಿ ಮೂಡಿದ್ದ ಆತಂಕ ನಿವಾರಿಸಿದರು.
ಯರಝರಿ ಗ್ರಾಪಂ ವ್ಯಾಪ್ತಿಯ ಚಿರ್ಚನಕಲ್ ಗ್ರಾಮದಲ್ಲೂ ಒಂದು ಪ್ರಕರಣ ವರದಿಯಾದ ಹಿನ್ನೆಲೆ ಅಲ್ಲಿಯೂ ಭಾಗಶಃ ಸೀಲ್ ಡೌನ್ ಮಾಡಲಾಗಿದೆ. ಕಾಳಗಿಯಲ್ಲಿ ಎರಡು ಪ್ರಕರಣ ವರದಿಯಾದ ಹಿನ್ನೆಲೆ ಬಹುತೇಕ ಇಡಿ ಗ್ರಾಮವನ್ನೇ ಸೀಲ್‌ಡೌನ್ ಮಾಡಲಾಗಿದೆ. ಈ ಹಿಂದೆ ಸರೂರ ತಾಂಡಾದಲ್ಲಿ ಪಾಸಿಟಿವ್ ಪ್ರಕರಣ ಕಂಡುಬಂದಾಗ ಇಡಿ ತಾಂಡಾವನ್ನು ವಾರದವರೆಗೆ ಸೀಲ್‌ಡೌನ್ ಮಾಡಲಾಗಿತ್ತು. ಈಗ ಸೀಲ್‌ಡೌನ್ ಮಾಡಿರುವ ಗ್ರಾಮಗಳಲ್ಲಿ ಜಿಲ್ಲಾಧಿಕಾರಿಗಳ ಆದೇಶ ಬರುವವರೆಗೂ ಸೀಲ್‌ಡೌನ್ ಮುಂದುವರಿಯಲಿದೆ. ಸೀಲ್ ಡೌನ್ ಏರಿಯಾದಲ್ಲಿ ಇರುವ ಜನರ ನಿತ್ಯದ ಜೀವನಕ್ಕೆ ಆವಶ್ಯಕ ವಸ್ತು, ಸಾಮಗ್ರಿ ಪೂರೈಸಲು ಆಯಾ ಗ್ರಾಪಂ ಪಿಡಿಒಗಳಿಗೆ ಜವಾಬ್ದಾರಿ ವಹಿಸಲಾಗಿದೆ.
ತಹಶೀಲ್ದಾರ್ ಜಿ.ಎಸ್. ಮಳಗಿ, ಸಿಪಿಐ ಆನಂದ ವಾಗಮೋಡೆ, ಆಯಾ ಗ್ರಾಪಂ ಪಿಡಿಒಗಳು, ಪಂಚಾಯತ್ ಸಿಬ್ಬಂದಿ ಸೀಲ್ ಡೌನ್‌ಗೆ ಸಹಕರಿಸಿದರು. ಪಾಜಿಟಿವ್ ಪ್ರಕರಣ ಕಾಣಿಸಿಕೊಂಡಿರುವ ಎಲ್ಲರನ್ನೂ ವಿಜಯಪುರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.