ಸಂಚಾರ ನಿಯಂತ್ರಣಕ್ಕೆ ಪುರಸಭೆ ಗಾರ್ಡ್‌

ಟಿಎಂಸಿ ಗಾರ್ಡ್‌ ಪರಿಕಲ್ಪನೆಗೆ ಸಿಪಿಐ-ಸಿಒ ಚಾಲನೆ

Team Udayavani, Oct 28, 2020, 4:24 PM IST

ಸಂಚಾರ ನಿಯಂತ್ರಣಕ್ಕೆ ಪುರಸಭೆ ಗಾರ್ಡ್‌

ಮುದ್ದೇಬಿಹಾಳ: ಪಟ್ಟಣದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್‌, ಬೀದಿ ಬದಿ ವ್ಯಾಪಾರಿಗಳ ಬೇಕಾಬಿಟ್ಟಿವ್ಯಾಪಾರ ನಿಯಂತ್ರಿಸಲು ಹಾಗೂ ಮಾರುಕಟ್ಟೆಯಲ್ಲಿ ಸುವ್ಯವಸ್ಥೆ ಜಾರಿಗೊಳಿಸಲು ಇಲ್ಲಿನ ಪುರಸಭೆಯು ಪುರಸಭೆ ಗಾರ್ಡ್‌ (ಟಿಎಂಸಿ ಗಾರ್ಡ್‌) ಪರಿಕಲ್ಪನೆ ಜಾರಿಗೊಳಿಸಿದೆ. ಸಿಪಿಐ ಆನಂದ ವಾಗಮೋಡೆಅವರು ಪುರಸಭೆ ಮುಖ್ಯಾ ಧಿಕಾರಿ ಗೋಪಾಲ ಕಾಸೆ ಅವರ ಈ ವಿನೂತನ ಪರಿಕಲ್ಪನೆಗೆ ಮಂಗಳವಾರ ಚಾಲನೆ ನೀಡಿದ್ದಾರೆ.

ಈ ಗಾರ್ಡ್‌ಗಳು ಬುಧವಾರದಿಂದ ರಸ್ತೆಗಿಳಿದು ಪೊಲೀಸರ ಮಾದರಿಯಲ್ಲಿ ಸುವ್ಯವಸ್ಥೆಗೆ ಶ್ರಮಿಸಲಿದ್ದಾರೆ. ಇದಕ್ಕಾಗಿ ಪುರಸಭೆ ಸಿಬ್ಬಂದಿಗಳ ಪೈಕಿ ಲೋಕೇಶ ಮುರಾಳ, ಗದ್ದೆಪ್ಪ ಇಂದವಾರ, ವೀರೇಶ ಹಿರೇಮಠ, ಬಸವರಾಜ ಚಲವಾದಿ, ವಿಶ್ವನಾಥ ಚಲವಾದಿ, ರಾಮಚಂದ್ರ ಬಡಿಗೇರ ಅವರನ್ನು ಆಯ್ಕೆ ಮಾಡಲಾಗಿದೆ. ಇವರಿಗೆ ಸೈನಿಕರು, ಭದ್ರತಾ ಸಿಬ್ಬಂದಿ ಬಳಸುವ ಸಮವಸ್ತ್ರದ  ಧಿರಿಸನ್ನುಒದಗಿಸಲಾಗಿದೆ. ಬೆಳಗಿನ ಶಿಫ್ಟ್‌ಗೆ 3, ಸಂಜೆ ಶಿಫ್ಟ್‌ಗೆ 3 ಜನರಂತೆ ಲಾಠಿ ಹಿಡಿದು ಕೆಲಸ ಮಾಡಲಿದ್ದಾರೆ. ಪಟ್ಟಣದ ಬಸವೇಶ್ವರ ವೃತ್ತದಿಂದ ಬಸ್‌ ನಿಲ್ದಾಣ, ಮಾರ್ಕೆಟ್‌ ರಸ್ತೆಯಲ್ಲಿ ಸಾಕಷ್ಟು ಟ್ರಾಫಿಕ್‌ಇರುತ್ತದೆ.

ಅನೇಕ ಬಾರಿ ಈ ಟ್ರಾಫಿಕ್‌ನಿಂದ ಸಮಸ್ಯೆ ತಲೆದೋರಿ ಜನ ಪುರಸಭೆ, ಪೊಲೀಸರನ್ನು ದೂರುವಂತಾಗಿತ್ತು. ಪೊಲೀಸರು ಅವಕಾಶ ಸಿಕ್ಕಾಗಲೆಲ್ಲ ಟ್ರಾಫಿಕ್‌ ನಿಯಂತ್ರಿಸುತ್ತಿದ್ದರೂ ಪರಿಣಾಮಕಾರಿಯಾಗಿರಲಿಲ್ಲ. ಇದನ್ನು ಮನಗಂಡು ಟಿಎಂಸಿ ಗಾರ್ಡ್‌ ಯೋಜನೆ ಜಾರಿಗೆ ತರಲಾಗಿದೆ. ಪೂರ್ಣ ಸಮವಸ್ತ್ರದಲ್ಲಿರುವ ಇವರು ಪೊಲೀಸರಂತೆ ಟ್ರಾಫಿಕ್‌ ನಿಯಂತ್ರಿಸುವ ಕೆಲಸ ಮಾಡಲಿದ್ದಾರೆ. ಸಾರ್ವಜನಿಕರು ಇವರಿಗೆ ಸಹಕರಿಸಬೇಕು ಎಂದು ಸಿಪಿಐ ಆನಂದ ವಾಗಮೋಡೆ ಹೇಳಿದರು.

ಈ ಪರಿಕಲ್ಪನೆ ಕುರಿತು ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಟ್ರಾಫಿಕ್‌ ನಿಯಂತ್ರಣದ ಜೊತೆಗೆ ಬಸವೇಶ್ವರ ವೃತ್ತ, ಕಾಯಿಪಲ್ಯೆ ಮಾರುಕಟ್ಟೆ ಸೇರಿ ಹಲವೆಡೆ ಬೇಕಾಬಿಟ್ಟಿ ವ್ಯಾಪಾರ ನಡೆದು ಜನಸಂಚಾರಕ್ಕೆ ತೊಂದರೆ ಆಗಿತ್ತು. ಇದನ್ನು ನಿಯಂತ್ರಿಸಲು, ಬೀದಿ ಬದಿ ಅಂಗಡಿಗಳನ್ನು ಜನರಿಗೆ ತೊಂದರೆ ಆಗದಂತೆ ಹಚ್ಚಲು, ಪೌರ ಕಾರ್ಮಿಕರ ಸ್ವತ್ಛತಾ ವೈಖರಿ ಗಮನಿಸಲು, ಪಟ್ಟಣದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆದರೆ ಸಹಕರಿಸಲು ಈ ಗಾರ್ಡ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಇವರಿಗೆ ಬೆಂಗಳೂರಿನ ಪೊಲೀಸ್‌ ಸಮವಸ್ತ್ರದ ಅಂಗಡಿಯಿಂದ ಎರಡುಜೊತೆ ಸಮವಸ್ತ್ರ, ಬೂಟು, ಸಾಕ್ಸ್‌, ಬೆಲ್ಟ್, ಕ್ಯಾಪ್‌, ಲಾಠಿ ಒದಗಿಸಲಾಗಿದೆ. ಐಡಿ ಕಾರ್ಡ್‌ ಕೂಡ ಕೊಡಲಾಗಿದೆ. ಇದೊಂದು ವಿನೂತನ ವ್ಯವಸ್ಥೆಆಗಿದ್ದು ಯಶಸ್ಸು ನೋಡಿಕೊಂಡು ಗಾರ್ಡ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ. ಸಾರ್ವಜನಿಕರು, ವ್ಯಾಪಾರಸ್ಥರು ಸಹಕರಿಸಬೇಕು ಎಂದರು.

ಪುರಸಭೆ ಕಂದಾಯ ಅಧಿಕಾರಿ ಎಂ.ಬಿ. ಮಾಡಗಿ, ಮುಖ್ಯ ಸಿಬ್ಬಂದಿ ರಮೇಶ ಮಾಡಬಾಳ, ಆರೋಗ್ಯಾಧಿ ಕಾರಿಗಳಾದ ಮಹಾಂತೇಶ ಕಟ್ಟಿಮನಿ, ನಾಕ್ಕೋಡಿ ಸೇರಿ ಪುರಸಭೆ ಎಲ್ಲ ಸಿಬ್ಬಂದಿ ಇದ್ದರು.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.