Muslim ಓಲೈಕೆ ಮಾಡಿದರೆ ಬಾಂಗ್ಲಾದಂತೆ ನಮ್ಮಲ್ಲೂ ದೇವಸ್ಥಾನಕ್ಕೆ ಬೆಂಕಿ: ಯತ್ನಾಳ್
ಅವರು 50% ಆದರೆ ಸಿದ್ದರಾಮಯ್ಯನ್ನ ಒದ್ದು ಇಳಿಸಿ, ಜಮೀರ್ ಮುಖ್ಯಮಂತ್ರಿ...
Team Udayavani, Aug 15, 2024, 8:40 PM IST
ವಿಜಯಪುರ :‘ಮುಸ್ಲಿಂ ಓಲೈಕೆಯಿಂದ, ನಿಮ್ಮ ದೇವರ ಗುಡೀನೆ ಉಳಿಯೋದಿಲ್ಲ. ಯಾವ ದೇವರಿಗೆ ಹೋಗಿ ಕೈ ಮುಗಿಯುವವರು ಇದ್ದೀರಾ. ಬಾಂಗ್ಲಾದಲ್ಲಿ ಏನಾಯ್ತು? ಸ್ವಾಮಿ ನಾರಾಯಣ ಟೆಂಪಲ್ 2 ಸಾವಿರ ಕೋಟಿ ರೂಪಾಯಿ ದೇವಸ್ಥಾನ, ಮುಸ್ಲಿಮರಿಗೆಗೆ ಅಲ್ಲಿ ಅನ್ನ ಹಾಕಿದರೂ ಅವರು ದೇವಸ್ಥಾನಕ್ಕೆ ಬೆಂಕಿ ಹಚ್ಚಿದರು, ನಾನೇನು ಸುಳ್ಳು ಹೇಳುತ್ತಿಲ್ಲ” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿ ಕಾರಿದ್ದಾರೆ.
ಗುರುವಾರ ನಗರದಲ್ಲಿ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ಇದೇ ರೀತಿ ಆಗಿದ್ದಾಗ ಸುಳ್ಳು, ಕಾಶ್ಮೀರ್ ಫೈಲ್ಸ್ ಬಂದಾಗ, ಕೇರಳಾದಲ್ಲಿ ಆಗಿದ್ದು ಅದು ಸುಳ್ಳು. ಈಗ ಬಾಂಗ್ಲಾದಲ್ಲಿ ಏನಾಗ್ತಿದೆ ನೋಡ್ತಿದ್ದೀರಲ್ಲ ಎಂದರು.
ಪಶ್ಚಿಮ ಬಂಗಾಳದಲ್ಲಿ ಹಿಂದೂಗಳದು ಸ್ಥಿತಿ ಏನಾಗಿದೆ, 2047ಕ್ಕೆ ಭಾರತವನ್ನ ನಾವು ಇಸ್ಲಾಂ ರಾಷ್ಟ್ರ ಮಾಡುತ್ತೇವೆ ಹೇಳುತ್ತಾರೆ. ಕಾರಣ ನೀವು ಒಂದೇ ಮದುವೆ ಹಾಗೂ ಎರಡೇ ಮಕ್ಕಳು ಮಾಡಿಕೊಳ್ಳಿ. ಅವರು 5 ಮದುವೆ ಆಗುತ್ತಾರೆ, 25 ತಗೀತಾರ. ನಮ್ಮ ಮಕ್ಕಳು ಎಲ್ಲಾ ಟ್ಯಾಕ್ಸ್ ಕಟ್ಟೋದು, ಸಬ್ಸಿಡಿ ಅವರಿಗೇ, ರೇಶನ್ನು ಅವರಿಗೇ ಎಂದು ಕಿಡಿ ಕಾರಿದರು.
ಇದೇ ವೇಳೆ ಮುಸ್ಲಿಂ ಸಮಾಜದ ಮಾಜಿ ಕಾರ್ಪೋರೇಟರ್ ಜತೆ ಬಿಜೆಪಿ ಹಾಲಿ ಕಾರ್ಪೋರೇಟರ್ ಶಿವರುದರ ಬಾಗಲಕೋಟ ಅವರ ಒಡನಾಟ ಪ್ರಸ್ತಾಪಿಸಿ ಕುಟುಕಿದ ಯತ್ನಾಳ, ನೀವು ಭಾಳ ಭಯ್ಯಾ ಅಂತ ಬೆನ್ನು ಹತ್ತಿರುವುದು ಗೊತ್ತಾದರೆ ಟಿಕಿಟ್ ಕಟ್ ಆಗ್ತೇತಿ ಎಂದು ಎಚ್ಚರಿಕೆ ಎಂದರು.
ನಮಗೆ ಎಲ್ಲಾ ಮಾಹಿತಿ ಬರುತ್ತವೆ. ನಮ್ಮ ಜನರು ಮತ ಹಾಕಿದ್ದಾರೆ, ಅವರ ಕೆಲಸ ಮಾಡಬೇಕು. ಅವರಿಗಿ ರೊಟ್ಟಿ ತಿನ್ನಿಸಿ, ಮರಾಠಾ ಸಮಾಜದವರು ಮಟನ್ ಮಾಡಿದರೆ ಮಟನ್ ತಿಂದು ಬನ್ನಿ ಎಂದು ಕುಟುಕಿದ ಅವರು, ನಮಗೆ ಎಂದಿಗೂ ಮುಸ್ಲಿಮರ ಮತಗಳು ಬರುವುದಿಲ್ಲ ಎಂದು ಹರಿಹಾಯ್ದರು.
”ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಇಲ್ಲ, ಹಿಂದೂವೋಂಕೆ ಸಾಥ್, ಹಿಂದೂವೊಂಕೆ ವಿಕಾಸ್, ದೇಶದ್ರೋಹಿಯೋಂಕೋ ಲಾತ್ ಇದು ನನ್ನ ಸ್ಲೋಗನ್” ಎಂದ ಯತ್ನಾಳ, ಈಚೆಗೆ ನಡೆದ ವಿಧಾಸಭೆ ಅಧಿವೇಶನದಲ್ಲೂ ನಾನು ಕ್ಲೀನ್ ಇಂಡಿಯಾ, ಕ್ಲೀನ್ ಕರ್ನಾಟಕ, ಕ್ಲೀನ್ ಆಲ್ ಪಾರ್ಟಿ ಬಗ್ಗೆಯೇ ಮಾತನಾಡಿದ್ದೇನೆ ಎಂದು ಪರೋಕ್ಷವಾಗಿ ಸ್ವಪಕ್ಷೀಯರ ವಿರುದ್ಧವೂ ಪರೋಕ್ಷವಾಗಿ ಟಾಂಗ್ ನೀಡಿದರು.
ಒಪ್ಪಂದ ಮಾಡಿಕೊಳ್ಳುವ ಪಕ್ಷಗಳ ಮುಖಂಡರು ಒಂದು ಒಪ್ಪಂದ ಪಾರ್ಟಿ ಮಾಡಿಕೊಂಡು ರಾಷ್ಟ್ರಾಧ್ಯಕ್ಷ, ರಾಜ್ಯಾಧ್ಯಕ್ಷ ಮಾಡಿಕೊಳ್ಳಲಿ. ನಾಳೆ ಸಿದ್ರಾಮಯ್ಯ ಮುಂದಿನ ಜನ್ಮ ಇದ್ದರ, ನಾ ಸಾಬ್ ಆಗಿ ಹುಟ್ತೀನಿ ಅಂತ ಹೇಳಿದ್ದಾರೆ.ಭಾರತದಲ್ಲಿ ಅವರು 50% ಆದರೆ ಸಿದ್ದರಾಮಯ್ಯನ್ನ ಒದ್ದು ಇಳಿಸಿ, ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಆಗಲಿದ್ದು, ಆಗ ಸಿದ್ದರಾಮಯ್ಯ ಅವರನ್ನು ಮನೆಯಲ್ಲಿ ಚಾ ತರಲು ಇಡುತ್ತಾರೆ. ಇದನ್ನು ತಲೆಯಲ್ಲಿ ಇರಿಸಿಕೊಳ್ಳಿ ಎಂದು ಹೇಳಿದ್ದೇನೆ ಎಂದರು.
”ಏನ್ರೀ ಸಿದ್ರಾಮಯ್ಯನವರೆ, ಮುಂದಿನ ಜನ್ಮ, ಮುಂದಿನ ಜನ್ಮ.. ನೀವು ಹುಟ್ಟಿದರಲ್ಲ, ದೇವರು ನಿಮ್ಮಂಥವರನ್ನೆಲ್ಲ ಹೇಗೆ ಹುಟ್ಟಿಸುತ್ತಾನೆ? ಸಾಕಾಗ್ಯಾದಪ, ಬರೇ ಸಾಬರದ್ದೇ ಕೆಲಸ ಮಾಡೀದಿ, ಪಾಪ ಹಾಲುಮತದವರ ಕೆಲಸ ಮಾಡಿಲ್ಲಂತ ರಿಜೆಕ್ಟ್ ಮಾಡ್ತಾನ. ಅದು ಇದು ಮಾಡ್ತಾನಲ್ಲ ಎಂದು ಚಿತ್ರಗುಪ್ತ ಹೇಳ್ತಾನ” ಎಂದು ವ್ಯಂಗ್ಯವಾಡಿ, ಹಿಂದೂಗಳು ಕುರುಬ, ಲಿಂಗಾಯತ ಅಂತೆಲ್ಲ ಬಿಟ್ಟು, ಎಲ್ಲರೂ ಒಗ್ಗಟ್ಟಾಗಿರಿ, ಜಾತಿ ಬಿಟ್ಟು ಒಂದಾಗಿ ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.