ಮೋದಿ ಆಯುಷ್ಯ-ಆರೋಗ್ಯವೃದ್ದಿಗಾಗಿ ಮೃತ್ಯುಂಜಯ ಹೋಮ
Team Udayavani, Jan 8, 2022, 10:40 PM IST
ವಿಜಯಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಆಯುರಾರೋಗ್ಯ ವೃದ್ಧಿಗೆ ಪ್ರಾರ್ಥಿಸಲು ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಶುಕ್ರವಾರ ನಗರದ ಶಂಕರಲಿಂಗ ದೇವಸ್ಥಾನದಲ್ಲಿ ಮಹಿಳೆಯರು ಸಾಮೂಹಿಕ ಮಹಾಮೃತ್ಯುಂಜಯ ಮಂತ್ರ ಜಪಸಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ಪಂಜಾಬ್ ಪ್ರವಾಸದ ವೇಳೆ ಭದ್ರತೆಯಲ್ಲಿ ಅತ್ಯಂತ ಘನಗೋರ ಲೋಪವಾಗಿದ್ದು ಖಂಡನೀಯ. ದೇವರ ಕೃಪೆಯಿಂದ ಪ್ರಧಾನಮಂತ್ರಿಗಳು ಸುರಕ್ಷಿತವಾಗಿ ಮರಳುವಂತಾಯಿತು, ಕೆಲವೊಂದು ಮಹತ್ವಪೂರ್ಣ ವಾಸ್ತವಾವಂಶದ ಆಧಾರದಲ್ಲಿ ಪಂಜಾಬಿನ ಕಾಂಗ್ರೆಸ್ ಸರ್ಕಾರ ಪ್ರಧಾನಿ ಮೋದಿ ಅವರ ಭದ್ರತೆಯಲ್ಲಿ ಘೋರ ಲೋಪ ಎಸಗಿದೆ ಎಂದು ಕಿಡಿ ಕಾರಿದರು. ಪಂಜಾಬ್‌ನಲ್ಲಿ ಅಲ್ಲಿನ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕ ನಿರ್ಲಕ್ಷé ವಹಿಸಿರುವುದು ಸ್ಪಷ್ಟವಾಗಿದೆ.
ಈ ಘಟನೆ ಇಡಿ ದೇಶ ಒಕ್ಕೊರಲಿನಿಂದ ಖಂಡಿಸುತ್ತಿದೆ ಕೂಡಲೇ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಪಂಜಾಬಿನ ಕಾಂಗ್ರೆಸ್ ಸರ್ಕಾರವನ್ನು ಕಿತ್ತೂಗೆಯಬೇಕೆಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಜೋಗೂರ, ಭಾರತಿ ಭುಯ್ನಾರ, ಗೀತಾ ಕುಗನೂರ, ಶಾಂತಾ ಉತ್ಲಾಸ್ಕರ, ರಜನಿ ಸಂಬಂಣ್ಣಿ, ಸುಮಂಗಲಾ ಕೋಟಿ, ಮಲ್ಲಮ್ಮ ಜೋಗೂರ, ಸಂಜಯ ಪಾಟೀಲ ಕನಮಡಿ, ಮಳುಗೌಡ ಪಾಟೀಲ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರಾಜಶೇಖರ ದೇವಗಿರಿ, ರಾಜು ಮಗಿಮಠ, ರಾಹುಲ್ ಜಾಧವ, ಸೂರಪ್ಪ ಮಿರ್ಜಿ, ಗುರು ಗಚ್ಚಿನಮಠ, ವಿಜಯ ಜೋಶಿ, ಪ್ರವೀಣ ಹೆರಲಗಿ, ವಿನಾಯಕ ದಹಿಂಡೆ, ರಾಜೇಶ ತವಸೆ, ಕೃಷ್ಣಾ ಗುನ್ಹಾಳಕರ, ಸಿದ್ದು ಮಲ್ಲಿಕಾರ್ಜುನಮಠ, ಛಾಯಾ ಮಸಿಯಣ್ಣವರ, ಸಂಗು ಉಕ್ಕಲಿ, ಸಂತೋಶ ನಿಂಬರಗಿ, ಅಡಿವೆಪ್ಪ ಗಿಡವೀರ, ಸುವರ್ಣ ಕುರ್ಲೆ, ಸಂತೋಷ ಹುಣಶ್ಯಾಳ, ಅಮೀತ ಕುರ್ಲೆ, ಸಿದ್ದು ಬೆಲ್ಲದ, ಗಿರೀಶ ಕುಲಕರ್ಣಿ, ಅನೀತಾ ಜಾಲವಾದಿ, ಸಮೀರ ಕುಲಕರ್ಣಿ, ಭಾರತಿ ಗಿಡವೀರ, ಗೀತಾ ಗಿಡವೀರ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.