ನಾಡಗೌಡ ಮೌನಿಬಾಬಾ- ನಡಹಳ್ಳಿ ಡೋಂಗಿಬಾಬಾ: ವಾಲಿ
Team Udayavani, Feb 27, 2018, 3:30 PM IST
ತಾಳಿಕೋಟೆ: ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 25 ವರ್ಷದಿಂದ ಆಳ್ವಿಕೆ ಮಾಡುತ್ತಿರುವ ಶಾಸಕ ಸಿ.ಎಸ್. ನಾಡಗೌಡರು ಇನ್ನೂ ಬ್ರಿಟಿಷರ ರೀತಿ ಪಾಳೆಗಾರಿಕೆ ಆಡಳಿತ ನಡೆಸಿದ್ದರೆ, ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಕ್ಷೇತ್ರವನ್ನು ಹಾಳುಗೆಡುವಿ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಲು ಹೊರಟಿದ್ದಾರೆ. ಒಬ್ಬರು ಮೌನಿ ಬಾಬಾರಂತೆ ವರ್ತನೆ ಮಾಡಿದರೆ ಇನ್ನೊಬ್ಬರು ಡೋಂಗಿ ಬಾಬಾರಂತೆ ವರ್ತಿಸುತ್ತಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಶಿವಾನಂದ ವಾಲಿ ವ್ಯಂಗ್ಯವಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುದ್ದೇಬಿಹಾಳ ಮತಕ್ಷೇತ್ರದ ನಾಲತವಾಡ ಭಾಗದಲ್ಲಿ ಇನ್ನೂ ನಾಡಗೌಡ ಪಾಳೆಗಾರಿಕೆ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ವಿರುದ್ಧ ಯಾರೂ ಪ್ರಶ್ನೆ ಮಾಡದಂತೆ ಮಾಡಿದ್ದಾರೆ.
ಉತ್ತಮ ಸಮಾಜಕ್ಕೋಸ್ಕರ ಜನ ಜಾಗೃತಿ ಅಭಿಯಾನ ನಿಮಿತ್ತ ನಾಲತವಾಡಕ್ಕೆ ತೆರಳಿದಾಗ ಬೆಂಬಲಿಗರೊಬ್ಬರು ನಾಡಗೌಡರ ಬಗ್ಗೆ ಯಾವುದೇ ರೀತಿ ಪ್ರಶ್ನೆ ಮಾಡಬೇಡಿ. ನಿನ್ನನ್ನು ಜೀವಂತ ಹೋಗಲು ಅವರು ಬಿಡುವುದಿಲ್ಲ ಎಂಬ ಬೆದರಿಕೆ ಮಾತು ಹೇಳುತ್ತಾರೆ. ಪ್ರಶ್ನಾತೀತ ನಾಯಕರೆಂದು ಹೇಳಿಕೊಳ್ಳುವ ನಾಡಗೌಡರು ಜನರು ಪ್ರಶ್ನೆ ಮಾಡದ ಹಾಗೆ ಅಭಿವೃದ್ಧಿ ಮಾಡಿಲ್ಲ, ಕೇವಲ ಭಯ ಹುಟ್ಟಿಸುವ ರೀತಿಯಲ್ಲಿ ಕಾಪಾಡಿಕೊಂಡು ಮುನ್ನಡೆದಿದ್ದಾರೆ ಎಂದರು.
ಸಹೋದರ ಪೃಥ್ವಿರಾಜ್ ನಾಡಗೌಡ ನಾಲತವಾಡ ಪಪಂ ಅಧ್ಯಕ್ಷರಾಗಿದ್ದು ಅರ್ಹರಿಗೆ ಮನೆ ಹಂಚಿಲ್ಲ. ಕೆಲ ಕುಟುಂಬಗಳು ಅಂಗವಿಕಲತೆಯಿಂದ ಹಾಗೂ ಫಾರ್ಸಿಯಿಂದ ಬಳಲುತ್ತಿದ್ದು ಅಂತವರಿಗೂ ಮನೆಗಳು ಸಿಕ್ಕಿಲ್ಲ. ಶಾಸಕ ನಾಡಗೌಡರು ದೆಹಲಿ ವಿಶೇಷ ಪ್ರತಿನಿಧಿಯಾಗಿ ಟಪಾಲು ಕೊಡುವ ಕೆಲಸ ಮಾಡುತ್ತಿದ್ದಾರೆ ಹೊರತು ಕ್ಷೇತ್ರದಲ್ಲಿ ಜನರ ಸಮಸ್ಯೆಗಳು ಅವರಿಗೆ ಗೊತ್ತಿಲ್ಲ ಎಂದು ದೂರಿದರು.
ಅಡವಿಸೋಮನಾಳ ಗ್ರಾಮದಲ್ಲಿ 10 ವರ್ಷದ ಹಿಂದೆಯೇ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಕಟ್ಟಡ ಕಟ್ಟಲಾಗಿದೆ. ಆದರೆ ಅದು ಬಳಕೆಯಾಗದೇ ದುಸ್ಥಿತಿಗೆ ಬರುತ್ತಿದೆ. ಉದ್ಘಾಟನೆ ಮಾತ್ರ ಕಾಣುತ್ತಿಲ್ಲ. ಇನ್ನೂ ಕೆಲ ಕನ್ನಡ ಶಾಲೆಗಳಲ್ಲಿ ಪುಂಡ ಪೋಕರಿಗಳು ದಾರು ಕುಡಿದು ಜೂಜಾಡುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಬೀಟ್ ಹಾಕಿರಿ ಎಂದು ದೂರು ನೀಡಿದರೂ ಪ್ರಯೋಜನೆಯಾಗಿಲ್ಲ ಎಂದರು.
ಜಮೀನಿಗೆ ಸಂಬಂಧಿಸಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲು ಬಂದ ವ್ಯಕ್ತಿಯೊಬ್ಬನಿಗೆ ಶಾಸಕ ನಡಹಳ್ಳಿ ಕಪಾಳ ಮೋಕ್ಷ ಮಾಡಿದ್ದಾರೆ. ಎಲ್ಲ ಅಧಿಕಾರಿಗಳನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ದಬ್ಟಾಳಿಕೆ ಮಾಡುತ್ತಿದ್ದಾರೆ. ಜನಜಾಗೃತಿ ಅಭಿಯಾನ ಕೈಗೊಂಡರೆ ವಾಲಿ ಹಿಂದೆ ಯಾರೂ ಹೋಗಬ್ಯಾಡ್ರಿ, ನಿಮಗೆ ಏಷ್ಟು ದುಡ್ಡು ಬೇಕು ಹೇಳಿಕೆ ಎಂದು ಅವರನ್ನು ನನ್ನಿಂದ ದೂರಸರಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ನಾನು ಕೈಗೊಂಡಿರುವ ಈ ಜನ ಜಾಗೃತಿ ಉದ್ದೇಶ ನಾಡಗೌಡ ನಡಹಳ್ಳಿ ಹಟಾವೋ ಮುದ್ದೇಬಿಹಾಳ ಬಚಾವೋ ಹೊಂದಿದೆ. ಈ ಇಬ್ಬರೂ ಶಾಸಕರು ಮಾವಿನಗಿಡದ ಹಾಗಿಲ್ಲ, ಬೇವಿನ ಗಿಡದ ಹಾಗೆ ವಿಷ ಕಾರುವವರಾಗಿದ್ದಾರೆ. ಮುಂದೆಯೂ ಕೂಡಾ ಇವರಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಅಭಿವೃದ್ಧಿ ಮಾತ್ರ ಶೂನ್ಯ. ಮುಂದಿನ ಚುನಾವಣೆಯಲ್ಲಿ ಇವರು ಜನರ ಬಳಿಗೆ ಹೋಗುವುದಾದರೆ ರಸ್ತೆ, ನೀರು, ವಿವಿಧ ಅಭಿವೃದ್ಧಿ ಕಾರ್ಯಗಳ ಪ್ರೋಗ್ರೆಸ್ ಕಾರ್ಡ್ ಮುಂದಿಟ್ಟುಕೊಂಡು ಹೋಗಲಿ, ಅದನ್ನು ಬಿಟ್ಟು ಭಯಹುಟ್ಟಿಸುತ್ತ ಮತ ಪಡೆದು ಪಾಳೇಗಾರಿಕೆ ಆಡಳಿ ನಿಲ್ಲಿಸಲಿ ಎಂದರು.
ಶಾಸಕ ನಡಹಳ್ಳಿ ಅವರಿಗೆ ಸ್ವಕ್ಷೇತ್ರ ದೇವರಹಿಪ್ಪರಗಿಯನ್ನು ಕ್ಲೀನ್ ಮಾಡಲು ಆಗುತ್ತಿಲ್ಲ. ಅದನ್ನು ಬಿಟ್ಟು ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಲು ಹೊರಟಿದ್ದಾರೆ. ನಾನು ಯಾವುದೇ ಪಕ್ಷದ ಪರ ಕೆಲಸ ಮಾಡಲು ಹೊರಟಿಲ್ಲ. ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಆಡಳಿತ ತರಬೇಕು ಎಲ್ಲರಿಗೂ ಪ್ರಶ್ನೆ ಮಾಡುವ ಹಕ್ಕು ಬರಬೇಕೆಂಬುದು ನನ್ನ ಆಸೆಯಾಗಿದೆ. ನಾನು ರಾಜಕೀಯಕ್ಕೆ ಬರಬೇಕೆಂಬ ಆಸೆಯಿಲ್ಲ. ಸಾಮಾಜಿಕ ಹೋರಾಟಗಳನ್ನು ಮುಂದುವರಿಸಿ ಕ್ಷೇತ್ರದಲ್ಲಿ ಬದಲಾವಣೆ ತರಲು ಜನಜಾಗೃತಿ ಅಭಿಯಾನ ಕೈಗೊಂಡಿದ್ದೇನೆ ಎಂದರು.
ಮಾಳಿಂಗರಾಯ ವನಹಳ್ಳಿ, ಬಸವರಾಜ ದನ್ನೂರ, ಮಲ್ಲಿಕಾರ್ಜುನ ಲಿಂಗದಳ್ಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.