ನಾಲತವಾಡ: ಮೂರು ವರ್ಷಗಳಿಗೊಮ್ಮೆ ನಡೆಯುವ ಗ್ರಾಮ ದೇವತೆ ಜಾತ್ರೆಗೆ ಅದ್ಧೂರಿ ಆರಂಭ
Team Udayavani, May 24, 2022, 7:54 PM IST
ನಾಲತವಾಡ: ಮೂರು ವರ್ಷಗಳಿಗೊಮ್ಮೆ ನಡೆಯುತ್ತಿರುವ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ನಾಲತವಾಡದಲ್ಲಿ ಅದ್ಧೂರಿಯಾಗಿ ಆರಂಭಗೊಂಡಿದೆ.
ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ಈ ಬಾರಿಯ ಅದ್ಧೂರಿ ಚಾಲನೆ ದೊರೆತಿದ್ದು, ಬೆಳಿಗ್ಗೆ ಶ್ರೀ ದ್ಯಾಮವ್ವ -ಗದ್ದೆಮ್ಮ ದೇವಿಯರನ್ನು ದೇವಸ್ಥಾನದಿಂದ ಬೆನಕನ ಬಾವಿಗೆ ಕರೆತಂದು ಗಂಗಾ ಸ್ಥಳದಲ್ಲಿ ಮಿಂದು ಶುದ್ಧೀಕರಣಗೊಂಡ ನಂತರ ಗ್ರಾಮ ದೇವಿಯರ ಭವ್ಯ ಪೂರ್ಣಕುಂಭದ ಮೆರವಣಿಗೆಗೆ ಮಾಜಿ ಸಚಿವ ಅಪ್ಪಾಜಿ ನಾಡಗೌಡ್ರ ಚಾಲನೆ ನೀಡಿದರು.
ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು,ದೇಶಮುಖ,ನಾಡಗೌಡ್ರ,ಬಾಪುಗೌಡ್ರ,ಪಾಟೀಲ ಮನೆತನದವರು, ಮತ್ತಿತರರು ಪುಷ್ಪಾರ್ಪಣಿ ಮಾಡುತ್ತಿದ್ದಂತೆ ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿದ್ದವು. ಅಲಂಕೃತ ಪೀಠದ ಮೇಲೆ ದೇವಿಯರು ವೀರಾಜಮಾನರಾಗಿ ಕಂಗೊಳಿಸಿದರು. ಭಕ್ತರು ಇಬ್ಬರು ದೇವಿಯರ ವಿಗ್ರಹಗಳನ್ನು ಭುಜದ ಮೇಲೆ ಹೊತ್ತು ನಡೆದರು. ಆರು ಗಂಟೆಗಳ ಕಾಲ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.
ಸುಮಂಗಲಿಯರು ಕುಂಭ ಹೊತ್ತು ಶ್ರೀ ಗ್ರಾಮದೇವಿಯರ ಭವ್ಯ ಮೆರವಣಿಗೆ ಗುಂಟ ಹೆಜ್ಜೆ ಹಾಕಿದರು. ಜೋಗತಿಯರು ದೇವಿಯ ಕುರಿತಂತೆ ಹಾಡುಗಳನ್ನು ಹಾಡಿದರು.
ಮೆರವಣಿಗೆಯುದ್ದಕ್ಕೂ ಆನೆಹೊಸೂರಿನ ಕೋಲಾಟ, ಕೊಪ್ಪಳದ ಉಗ್ರ ನರಸಿಂಹ,ನಂದಿ, ಸುಂದರಿ ವೇಷಧಾರಿಗಳ ಗೊಂಬೆ ಕಲಾವಿದರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.
ರಾಜ್ಯದ ವಿವಿಧೆಡೆಯಿಂದ ಬಂದ ಮಹಿಳಾ ಕಲಾವಿದರ ಡೊಳ್ಳು ಕುಣಿತ, ಕರಡಿ ಮಜಲು, ವೀರಗಾಸೆ,ನೈಜ ಕುದರಿ ಕುಣಿತ, ಕೋಟೆಗುಡ್ಡ, ಕಕ್ಕೇರಿ, ಘಾಳಪೂಜಿ,ಬಿಜ್ಜೂರ-ಖಾನೀಕೇರಿ, ಜೈನಾಪೂರ, ನಾಲತವಾಡ, ಯಣ್ಣಿವಡಗೇರಿ ಗ್ರಾಮದ ಡೊಳ್ಳು ಕುಣಿತ, ಬ್ಯಾಂಡ್ ನಾದ ಜಾತ್ರಾ ಮಹೋತ್ಸವ ಸಂಭ್ರಮ ಇಮ್ಮಡಿಗೊಳಿಸಿತು.
ಮೆರವಣಿಗೆಯು ಪಟ್ಟಣದ ಬಸವೇಶ್ವರ ವೃತ್ತದಿಂದ ಸಾಗಿ ಗಣಪತಿ ಚೌಕ,ಗುಡಿ ಓಣಿ,ದೇಶಮುಖರ ಓಣಿ,ರಡ್ಡೇರ ಪೇಟೆ, ಹೇಮರೆಡ್ಡಿ ಮಲ್ಲಮ್ಮ ವೃತ್ತದಿಂದ ,ಹಟ್ಟಿ ಓಣಿ,ಖಾನಬಾವಿ ಓಣಿಯ,ಗಚ್ಚಿನಬಾವಿ ಮಾರ್ಗವಾಗಿ ದೇವಿಯರ ದೇವಸ್ಥಾನ ತಲುಪುತ್ತಿದ್ದಂತೆ ಜಯ-ಘೋಷಣೆಗಳು ಮುಗಿಲು ಮುಟ್ಟಿದವು. ಬಜಾರದಲ್ಲಿ ಗಂಗಾಧರ ಚಿನಿವಾಲರ ಶುದ್ಧ ನೀರು ಪಾನಕ ವಿತರಿಸಿದರು,
ದೇಶಮುಖರ ಓಣಿಯ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ ತಣ್ಣನೆಯ ನೀರು, ಪಾನಕ,ಮಜ್ಜಿಗೆ ವಿತರಿಸುವ ಮೂಲಕ ಎಲ್ಲ ಮಚ್ಚುಗೆಗಳಿಸಿದರು.
ಈ ವೇಳೆ ಶಂಕರ್ರಾವ್ ದೇಶಮುಖ,ಗುರು ದೇಶಮುಖ,ಎಂಎಜಿ ಮಹಾಂತೇಶ ಗಂಗನಗೌಡರ, ಬಿ.ಬಿ.ಪಾಟೀಲ,ಪೃಥ್ವಿರಾಜ್ ನಾಡಗೌಡ,ನೆರಸಪ್ಪ ಹೊಸಮನಿ,ಬಸವರಾಜ ಗಡ್ಡಿ,ಶ್ರೀಶೈಲ(ಬಾಬು) ಬಡಿಗೇರ,ಈಶ್ವರ ಕುಂಟೋಜಿ, ಸಂಗಪ್ಪ ಸೇದಿಬಾಯಿ, ಎ.ಜಿ.ಗಂಗನಗೌಡರ, ಮುದ್ದಪ್ಪ ಮಸ್ಕಿ, ಚಂದ್ರಶೇಖರ ಗಂಗನಗೌಡ್ರ . ಗುಂಡಪ್ಪ ಮಾವಿನತೋಟ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.