ಬಿಜೆಪಿಗೆ ಉಲ್ಟಾ ಹೊಡೆದ ಮೀಸಲಾತಿ
ನ್ಯಾಯಾಲಯದ ಮೊರೆ ಹೋಗಿದ್ದ ನಾಲತವಾಡ ಪಪಂ ಸದಸ್ಯೆಗೆ ನಿರಾಸೆ
Team Udayavani, Mar 13, 2020, 4:15 PM IST
ನಾಲತವಾಡ: ಇಲ್ಲಿನ ಪಟ್ಟಣ ಪಂಚಾಯತ್ ಎರಡನೇ ಅವಧಿ
ಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎ ಮಹಿಳೆ ಎಂದು ಸರಕಾರ ಹೊಸ ಮೀಸಲಾತಿ ಪ್ರಕಟಣೆ ಮಾಡಿದೆ.
ಇದು ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದುಕೊಂಡಿದ್ದ ಬಿಜೆಪಿಗೆ ಆಕಾಶಕ್ಕೆ ಏಣಿ ಇಡು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹೊಸ ಮೀಸಲಾತಿಯ ಸಂಪೂರ್ಣ ಲಾಭವನ್ನು ಕಾಂಗ್ರೆಸ್, ಜೆಡಿಎಸ್ ಪಡೆದುಕೊಳ್ಳಲು ಕಸರತ್ತು ನಡೆಸಿವೆ. ಹೊಸ ಮೀಸಲಾತಿ ಪಟ್ಟಿ ಬಹಳ ನಾಟಕೀಯ ಸ್ಥಿತಿ ಕಂಡುಕೊಂಡಿದೆ. ಮೊದಲನೇ ಅವಧಿ ಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಪುರುಷಗೆ ಮೀಸಲಾಗಿತ್ತು. ಮೊದಲ ಅವಧಿ ಅಧಿಕಾರ ಮುಗಿದ ನಂತರ ಅಂದಿನ ಸಮಿಶ್ರ ಸರಕಾರ ಎಸ್ಸಿ ಮಹಿಳೆ ಸ್ಥಾನವೆಂದು ಮೀಸಲಾತಿ ಪ್ರಕಟಿಸಿದ ಮೂರು ದಿನಗಳಲ್ಲಿ ಮತ್ತೆ ಸಾಮಾನ್ಯ ಪುರುಷ ಎಂದು ಮೀಸಲು ಪ್ರಕಟಿಸಿತ್ತು.
ಮೀಸಲಾತಿ ಆದೇಶ ಬದಲಿಸುತಿದ್ದಂತೆ ಎಸ್ಸಿ ಮಹಿಳಾ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋಗಿ ನ್ಯಾಯಾಲಯದಲ್ಲಿ ಎಸ್ಸಿ ಮಹಿಳೆ ಸ್ಥಾನಕ್ಕೆ ಮೀಸಲಾತಿ ನೀಡಬೇಕು ಎಂದು ಆದೇಶ ಪಡೆದುಕೊಂಡ ಬಂದರು. ಆದರೆ ಈಗ ಪ್ರಕಟಗೊಂಡ ಹೊಸ ಮೀಸಲಾತಿ ಪಟ್ಟಿಯಿಂದ ಎಸ್ಸಿ ಮಹಿಳೆಗೆ ನಿರಾಶೆ ಮೂಡಿದೆ.
ತೀರ್ವ ಪೈಪೋಟಿ: ನಾಲತವಾಡ ಪಟ್ಟಣ ಪಂಚಾಯತನಲ್ಲಿ ನಾಲ್ಕು ಸಾಮಾನ್ಯ ಮಹಿಳೆಯರು ಇರುವುದರಿಂದ ಅಧ್ಯಕ್ಷ ಆಕಾಂಕ್ಷಿಗಳ ಮಧ್ಯ ತೀರ್ವ ಪೈಪೋಟಿ ಏರ್ಪಡುವ ಸಂಭವ ಹೆಚ್ಚಾಗಿದೆ. ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ಆಪ್ತರಾದ ಮಹಾಂತೇಶ ಗಂಗನಗೌಡ ಅವರ ಪತ್ನಿ ಸುಮಾ ಗಂಗಾನಗೌಡರ ಗೂ ಜೆಡಿಎಸ್ ಅಭ್ಯರ್ಥಿಗಳಾದ ಬಸಲಿಂಗಮ್ಮ ಮಸ್ಕಿ, ಭೀಮವ್ವ ಕ್ಷತ್ರಿ, ಸಂಗಮ್ಮ ಗಂಗನಗೌಡ ಅವರ ಮಧ್ಯ ಪೈಪೋಟಿ ನಡೆಯುವ ಸಂಭವ ಹೆಚ್ಚಾಗಿದೆ. ಒಂದು ವೇಳೆ ಅಧ್ಯಕ್ಷ ಚುನಾವಣೆ ಏರ್ಪಟ್ಟರೆ ಜೆಡಿಎಸ್ ಸದಸ್ಯರಿಗೆ ಕಾಂಗ್ರೆಸ್ ಸದಸ್ಯರು ಬೆಂಬಲ ನೀಡುವುದು ಖಚಿತವಾಗಿದೆ.
ಉಲ್ಟಾ ಹೊಡೆದ ಹೊಸ ಪಟ್ಟಿ: ಈ ಹಿಂದೆ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮಹಿಳಾ ಮೀಸಲನ್ನು ಮಾಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದ ಮೇಲೆ ಬಿಜೆಪಿಯಲ್ಲಿ ಹರ್ಷ ಉಂಟಾಗಿತ್ತು. ಬಿಜೆಪಿ ಅಭ್ಯರ್ಥಿ ಮಾತ್ರ ಎಸ್ಸಿ ಮಹಿಳೆ ಇರುವ ಕಾರಣ ಅವಿರೋಧವಾಗಿ ಆಯ್ಕೆ ಆಗುವ ಕನಸು ಕಂಡಿದ್ದರು. ಆದರೆ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್. ಪಾಟೀಲ ಅವರ ಆದೇಶ ಮೇರೆಗೆ ಹೊಸ ಮೀಸಲಾತಿ ಪಟ್ಟಿಯನ್ನು ಬದಲಾವಣೆ ಮಾಡಿದ ಕಾರಣ ಅವಿರೋಧವಾಗಿ ಆಯ್ಕೆ ಆಗುವ ಬಿಜೆಪಿ ಅಭ್ಯರ್ಥಿಯ ಕನಸನ್ನು ಅವರ ನಾಯಕರೇ ಭಂಗ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಸದಸ್ಯರ ಲೆಕ್ಕಾಚಾರ: ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರ ಕೋಟೆಯಾಗಿರುವ ನಾಲತವಾಡ ಪಟ್ಟಣದಲ್ಲಿ ಹೇಗಾದರು ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಅಧ್ಯಕ್ಷ ಸ್ಥಾನಕ್ಕೆ ಏರಿಸಬೇಕು ಎಂದು ಕನಸು ಕಂಡಿದ್ದ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಲೆಕ್ಕಾಚಾರವೆಲ್ಲ ಉಲ್ಟಾ ಆಗಿದೆ. ಬಿಜೆಪಿಯನ್ನು ಯಾವುದೇ ಕಾರಣಕ್ಕು ಅ ಧಿಕಾರದ ಗದ್ದುಗೆ ಏರುವದಕ್ಕೆ ಬಿಡಬಾರದು ಎಂದು ಕಾಂಗ್ರೆಸ್, ಜೆಡಿಎಸ್ ಸದಸ್ಯರ ಲೆಕ್ಕಾಚಾರವಾಗಿದೆ. ಸದಸ್ಯರ ಬಲಾಬಲ ನೋಡಿದರೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು 10 ಹಾಗೂ ಬಿಜೆಪಿ ಪರವಾಗಿ ನಾಲ್ಕು ಜನ ಸದಸ್ಯರ ಬಲಾಬಲ ಇದೆ. ಹೀಗಾಗಿ ಈ ಬಾರಿ ಕೂಡ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಸೇರಿ ಅಧಿಕಾರ ನಡೆಸುವುದು ದೃಢವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.