ನಾಲತವಾಡ ಸೌಂದಯೀಕರಣಕ್ಕೆ ಬದ್ಧ: ನಡಹಳ್ಳಿ


Team Udayavani, Jan 16, 2018, 2:04 PM IST

vij-6.jpg

ನಾಲತವಾಡ: ನನ್ನ ರಾಜಕೀಯ ಬದುಕಿನಲ್ಲೇ ನಾಲತವಾಡ ಪಟ್ಟಣದಲ್ಲಿ ಹದಗೆಟ್ಟ ರಸ್ತೆ, ಚರಂಡಿ ಹಾಗೂ ಬಡತನದಿಂದ ಬಳಲುತ್ತಿದ್ದ ಕುಟುಂಬಗಳನ್ನು ನೋಡಿಯೇ ಇಲ್ಲ. 25 ವರ್ಷದಿಂದ ಶಾಸಕರಾಗಿ ಆಯ್ಕೆಯಾದರವರಿಗೆ ಸಮಸ್ಯೆಗಳು ಗಮನಕ್ಕೆ ಬರಲಿಲ್ಲವೇ ಎಂದು ದೇವರಹಿಪ್ಪರಗಿ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಪ್ರಶ್ನಿಸಿದರು.

ಪಟ್ಟಣದ ವಿವಿಧ ವಾರ್ಡುಗಳಲ್ಲಿ ನಡೆದ ಮನೆ ಮನೆಗೆ ಕುಮಾರಣ್ಣ, ಹಳ್ಳಿ ಹಳ್ಳಿಗೆ ನಡಹಳ್ಳಿ ಕಾರ್ಯಕ್ರಮ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ತಾಲೂಕಿನಲ್ಲೇ ಪಟ್ಟಣದಲ್ಲಿ ಅತಿ ಬಡತನದ ಬೇಗೆಯಿಂದ
ಬಳಲುತ್ತಿದ್ದಾರೆ ಎಂದು ನಾನು ಕನಸಿನಲ್ಲೇ ಊಹಿಸಿರಲಿಲ್ಲ. ಅಂತಹ ದುಸ್ಥಿತಿ ಪಟ್ಟಣದಲ್ಲಿದೆ. ಇಂತಹ ಗಂಭೀರ ಸಮಸ್ಯೆಗಳತ್ತ ಸ್ಥಳೀಯ ಶಾಸಕರು ಗಮನ ಹರಿಸದಿರುವುದು ‌ ದುರಂತ ಎಂದರು.

ಪಟ್ಟಣದಲ್ಲಿ ಬಡವರಿಗೆ ಪಡಿತರ ಚೀಟಿ, ಮಾಸಿಕ ವೇತನ ಹಾಗೂ ವಾಸಿಸಲು ಸೂರುಗಳಿಲ್ಲ, ಇವೆಲ್ಲವುಗಳನ್ನು
ಸರಕಾರ ಒದಗಿಸುತ್ತದೆ. ಆದರೆ ಅವುಗಳನ್ನು ಒದಗಿಸುವ ಮನೋಭಾವನೆ ಶಾಸಕರಲ್ಲಿ ಇರಬೇಕು. ಪಟ್ಟಣದಲ್ಲಿ 4,500 ಮನೆಗಳಲ್ಲಿ ಅರ್ಧದಷ್ಟು ನಿರ್ಗತಿಕರು ಇದ್ದಾರೆ. ಪಟ್ಟಣದಲ್ಲೇ ನಾಡ ಕಾರ್ಯಾಲಯವಿದೆ ಇದುವರೆಗೂ ಕೆಲವರಿಗೆ ವೃದ್ದಾಪ್ಯ ವೇತನ ಸಿಗುತ್ತಿಲ್ಲ.

ಸಮಸ್ಯೆಗಳು ಪಟ್ಟಣದಲ್ಲಿ ತಾಂಡವವಾಡುತ್ತಿವೆ. 25 ವರ್ಷದ ರಾಜಕಾರಣದಲ್ಲಿ ಪ್ರತಿ ವರ್ಷವೂ ಕೇವಲ 100 ಆಸರೆ ಮನೆಗಳನ್ನು ಅರ್ಹರಿಗೆ ಕಲ್ಪಿಸಿದ್ದರೆ ಒಟ್ಟು 2,500 ಮನೆ ಒದಗಿಸಬಹುದಿತ್ತು. ಇವೆಲ್ಲ ಶಾಸಕರು ತಮ್ಮ ಮನೆಯಿಂದ
ಒದಗಿಸುತ್ತಾರೋ ಎಂದು ಪ್ರಶ್ನಿಸಿದರು. ಕಳೆದ 5 ದಿನದಿಂದ ಅಲೆದಾಡುತ್ತಿದ್ದೇನೆ. ಶೇ. 75ರಷ್ಟು ವೃದ್ಧರು ನಮಗೆ ಪಿಂಚಣಿ ಬರುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ನಾನು 10 ವರ್ಷ ಶಾಸಕನಾಗಿದ್ದು ಈ ರೀತಿ ಆಡಳಿತ ಮಾಡಿಯೇ ಇಲ್ಲ ಎಂದು ಹೇಳಿದರು.

ಸತತ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೀರಿ. ಶಾಸಕರೇ ನೀವೆ ಒಂದು ಸಲ ಮನೆ ಮನೆಗೆ ಅಲೆದಾಡಿ ಬಡವರ ಪರಿಸ್ಥಿತಿ ಗಮನಕ್ಕೆ ಬರುತ್ತದೆ. ನಾನು ಈಗಾಗಲೇ ಬಡವರ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದೇನೆ. ಮುಂದಿನ
ದಿನಗಳಲ್ಲಿ ನಾನೇ ಈ ಭಾಗದ ಶಾಸಕನಾಗುತ್ತೇನೆ. ನಿಮ್ಮೆಲ್ಲ ಸಮಸ್ಯೆಗಳಿಗೆ ನಡಹಳ್ಳಿಯಿಂದ ಮಾತ್ರ ಪರಿಹಾರ ಎಂದು ಭರವಸೆ ನೀಡಿದ್ದೇನೆ ಎಂದರು.

ಶಾಸಕರಾಗಿ ಅಧಿಕಾರದಲ್ಲಿ ಪ್ರಾಮಾಣಿಕತೆ ಮೆರೆಯಬೇಕು. ನನಗೆ 25 ವರ್ಷ ಬೇಡ, 5 ವರ್ಷ ಅಧಿಕಾರ ನೀಡಿ. ಮೊದಲು ಪೊರಕೆ ಹಿಡಿದು ನಾಲತವಾಡ ಪಟ್ಟಣವನ್ನೇ ಸ್ವತ್ಛಗೊಳಿಸುವ ಪ್ರತಿಜ್ಞೆ ಮಾಡಿದ್ದೇನೆ. ಪಟ್ಟಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸರಕಾರಿ ಪ್ರೌಢ ಶಾಲೆಗಳಿಂದ ವಂಚಿತರಾಗಿದ್ದಾರೆ. ಕನಿಷ್ಠ ಒಂದು ಸರಕಾರಿ ಪ್ರೌಢಶಾಲೆ ಮಂಜೂರು ಮಾಡದಿರುವು ಅನುಮಾನ ಹುಟ್ಟಿಸಿದೆ ಎಂದರು.

ಪಟ್ಟಣದಲ್ಲಿ ನನಗೆ ಸಾರ್ವಜನೀಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಶಾಸಕರಾದ ನಾಡಗೌಡ ಅವರು ದಿ| ದೇಶಮುಖ ಅಭಿಮಾನಿಗಳಿಗೆ ಮೂಲ ಸೌಕರ್ಯಗಳಿಂದ ವಂಚಿತಗೊಳಿದ್ದಾರೆ ಎಂಬ ಬಲವಾದ ಆರೋಪಗಳಿವೆ. ರಾಜಕಾರಣ ಬದಿಗೊತ್ತಿ ಭೇದ ಭಾವ ಮರೆತು ಬಡವರ ಪರ ಚಿಂತನೆ ಮಾಡಬೇಕು ಎಂದರು.

ಜೆಡಿಎಸ್‌ ತಾಲೂಕು ಪ್ರಧಾನ ಕಾರ್ಯದರ್ಶಿ ಜಿ. ಮಹಾಂತೇಶಗೌಡ, ಪಪಂ ಸದಸ್ಯ ಭೀಮಣ್ಣ ಗುರಿಕಾರ, ವೀರೇಶ ರಕ್ಕಸಗಿ, ರಫಿಕ್‌ ಕೊಡಗಲಿ, ಸೈಯದ್‌ ಖಾಜಿ, ಸೋಮನಗೌಡ ಕವಡಿಮಟ್ಟಿ, ಜಗದೀಶ ಕೆಂಭಾವಿ, ಸಂಗಪ್ಪ
ಬೋವಿ, ಬಾಬುಗೌಡ ಹಂಪನಗೌಡ, ಸಿದ್ದಲಿಂಗಯ್ಯ ಕಪ್ಪರಮಠ, ಬಸನಗೌಡ ಪಾಟೀಲ (ನಡಹಳ್ಳಿ) ಹಾಗೂ
ಸಂಗಮೇಶ ಮೇಟಿ ಇದ್ದರು. 

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.