ಜನತಾ ಕರ್ಫ್ಯೂ ಕರೆಗೆ ಬೆಂಬಲಿಸೋಣ
ಕೊರೊನಾ ಹರಡದಂತೆ ಜಾಗೃತಿ ವಹಿಸಿ
Team Udayavani, Mar 21, 2020, 4:23 PM IST
ನಾಲತವಾಡ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜನತಾ ಕರ್ಫ್ಯೂ ಕರೆಗೆ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರು ಪಾಲಿಸಬೇಕು ಎಂದು ಬಿಜೆಪಿ ಯುವ ಮುಖಂಡ ಗಿರೀಶಗೌಡ ಪಾಟೀಲ ಮನವಿ ಮಾಡಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ರೋಗ ನಿಯಂತ್ರಣಕ್ಕೆ ರವಿವಾರ ಸಾರ್ವಜನಿಕರು ತಮ್ಮ ಮನೆಯಿಂದ ಹೊರಗೆ ಬರಬಾರದು. ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಭಾರತಿಯರಲ್ಲಿ ಮನವಿ ಮಾಡಿದ್ದಾರೆ.
ಅವರ ಕರೆಗೆ ನಾವೆಲ್ಲರು ಸಹಕಾರ ನೀಡಬೇಕು ಎಂದರು. ರವಿವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಜನರು ತಮ್ಮ ಮನೆಯಿಂದ ಯಾರೂ ಕೂಡ ಹೊರಗೆ ಬರಬೇಡಿ. ಪ್ರಧಾನಿ ಅವರ ಕಳಕಳಿಗೆ ನಾವೆಲ್ಲರು ಚಾಚು ತಪ್ಪದೆ ಪಾಲಿಸಬೇಕು. ಚೀನಾ ದೇಶದಿಂದ ಪ್ರಾರಂಭವಾದ ಈ ರೋಗ ಈಗ ಎಲ್ಲ ರಾಷ್ಟ್ರಗಳಿಗೆ ತಗುಲಿದೆ. ಇಟಲಿ, ಅಮೆರಿಕ, ಇರಾಕ್, ಇರಾನ್ ಹಾಗೂ ಇನ್ನಿತರ ದೇಶಗಳಲ್ಲಿ ಸಾಕಷ್ಟು ವೇಗದಲ್ಲಿ ರೋಗ ಹರುಡುತ್ತ ಇದೆ, ಆದರೆ ಭಾರತ ದೇಶದಲ್ಲಿ ಈ ರೋಗದ ಬಗ್ಗೆ ಕೇಂದ್ರ ಸರಕಾರ ಹೆಚ್ಚು ಜಾಗೃತಿ ವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಹರಡದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ನಾವೆಲ್ಲರು ಕೂಡ ರೋಗದ ಬಗ್ಗೆ ಜಾಗೃತಿ ವಹಿಸಬೇಕಾಗಿದೆ. ಅನಗತ್ಯವಾಗಿ ನಾವು ಮನೆಯಿಂದ ಹೊರಗೆ ಬರುವುದನ್ನು ಮುಂದಿನ ದಿನಗಳಲ್ಲಿ ಕಡಿಮೆ ಮಾಡಬೇಕು. ಶಂಕಿತ ವ್ಯಕ್ತಿ ಕಂಡು ಬಂದಲ್ಲಿ ಕೂಡಲೆ ಆಸ್ಪತ್ರೆಗಳಿಗೆ ಮಾಹಿತಿ ನೀಡಿ ಎಂದರು.
ಮುದ್ದೇಬಿಹಾಳ ತಾಲೂಕು ಬಿಜೆಪಿ ಉಪಾಧ್ಯಕ್ಷ ಬಾಬುಗೌಡ ಅಮಾತಿಗೌಡರ ಮಾತನಾಡಿ, ಕೊರೊನಾ ಸೋಂಕಿನ ನಿಯಂತ್ರಣ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರ ದಿಟ್ಟ ನಿರ್ಧಾವನ್ನು ತೆಗೆದುಕೊಂಡಿದೆ.
ಸಾಮೂಹಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕರು ಗುಂಪು ಪ್ರದೇಶದಿಂದ ದೂರ ಇರಬೇಕು ಎಂದು ಬಹಳ ಕಟ್ಟುನಿಟ್ಟಿನ ಆದೇಶವನ್ನು ನೀಡಿದ್ದಾರೆ. ಇದನ್ನು ಎಲ್ಲರು ಪಾಲಿಸುತ್ತಿದ್ದು ನಾವು ಇನ್ನು ಹೆಚ್ಚಿನ ಜಾಗೃತಿ ವಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವೃದ್ಧರು ಮನೆಯಿಂದ ಹೊರಗೆ ಬರಲೆಬಾರದು. ಪ್ರಧಾನ ಮಂತ್ರಿ ಅವರು ರವಿವಾರ ದಿನ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಅವರ ಕರೆಗೆ ನಾವೆಲ್ಲರು ಸಹಕಾರ ನೀಡಬೇಕು. ಪಟ್ಟಣದಲ್ಲಿ ಈ ಬಗ್ಗೆ ಇನ್ನು ಹೆಚ್ಚಿನ ಜಾಗೃತಿ ಮೂಡಿಸಲಾಗುವುದು ಎಂದರು.
ಡಾ| ಸಿ.ಬಿ. ವಿರಕ್ತಮಠ ಮಾತನಾಡಿ, ಕೊರೊನಾ ಸೋಂಕಿನ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ವಿದೇಶದಿಂದ ಬಂದ ಈ ಸೋಂಕಿನ ಹರಡುವಿಕೆ ತಡೆಗಟ್ಟಲು ಆರೋಗ್ಯ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರು ಜಾಗೃತರಾಗಬೇಕು. ಮನೆ ಒಳಗೆ ಪ್ರವೇಶ ಮಾಡಬೇಕಾದರೆ ಸ್ವತ್ಛವಾಗಿ ಕೈ ತೊಳೆದುಕೊಂಡು ಪ್ರವೇಶ ಮಾಡಿ, ಹೊರಗಿನ ಆಹಾರ ಪದಾರ್ಥಗಳನ್ನು ಮುಟ್ಟಬೇಡಿ, ನಾವು ಇದರ ಭೀತಿಗೆ ಒಳಗಾಗದೆ ಇದರ ನಿಯಂತ್ರಣದ ಕ್ರಮಗಳನ್ನು ಚಾಚು ತಪ್ಪದೆ ಪಾಲಿಸಬೇಕು ಎಂದರು.
ಖಾಜಾಹುಸೇನ್ ಎತ್ತಿನಮನಿ, ಬಸಣ್ಣ ವಡಗೇರಿ, ಚನ್ನಪ್ಪಗೌಡ ಹಂಪನಗೌಡರ, ಜಗದೀಶ ಜಾಲಹಳ್ಳಿ, ಚಂದ್ರು ಹಂಪನಗೌಡರ, ಗೌಡಪ್ಪ ಹಂಪನಗೌಡ್ರ, ಚನ್ನಸಬಪ್ಪ ತಾಳಿಕೋಟಿ, ನಿಂಗಣ್ಣ ಬಿರಾದಾರ, ಅಮರೇಶ ಮದರಿ, ವೀರೇಶ ಗೌಡರ, ಶಿವು ಗಂಗನಗೌಡರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.