ಅವ್ಯವಸ್ಥೆ ಆಗರ ನಾಲತವಾಡ ನಿಲ್ದಾಣ
Team Udayavani, Sep 23, 2017, 12:09 PM IST
ನಾಲತವಾಡ: ಸಾರಿಗೆ ವ್ಯವಸ್ಥೆ ಸುಧಾರಿಸಲು ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದರೂ ಸಮರ್ಪಕವಾಗಿ ಬಳಕೆಯಾಗದೇ ಬಸ್ ನಿಲ್ದಾಣಗಳ ಸ್ಥಿತಿ ಅಯೋಮಯವಾಗಿದೆ ಎಂಬುದಕ್ಕೆ ನಾಲತವಾಡ ಬಸ್ ನಿಲ್ದಾಣವೇ ನಿದರ್ಶನವಾಗಿದೆ.
40 ಹಳ್ಳಿಗಳ ಹೃದಯ ಭಾಗವೆಂದೇ ಕರೆಸಿಕೊಳ್ಳುವ ಪಟ್ಟಣದ ಬಸ್ ನಿಲ್ದಾಣ ಅವ್ಯವಸ್ಥೆ ಆಗರವಾಗಿದೆ. ನಿತ್ಯ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಬಸ್ ನಿಲ್ದಾಣ ನೀರಿನಲ್ಲಿಯೆ ನಡೆದು ಬಸ್‌ನಲ್ಲಿ ಪ್ರಯಾಣಿಸುವಂತಾಗಿದೆ.
ಮುದ್ದೇಬಿಹಾಳ ತಾಲೂಕಿನಲ್ಲಿಯೇ ಅತಿ ಹೆಚ್ಚು ಗ್ರಾಮಗಳನ್ನೊಳಗೊಂಡ ನಾಲತವಾಡ ಪಟ್ಟಣ ಬಸ್ ನಿಲ್ದಾಣದ ಸ್ಥಿತಿ ವೀಕ್ಷಿಸಿದರೆ ಇದು ನಿಲ್ದಾಣವೋ ಅಥವಾ ಕೆರೆವೋ ಎಂಬಂತೆ ಭಾಸವಾಗುತ್ತಿದೆ.
ನಿಲ್ದಾಣ ಸುತ್ತಮುತ್ತ ಮೂತ್ರ ವಿಸರ್ಜನೆ: ನಿಲ್ದಾಣದಲ್ಲಿ ಪುರುಷರಿಗೆ ಮೂತ್ರಾಲಯವಿದ್ದು, ಇಲ್ಲದಂತಾಗಿದೆ. ಪುರುಷರು ಹಾಗೂ ಪಟ್ಟಣದ ನಿವಾಸಿಗಳು ನಿಲ್ದಾಣ ಸುತ್ತ ಗೋಡೆಗಳ ಪಕ್ಕ ಮೂತ್ರ ವಿಸರ್ಜನೆ ಮಾಡುತಿದ್ದಾರೆ. ಮೂತ್ರದ ನೀರಿನಲ್ಲಿಯೆ ಸಂಚರಿಸಿ ಪ್ರಯಾಣಿಕರು ಬಸ್‌ನೊಳಗೆ ಪ್ರವೇಶ ಮಾಡುವಂತಾಗಿದೆ. ಗೋಡೆ ಸುತ್ತಮತ್ತ ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಎಂದು ಬೋರ್ಡ್ ಹಾಕಿದ್ದರೂ ಅದನ್ನು ಪಾಲಿಸುತ್ತಿಲ್ಲ.
ಕುಡಿಯಲು ನೀರಿಲ್ಲ: ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಮರ್ಪಕವಾಗಿ ಕುಡಿಯಲು ನೀರು ಸಿಗದೆ ಪರದಾಡುವಂತಾಗಿದೆ. ಕುಡಿಯುವ ನೀರಿನ ನಳಗಳು ಅಸ್ವತ್ಛತೆಯಿಂದ ಕೂಡಿದ್ದು, ಇಲ್ಲಿ ಪ್ರಯಾಣಿಕರು ನೀರು ಕುಡಿಯುವುದೇ ಇಲ್ಲ. ಬಸ್ ನಿಲ್ದಾಣದ ಸುತ್ತಮುತ್ತಲಿನ ನಿವಾಸಿಗಳು ಈ ನೀರನ್ನು ಬಯಲು ಬಹಿರ್ದೆಸೆಗೆ ಉಪಯೋಗಿಸುತಿದ್ದಾರೆ.
ನಿಲ್ದಾಣ ತೆಗ್ಗು ದಿನ್ನಿ: ಮುಖ್ಯ ರಸ್ತೆಗಿಂತ ನಿಲ್ದಾಣ ತೆಗ್ಗಿನಲ್ಲಿದ್ದ ಕಾರಣ ನೀರೆಲ್ಲ ನಿಲ್ದಾಣದಲ್ಲೆ ಸಂಗ್ರಹವಾಗುತ್ತಿದೆ. ನಿಲ್ದಾಣ ಬಸ್ ಓಡಾಟದಿಂದ ತೆಗ್ಗು ಬಿದ್ದು ನಿಲ್ದಾಣ ಜಲಾವೃತವಾಗಿ ಮಾರ್ಪಟ್ಟಿದೆ. ಪ್ರಯಾಣಿಕರು ಸಾಕಷ್ಟು ಬಾರಿ ನೀರಿನಲ್ಲಿ ಜಾರಿ ಬಿದ್ದು ಪ್ರಯಾಣಿಸಿದ್ದಾರೆ.
ಇನ್ನು ಆರಂಭವಾಗದೆ ಹೈಟೆಕ್ ನಿಲ್ದಾಣ: ಕಳೆದ 2 ವರ್ಷಗಳ ಹಿಂದೆಯೇ ಹೊಸ ಬಸ್ ನಿಲ್ದಾಣ ಮಂಜೂಾಗಿದೆ. ಅದನ್ನು ಟೆಂಡರ್ ಸಹ ಕರೆಯಲಾಗಿದೆ. ಆದರೆ, ಕಾಮಗಾರಿ ಮಾತ್ರ ಇನ್ನು ಆರಂಭವಾಗುತಿಲ್ಲ. ಹೊಸ ನಿಲ್ದಾಣ ನಿರ್ಮಿಸಲು ಮರಳು ಸಂಗ್ರಹಿಸಿದ್ದರೂ ಕಾಮಗಾರಿ ಆರಂಭಿಸಿಲ್ಲ.
ವಿಪರೀತ ಸೊಳ್ಳೆ ಕಾಟ: ನಿಲ್ದಾಣದಲ್ಲಿ ನೀರು ನಿಂತ ಪರಿಣಾಮ ಸಂಜೆಯಾದರೆ ವಿಪರೀತ ಸೊಳ್ಳೆಯ ಕಾಟ. ಸೊಳ್ಳೆಗಳ ಕಡಿತದಿಂದ ಪ್ರಯಾಣಿಕರು ರೋಗಗಳಿಂದ ಬಳಲುವಂತಾಗಿದೆ.
ಗಬ್ಬೆದ್ದ ಮೂತ್ರಾಲಯ: ಕಳೆದ ಸುಮಾರು ವರ್ಷಗಳಿಂದ ಸ್ವತ್ಛತೆ ಕಾಣದೆ ನಿಲ್ದಾಣದ ಮೂತ್ರಾಲಯ ಗಬ್ಬೆದ್ದು ನಾರುತ್ತಿದೆ. ಪ್ರಯಾಣಿಕರು ಮೂತ್ರಾಲಯಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವ ಅನಿವಾರ್ಯತೆ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.