ಪಕ್ಷಿ ಸಂಕುಲ ಉಳಿಸಲು ನೂತನ ಅಭಿಯಾನ

ಪಕ್ಷಿಗಳ ದಾಹ ತೀರಿಸಿ­ !ಬಟ್ಟಲಲ್ಲಿ ನೀರು ತುಂಬಿ ಗಿಡಕ್ಕೆ ಕಟ್ಟಿ­! ಇತರರಿಗೂ ಇಂಥ ಕಾರ್ಯ ಮಾಡಲು ಪ್ರೇರೇಪಿಸಿ

Team Udayavani, Apr 11, 2021, 8:51 PM IST

hfghfg

ಮುದ್ದೇಬಿಹಾಳ: ಪಕ್ಷಿ ಪ್ರೇಮಿಗಳ ಕಾಳು, ನೀರು ಕೊಡಿ-ಪಕ್ಷಿ ರಕ್ಷಿಸಿ ಅಭಿಯಾನ ದಿನೇ ದಿನೇ ಮಹತ್ವ ಪಡೆದುಕೊಳ್ಳುತ್ತಿದೆ. ಸಣ್ಣ ಪ್ರಯತ್ನವೊಂದರಿಂದ ಆರಂಭಗೊಂಡಿರುವ ಅಭಿಯಾನ ಬೇಸಿಗೆ ಮುಗಿಯುವವರೆಗೂ ಮುಂದುವರಿಯುವ ಸಂಕಲ್ಪ ಹೊಂದಿದೆ. ಬೇಸಿಗೆಯಲ್ಲಿ ಪಕ್ಷಿಗಳನ್ನು ರಕ್ಷಿಸುತ್ತೇವೆ ಎನ್ನುವ ಪ್ರಮಾಣದೊಂದಿಗೆ ಮಕ್ಕಳೂ ಸಹಿತ ಅಭಿಯಾನದಲ್ಲಿ ಭಾಗವಹಿಸುತ್ತಿರುವುದು ಪ್ರೇರಣೆಯಂತಾಗಿದೆ.

ಏನಿದು ಅಭಿಯಾನ?:

ಪರಿಸರದ ಸಮತೋಲನಕ್ಕೆ ಅತ್ಯಗತ್ಯವಾಗಿರುವ ರೈತ ಮಿತ್ರ ಪಕ್ಷಿಗಳು ಹೆಚ್ಚುತ್ತಿರುವ ಕಾಂಕ್ರೀಟ್‌ ಕಾಡು, ಮೊಬೈಲ್‌ ಟಾವರ್‌ಗಳ ವಿಕೀರಣದಿಂದಾಗಿ ನಗರ ಪ್ರದೇಶ ತೊರೆಯುತ್ತಿವೆ. ಇದರಿಂದಾಗಿ ದಶಕಗಳ ಹಿಂದಿದ್ದ ಕಲರವ, ಚಿಂವ್‌ಚಿಂವ್‌ ನಾದ ಕೇಳಿ ಬರುವುದು ಬಹುತೇಕ ನಿಂತೆ ಹೋಗಿದೆ. ಗುಬ್ಬಿ, ಕಾಗೆ, ಕೆಲ ಪಕ್ಷಿಗಳು ಅಲ್ಲಲ್ಲಿ ಕಂಡು ಬರುತ್ತವೆ. ಹೀಗೆ ಕಾಣುವ ಪಕ್ಷಿಗಳನ್ನಾದರೂ ರಕ್ಷಿಸಿಕೊಳ್ಳಬೇಕೆನ್ನುವ ಪರಿಕಲ್ಪನೆಯಿಂದ ಕೆಲವರು ಮನೆಗಳ ಮೇಲ್ಛಾವಣಿ, ಮನೆ ಎದುರು ಬೆಳೆಸಿದ ಗಿಡಗಳಲ್ಲಿ ಬಾಟಲ್‌, ಅಗಲವಾದ ಪಾತ್ರೆ, ತಟ್ಟೆ ಮುಂತಾದವುಗಳನ್ನು ಕಟ್ಟಿ ನೀರು, ಕಾಳು ಇಟ್ಟು ಅನುಕೂಲ ಕಲ್ಪಿಸಿದ್ದರು. ಈ ವರ್ಷ ಬೇಸಿಗೆ ಹೆಚ್ಚಾಗುವ ಮುನ್ಸೂಚನೆ ದೊರೆತಿದ್ದರಿಂದ ಕೆಲ ಪಕ್ಷಿ ಪ್ರಿಯರು ಸಾಮೂಹಿಕವಾಗಿ ಅಭಿಯಾನವನ್ನೇ ಪ್ರಾರಂಭಿಸಿದರು. ಎಲ್ಲೆಲ್ಲಿ ಸ್ಥಳಾವಕಾಶ ಇದೆಯೋ ಅಲ್ಲೆಲ್ಲ ಪಕ್ಷಿಗಳ ದಾಹ ತೀರಿಸುವ ಸೇವೆಗೆ ಪ್ರಚಾರ ಕೊಡತೊಡಗಿದರು. ಇದರಿಂದಾಗಿ ಅಭಿಯಾನ ಅನೇಕರಿಗೆ ಪ್ರೇರಣೆ ನೀಡತೊಡಗಿದೆ.

ಯಾರಿಂದ ಅಭಿಯಾನ?:

ಪಟ್ಟಣದಲ್ಲಿ ಎಲ್ಲೆಡೆ ಹಸಿರೀಕರಣದ ಸಂಕಲ್ಪ ತೊಟ್ಟಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸಿರು ತೋರಣ ಗೆಳೆಯರ ಬಳಗ ಅಭಿಯಾನದ ಮುಂಚೂಣಿಯಲ್ಲಿದೆ. ಬೇಸಿಗೆ ಪ್ರಾರಂಭದಲ್ಲೇ ಪಕ್ಷಿ ರಕ್ಷಿಸುವ ಅಭಿಯಾನ ಪ್ರಾರಂಭಿಸಿದೆ. ಬಳಗದ ಸದಸ್ಯರು ಮೊದಲಿಗರಾಗಿ ಪಕ್ಷಿಗಳಿಗೆ ನೀರು, ಕಾಳು ಇಡಲು ಉಚಿತ ಸೇವೆಯೊಂದಿಗೆ ಜಾಗೃತಿ ಮೂಡಿಸತೊಡಗಿದೆ. ಸರೂರಿನ ಆದಿಶಕ್ತಿ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮುದ್ದೇಬಿಹಾಳದ ಅಗಸ್ತ್ಯ ಎಜ್ಯುಕೇಶನಲ್‌ ಅಕಾಡೆಮಿ, ಎಂಜಿವಿಸಿ ಕಾಲೇಜಿನ ಬಯಾಲಜಿ ವಿಭಾಗದ ತಂಡ, ದಿ| ಶೃಂಗಾರಗೌಡ ಪಾಟೀಲ ಫೌಂಡೇಶನ್‌, ಜಂಗಮ ಸಮಾಜ ಬಳಗ, ಸಂತ ಕನಕದಾಸ ಶಾಲೆ ಮಕ್ಕಳು ಸೇರಿ ಹಲವು ಸಂಘಟನೆಗಳು ಸ್ವಯಂಪ್ರೇರಿತರಾಗಿ ಅಭಿಯಾನಕ್ಕೆ ಕೈ ಜೋಡಿಸಿವೆ. ಉಚಿತವಾಗಿ ಬಟ್ಟಲು, ಕಾಳು ನೀಡಿ, ಬಟ್ಟಲಲ್ಲಿ ನೀರು ತುಂಬಿ ಗಿಡಕ್ಕೆ ಕಟ್ಟುವುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿವೆ.

ಎಲ್ಲೆಲ್ಲಿ ಅಭಿಯಾನ ಅನುಷ್ಠಾನ?:

ಮುಖ್ಯ ಅಂಚೆ ಕಚೇರಿ, ಹುಡ್ಕೊ, ಉದ್ಯಾನವನಗಳು, ಓಂಶಾಂತಿ ಭವನ, ಸಂತ ಕನಕದಾಸ ಶಾಲೆ, ವಿವಿಧ ಶಾಲಾ, ಕಾಲೇಜುಗಳ ಆವರಣ, ಪಟ್ಟಣದ ಪ್ರಮುಖ ಸ್ಥಳಗಳಲ್ಲಿರುವ ಗಿಡ ಮರಗಳ ರೆಂಬೆ ಕೊಂಬೆಗಳಿಗೆ ನೀರು, ಕಾಳು ತುಂಬಿದ ಬಟ್ಟಲು ಕಟ್ಟಿ ಅಭಿಯಾನ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಹಳೆಯ ಬಾಟಲ್‌, ಅಗಲವಾದ ಪಾತ್ರೆ, ಬಟ್ಟಲುಗಳಲ್ಲಿ ನೀರು ತುಂಬಿಸಿ ಸಣ್ಣ ಹಗ್ಗ, ತಂತಿ, ದಾರದ ಸಹಾಯದಿಂದ ಮೇಲ್ಛಾವಣಿ, ಟೆರೇಸ್‌, ಗ್ರಿಲ್‌ ಹೀಗೆ ಎಲ್ಲೆಲ್ಲಿ ಪಕ್ಷಿಗಳು ಬರಲು ಅವಕಾಶ ಇದೆಯೋ ಅಲ್ಲೆಲ್ಲ ಕಟ್ಟಬೇಕು. ಅದರೊಟ್ಟಿಗೆ ಮನೆಯಲ್ಲಿ ಅಳಿದುಳಿದ ದ್ವಿದಳ ಧಾನ್ಯವನ್ನೋ, ರಾತ್ರಿ ತಿಂದುಳಿದ ಆಹಾರ ಪದಾರ್ಥವನ್ನೋ, ಹಣ್ಣಿನ ಸಿಪ್ಪೆಯನ್ನೋ, ಅಳಿದುಳಿದ ದವಸಧಾನ್ಯ ಸೇರಿ ಪಕ್ಷಿಗಳಿಗೆ ಆಹಾರವಾಗಬಹುದಾದುದನ್ನು ಇಡಬೇಕು. ಆದಷ್ಟು ಜನಸಂದಣಿಯಿಂದ ಎತ್ತರದಲ್ಲಿ ಅಥವಾ ದೂರದಲ್ಲಿ ಈ ವ್ಯವಸ್ಥೆ ಇರುವುದು ಹೆಚ್ಚು ಅನುಕೂಲ. ಆಕಾಶದಲ್ಲಿ ಸ್ವತ್ಛಂದವಾಗಿ ವಿಹರಿಸುವ ಗುಬ್ಬಿಗಳಾದಿಯಾಗಿ ವಿವಿಧ ಜಾತಿಯ ಪಕ್ಷಿಗಳ ಅತಿಸೂಕ್ಷ್ಮ ದೃಷ್ಟಿಗೆ ಈ ವ್ಯವಸ್ಥೆ ಬಿದ್ದರೆ ಖಂಡಿತ ಅವು ಅಲ್ಲಿಗೆ ಹಾರಿಬಂದು ಹಸಿವು, ದಾಹ ಎರಡನ್ನೂ ತೀರಿಸಿಕೊಳ್ಳುತ್ತವೆ.

ಡಿ.ಬಿ. ವಡವಡಗಿ

ಟಾಪ್ ನ್ಯೂಸ್

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.