ಗ್ರಾಪಂಗೆ ಶಕ್ತಿ ತುಂಬಿದ್ದು ರಾಜೀವ ಗಾಂಧಿ: ಪಾಟೀಲ
Team Udayavani, Jun 25, 2020, 8:30 AM IST
ವಿಜಯಪುರ: ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಧ್ಯೇಯದಂತೆ ಸ್ಥಳೀಯವಾಗಿ ಆಡಳಿತ ಯಂತ್ರ ಬಲಗೊಳ್ಳಲು ಗ್ರಾಪಂಗಳಿಗೆ ಹೆಚ್ಚಿನ ಶಕ್ತಿ ತುಂಬಿದವರು ರಾಜೀವ ಗಾಂಧಿ ಎಂದು ಮಾಜಿ ಸಚಿವ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು.
ಸಾರವಾಡ ಗ್ರಾಮದಲ್ಲಿ ನೂತನ ಗ್ರಾಪಂ ಕಟ್ಟಡ, ರಾಜೀವಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಪಂಚಾಯತ್ ರಾಜ್ ವ್ಯವಸ್ಥೆಗೆ ಇಡೀ ದೇಶದಲ್ಲಿಯೇ ಕರ್ನಾಟಕ ಮಾದರಿಯಾಗಿದೆ. ಸೋನಿಯಾ ಗಾಂಧಿಯವರು ಬೇಲೂರು ಘೋಷಣೆಯಂತೆ ಮಹಿಳೆಯರಿಗೆ ಅತೀ ಹೆಚ್ಚಿನ ಪ್ರಾತಿನಿಧ್ಯ ನೀಡಿ ಸ್ಥಳೀಯ ಆಡಳಿತದಲ್ಲಿ ಲಿಂಗ ತಾರತಮ್ಯ ನಿವಾರಿಸಲಾಗಿದೆ. ಆ ಮೂಲಕ ಮಹಿಳಾ ಆಡಳಿತಕ್ಕೆ ನಾಂದಿ ಹಾಡಿದರು ಎಂದರು. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲರೂ ಜಾಗೃತಿ ವಹಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಮನೆಯಲ್ಲಿಯೇ ತಯಾರಿಸಿದ ಮಾಸ್ಕ್ ಬಳಸಿ ಎಂದು ಜನರಿಗೆ ತಿಳಿಹೇಳಿದರು.
ಈ ಸಂದರ್ಭದಲ್ಲಿ ರುದ್ರಮುನಿ ಶ್ರೀಗಳು, ಜಿಪಂ ಸದಸ್ಯೆ ಸುಜಾತಾ ಕಳ್ಳಿಮನಿ, ಸದಾಶಿವ ಚಿಕರೆಡ್ಡಿ, ರವಿಗೌಡ ಪಾಟೀಲ, ರುದ್ರಗೌಡ ಪಾಟೀಲ, ಧರ್ಮು ಹೂಗಾರ, ಪ್ರಭು ಚಿಕರೆಡ್ಡಿ, ಚಂದ್ರಶೇಖರ ವಾಲಿ, ಚಂದ್ರಶೇಖರ ನಡುವಿನಮನಿ, ಅಪ್ಪುಗೌಡ ಕೋಟಿ, ಗ್ರಾಪಂ ಸದಸ್ಯೆ ರೇಣುಕಾ ಕುಂಬಾರ, ರವೀಂದ್ರ ಕಾಂಬಳೆ, ರೇಣುಕಾಚಾರ್ಯ ಹಿರೇಮಠ, ಶಿವಾನಂದ ಕವಲಗಿ, ಸದಾಶಿವ ಕೊಳುಕುರ, ಚನ್ನು ಅವಟಿ, ಶ್ರೀಶೈಲ ಹೂಗಾರ, ಈಶ್ವರಗೌಡ ಪಾಟೀಲ, ಮುತ್ತು ಬಡಿಗೇರ, ಮಲ್ಲಿಕಾರ್ಜುನ ನಿಂಬಾಳ, ಈಶ್ವರಪ್ಪ ಲೋಕುರಿ, ಸಂತೋಷ ಕಳಸರೆಡ್ಡಿ, ಕರೆಪ್ಪ ಹೂಗಾರ, ಶ್ರೀಶೈಲ ಕರಜಗಿ, ಪ್ರಕಾಶ ಬಿದರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Muddebihal: ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಪ್ರತಿಭಟನೆ
Waqf ಜೆಪಿಸಿ ಅಧ್ಯಕ್ಷ ಭೇಟಿ ಹಿನ್ನೆಲೆ: ವಿಜಯಪುರಕ್ಕೆ ಬಂದ ಜೊಲ್ಲೆ ದಂಪತಿ, ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.