ಬಸವನಾಡಲ್ಲಿ ಎಳ್ಳ ಅಮಾವಾಸ್ಯೆ ಸಂಭ್ರಮ

Team Udayavani, Jan 14, 2021, 2:59 PM IST

new moon excitement

ವಿಜಯಪುರ: ಬುಧವಾರ ಬಸವನಾಡಿನ ಎಲ್ಲೆಡೆ ಭೂದೇವಿ ಮಡಿಲಿಗೆ ಅನ್ನದಾತ-ಅನ್ನದಾತೆಯರು ಉಡಿ ತುಂಬುವ ಸಂಭ್ರಮವೋ ಸಂಭ್ರಮ. ಪ್ರಕೃತಿ ವೈಪರಿತ್ಯದ ಮಧ್ಯೆಯೂ ಜೀವ ಹಿಡಿದಿರುವ ಬೆಳೆಗಳಿಗೆ ಎಳ್ಳ ಅಮಾವಸ್ಯೆ ದಿನ ಚರಗ ಚೆಲ್ಲಿ, ಭೂದೇವಿಗೆ ಉಡಿ ತುಂಬಿ, ಪೂಜೆ ಸಲ್ಲಿಸಿ, ಸಮೃದ್ಧ ಫಲ ಸಿಗಲಿ ಎಂದು ಭೂರಮೆಯನ್ನು ಬೇಡಿಕೊಂಡರು. ಸಾಂಪ್ರದಾಯಿಕ ರೈತರು ಎತ್ತುಗಳ ಚಕ್ಕಡಿ ಕಟ್ಟಿಕೊಂಡು ಹೊಲಕ್ಕೆ ಬಂದರೆ, ಆಧುನಿಕ ಅನ್ನದಾತ ಟ್ರಾಕ್ಟರ್‌, ಕಾರು, ಟಂಟಂ, ಆಟೋ, ಬೈಕ್‌ಗಳಂಥ ಸಾರಿಗೆ ಸಾಧನಗಳನ್ನು ಬಳಸಿ ಹೊಲದತ್ತ ಮುಖ ಮಾಡಿದ್ದರು. ತಮ್ಮೊಂದಿಗೆ ಹಬ್ಬದ ಸಂಭ್ರಮ ಸವಿಯಲು ಬಂಧುಗಳು,  ಸ್ನೇಹಿತರನ್ನೆಲ್ಲ ಹೊಲಕ್ಕೆ ಕರೆದೊಯ್ದು ಎಳ್ಳ ಅಮಾಮಾಸ್ಯೆ ಸಂಭ್ರಮ ಆಚರಿಸಿದರು.

ಪುರುಷರು, ಮಹಿಳೆಯರು, ಮಕ್ಕಳು ಎಂಬ ಭೇದವಿಲ್ಲದೇ ಅಬಾಲ ವೃದ್ಧರು ಕೋವಿಡ್‌ ಹಾಗೂ ಅತಿವೃಷ್ಟಿ, ಪ್ರವಾಹದ ಸಂಕಷ್ಟಗಳನ್ನೆಲ್ಲ ಮರೆತು ಎಳ್ಳ ಅಮಾಮಾಸ್ಯೆ ಚರಗದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಇದನ್ನೂ ಓದಿ:ಚರಗ ಚೆಲ್ಲಿ ಭೂತಾಯಿಗೆ ಭಕ್ತಿ ಸಮರ್ಪಣೆ : ರೈತ ಕುಟುಂಬಗಳಿಂದ ಸಡಗರದ ಎಳ್ಳ ಅಮಾವಾಸ್ಯೆ ಆಚರಣೆ

ಎಳ್ಳ ಅಮಾಮಾಸ್ಯೆ ನಿಮಿತ್ತ ಭೂದೇವಿಗೆ ನೈವೇದ್ಯ ನೀಡಲು ಎಳ್ಳು, ಶೇಂಗಾ, ಹೂರಣ ಹೋಳಿಗೆ, ಎಣ್ಣಿ ಹೋಳಿಗೆ ಕರ್ಚಿಕಾಯಿ, ವಿವಿಧ ಬಗೆಯ ಪಾಯಸ, ಜೋಳ-ಸಜ್ಜೆ ಖಡಕ್‌ ರೊಟ್ಟಿ, ಚಪಾತಿ ರೊಟ್ಟಿ, ಹೆಸರು, ಮಡಿಕೆ, ಕಡಲೆ, ತೊಗರಿ ಕಾಳುಗಳ ಪಲ್ಲೆ, ಬದನೆಕಾಯಿ ಪಲೆÂ ಬೇಳೆ, ಹಾಲು, ಮೊಸರು, ತುಪ್ಪ, ಗುರೆಳ್ಳು ಚಟ್ನಿ, ಅಗಸೆ ಹಿಂಡಿ, ಕಡಲೆ ಚಟ್ನಿ ಪುಡಿ, ಹಸಿ ಮೆಣಸಿನಕಾಯಿ ಚಟ್ನಿ, ಕೆಂಪು ಹಿಂಡಿ, ಮೊಸರನ್ನ, ಚಿತ್ರಾನ್ನ, ಪಲಾವ್‌ ಅನ್ನ, ಬಿಳಿ ಅನ್ನ-ಸಾಂಬಾರ, ಹಪ್ಪಳ, ಸಂಡಿಗೆ, ಹೀಗೆ ತರೆಹಾವರಿ ಖಾದ್ಯಗಳಿಂದ ಮಾಡಿದ ಎಡೆಯನ್ನು ನೈವೇದ್ಯ ಮಾಡಿ ಹೊಲದಲ್ಲಿನ ಬೆಳೆಗೆ, ಮರಗಳ ಸುತ್ತ ಕಲ್ಲುಗಳನ್ನು ಇರಿಸಿ (ಪಾಂಡವರು-ಕರ್ಣ) ಮೂರ್ತಿ ಮಾಡಿ ಪೂಜೆ ಸಲ್ಲಿಸಿದರು.

ಅನ್ನದಾತರು ಭೂರಮೆಗೆ ಪೂಜೆ ಸಲ್ಲಿಸಿ ನಮಿಸಿದರೆ, ಅನ್ನದಾತೆಯರು ಉಡಿ ತುಂಬಿ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಬಳಿಕ ತಾವು ಮನೆಯಲ್ಲಿ ತಯಾರಿಸಿ ತಂದ ಊಟದ ಎಲ್ಲ ಎಡೆಯನ್ನು ಹೊಲದ ತುಂಬೆಲ್ಲ ಎರಚುತ್ತ “ಹುಲ್ಲುಲ್ಲಿಗೋ, ಚಳ್ಳಂಬ್ರಿಗೋ’ ಎಂದು ಚೆರಗ ಚಲ್ಲಿದ ಅನ್ನದಾತನ ಮಕ್ಕಳು, ಕರಕಿ ಹುಲ್ಲಿನಂತೆ, ಚಳ್ಳಂಬರಿ ಬಳ್ಳಿಯಂತೆ ತನ್ನ ಹೊಲದಲ್ಲಿ ಬೆಳೆದ ಬೆಳೆ ಹುಲುಸಾಗಿ ಬೆಳೆಯಲಿ ಎಂದು ಘೋಷ ಮೊಳಗಿಸುವುದು ಸಾಮಾನವಾಗಿತ್ತು. ನಂತರ ಕುಟುಂಬದವರು, ತಮ್ಮ ಹೊಲಕ್ಕೆ ಬಂದಿದ್ದ ಕುಟುಂಬದ ಆಪೆ¤ಷ್ಟರು, ಸ್ನೇಹಿತರೊಂದಿಗೆ ಚರಗದ ಹಬ್ಬಕ್ಕೆ ಮಾಡಿದ ವಿವಿಧ ಬಗೆ ಖಾದ್ಯದ ಊಟವನ್ನು ಸಾಮೂಹಿಕ ಭೋಜನದ ಮೂಲಕ ಸವಿದರು. ಸಂಜೆ ಸೂರ್ಯ ವಿದಾಯ ಹೇಳುವ ಗೋಧೂಳಿ ಸಂದರ್ಭದಲ್ಲಿ ಭೂದೇವಿಗೆ ಮತ್ತೂಮ್ಮೆ ನಮಿಸಿ ಮನೆಗಳತ್ತ ಹೆಜ್ಜೆ ಹಾಕಿದ್ದರು.

ಟಾಪ್ ನ್ಯೂಸ್

Viral: ಸೆ**ಕ್ಸ್ ಗಾಗಿ 65ರ ಮುದಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Why KKR Dropped IPL Champion Captain Iyer?: CEO Answers

IPL ಚಾಂಪಿಯನ್‌ ಕ್ಯಾಪ್ಟನ್‌ ಅಯ್ಯರ್‌ ನನ್ನು ಕೆಕೆಆರ್‌ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ

16-kadaba

Kadaba: ಶಸ್ತ್ರಚಿಕಿತ್ಸೆ ವೇಳೆ ಹೃದಯಾಘಾತ; ಯುವಕ ಸಾವು

Waqf Issue: BJP protest against the Congress government across the state on November 4

Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

Hong Kong Sixes 2024: ಒಂದೇ ಓವರ್‌ ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್‌ ಉತ್ತಪ್ಪ

Hong Kong Sixes 2024: ಒಂದೇ ಓವರ್‌ ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್‌ ಉತ್ತಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-muddebihala

Muddebihal: ಅರೆನಗ್ನಾವಸ್ಥೆಯಲ್ಲಿ ಅನಾಮಧೇಯ ಮಹಿಳೆಯ ಶವ ಪತ್ತೆ

ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ

Vijayapura: ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ

7

CHANAKYA CAREER ACADEMY: ಚಾಣಕ್ಯ ಯುವ ಭವಿಷ್ಯಕ್ಕೆ ಭದ್ರ ಬುನಾದಿ

ಎಲ್ಲ ಪಹಣಿಯಲ್ಲೂ ವಕ್ಫ್ ಹೆಸರು ತೆಗೆಯಿರಿ: ಮುಲ್ಲಾ ಅಸೋಸಿಯೇಷನ್ ಆಗ್ರಹ

Waqf issue: ಎಲ್ಲ ಪಹಣಿಯಲ್ಲೂ ವಕ್ಫ್ ಹೆಸರು ತೆಗೆಯಿರಿ: ಮುಲ್ಲಾ ಅಸೋಸಿಯೇಷನ್ ಆಗ್ರಹ

Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು

Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Viral: ಸೆ**ಕ್ಸ್ ಗಾಗಿ 65ರ ಮುದಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Why KKR Dropped IPL Champion Captain Iyer?: CEO Answers

IPL ಚಾಂಪಿಯನ್‌ ಕ್ಯಾಪ್ಟನ್‌ ಅಯ್ಯರ್‌ ನನ್ನು ಕೆಕೆಆರ್‌ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ

17-katapady

Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.