ಜಲಾಶಯ ಹಿನ್ನೀರು ಪ್ರದೇಶ ಸಮೃದ್ಧ
ನೀರುಣಿಸುವ ಚಿಂತೆ ರೈತರಿಗೆ ಬಾಧಿಸದುಈ ಪ್ರದೇಶದ ಭೂಮಿಗೆ ಬೇಕಿಲ್ಲ ಗೊಬ್ಬರ
Team Udayavani, Mar 15, 2020, 11:47 AM IST
ನಿಡಗುಂದಿ: ಬೇಸಿಗೆ ಒಬ್ಬರಿಗೆ ಶಾಪವಾಗಿ ಪರಿಣಮಿಸಿದರೆ ಮತ್ತೊಬ್ಬರಿಗೆ ವರವಾಗುತ್ತದೆ. ಅದ್ಯಾಕ ಈ ಬೇಸಿಗೆ ಬರುತ್ತದೆಯೋ ಎಂದು ಅಲವತ್ತುಕೊಳ್ಳುವರ ಮಧ್ಯ ಅದೇ ಬೇಸಿಗೆ ಕೆಲ ರೈತರನ್ನು ಕೈಹಿಡಿಯುತ್ತದೆ ಎನ್ನುವುದ ಅಷ್ಟೆ ಸತ್ಯ.
ಹೌದು, ಆಲಮಟ್ಟಿ ಜಲಾಶಯದಲ್ಲಿ ನೀರು ಕಡಿಮೆಯಾಗಿ ಜಲಾಶಯದ ಹಿನ್ನೀರು ಸರಿಯುತ್ತಿದ್ದಂತೆ ನಿಧಾನವಾಗಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಹಿನ್ನೀರು ಪ್ರದೇಶದಲ್ಲಿ ನೀರು ಇಳಿಕೆಯಾಗುತ್ತಿದ್ದಂತೆ ಮೂಲ ಜಮೀನಿನ ಮಾಲೀಕರು ಸದ್ಯ ಕಸ ಕೀಳುವುದು, ಹರುಗುವುದು ಕೆಲವೆಡೆ ಬಿತ್ತನೆ ಸೇರಿದಂತೆ ನಾನಾ ಕೃಷಿ ಚಟುವಟಿಕೆಗಳನ್ನು ನಡೆಸುವುದು ನಿತ್ಯ ಕಂಡು ಬರುತ್ತಿವೆ.
ಆಲಮಟ್ಟಿ ಜಲಾಶಯದ ಹಿನ್ನೀರು ವ್ಯಾಪ್ತಿಯ ಆ ಪ್ರದೇಶದಲ್ಲಿ ಅನೇಕ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ನಿಡಗುಂದಿ, ದೇವಲಾಪುರ, ಗೋನಾಳ, ಬೇನಾಳ, ಗಣಿ, ಚಿಮ್ಮಲಗಿ, ಸಿದ್ನಾಥ, ಬಳೂತಿ, ಕೊಲ್ಹಾರ ಸೇರಿದಂತೆ ವಿವಿಧ ಕಡೆಯಲ್ಲಿ ಕೃಷಿ ಕೂಲಿ ಕಾರ್ಮಿಕರು ಸದ್ಯ ನಾನಾ ಬೆಳೆಗಳನ್ನು ಬೆಳೆದು ತಮ್ಮ ವರ್ಷದ ಗಂಜಿಯನ್ನು ಪಡೆದು ಖುಷಿ ಪಡುತ್ತಿದ್ದಾರೆ.
ಮಳೆಗಾಲದಲ್ಲಿ ಸಂಪೂರ್ಣ ಭರ್ತಿಯಾಗುವ ಆಲಮಟ್ಟಿ ಜಲಾಶಯದಲ್ಲಿ ಕಣ್ಣು ಹಾಯಿಸದಷ್ಟೂ ನೀರು ಕಂಡು ಬಂದರೆ ಬೇಸಿಗೆ ಆರಂಭವಾಗುತ್ತಿದ್ದಂತೆ ಹಿನ್ನೀರು ಪ್ರದೇಶದಲ್ಲಿ ನೀರು ಬದಲು ಹಚ್ಚ ಹಸುರಿನಿಂದ ಕಂಗೋಳಿಸುವ ಹಿನ್ನೀರು ಪ್ರದೇಶದಲ್ಲೀಗ ಶೇಂಗಾ, ಸೌತೆಕಾಯಿ, ಅಲಸಂದಿ, ಹೆಸರು, ಗೋ, ಮೆಕ್ಕೆಜೋಳ ಸೇರಿದಂತೆ ನಾನಾ ಬೆಳೆಗಳು ಕಂಗೊಳಿಸುತ್ತವೆ. ಹಿನ್ನೀರು ಪ್ರದೇಶ ಇನ್ನಷ್ಟೂ ನಿಧಾನವಾಗಿ ನೀರು ಇಳಿಮುಖವಾಗುತ್ತಿದ್ದು ಮತ್ತಷ್ಟೂ ರೈತರು ಬಿತ್ತನೆಗೆ ಮುಂದಾಗುತ್ತಿದ್ದಾರೆ. ಹಿನ್ನೀರು ಪ್ರದೇಶದ ಭೂಮಿ ಫಲವತ್ತಾಗಿದ್ದರಿಂದ ಬೆಳೆಗೆ ಗೊಬ್ಬರ ಬೇಕಾಗಿಲ್ಲ.
ತೇವಾಂಶದಿಂದ ಕೂಡಿದ್ದರಿಂದ ನೀರುಣಿಸುವ ಚಿಂತೆ ರೈತರಿಗೆ ಬಾಧಿಸದು. ಹೀಗಾಗಿ ಹಿನ್ನೀರು ಪ್ರದೇಶದಲ್ಲಿ ಕೃಷಿ ಕೂಲಿ ಕಾರ್ಮಿಕರು ಬದುಕು ಕಂಡುಕೊಳ್ಳುತ್ತಿದ್ದಾರೆ. ಪ್ರತಿವರ್ಷ ಫೆಬ್ರುವರಿ-ಮಾರ್ಚ್ ಸಮಯದಲ್ಲಿ ಹಿನ್ನೀರು ಖಾಲಿಯಾಗಿ ಮತ್ತೇ ಹಿನ್ನೀರು ಬರಲು ಸುಮಾರು ಮೂರ್‍ನಾಲ್ಕು ತಿಂಗಳ ಕಾಲಾವಕಾಶವಿರುತ್ತದೆ ಈ ಸಮಯದಲ್ಲಿ ಇಲ್ಲಿನ ಕೃಷಿ ಕಾರ್ಮಿಕರು ನಾನಾ ಬೆಳೆಗಳನ್ನು ಬೆಳೆದು ಉತ್ತಮ ಫಸಲು ಪಡೆಯುತ್ತಾರೆ. ಪ್ರತಿ ಬಾರಿ ಡಿಸೆಂಬರ್, ಜನೆವರಿ ತಿಂಗಳಲ್ಲೇ ನೀರು ಇಳಿಮುಖವಾಗಲು ಆರಂಭವಾಗುತ್ತಿತ್ತು. ಆದರೆ ಈ ಬಾರಿ ಪ್ರವಾಹ ಮತ್ತು ಜಲಾಶಯದ ನೀರು ನಿರ್ವಹಣೆ ಉತ್ತಮವಾಗಿದ್ದರಿಂದ ಹಿನ್ನೀರು ಇಳಿಮುಖವಾಗುವಲ್ಲಿ ತಡವಾಗಿದೆ. ಹೀಗಾಗಿ ತಡವಾಗಿ ಬಿತ್ತನೆ ಮಾಡಲಾಗಿದೆ ಎನ್ನುತ್ತಾರೆ ರೈತರು.
ಜಲಾಶಯ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡ ರೈತರಿಗೆ ಕೃಷಿ ಕಾರ್ಯದಲ್ಲಿ ತೊಡಗಲು ಜಮೀನು ಇಲ್ಲದಂತಾಗಿತ್ತು. ಆದರೆ ಬೇಸಿಗೆ ಸಂದರ್ಭದಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣದಲ್ಲಿ ಇಳಿಮುಖವಾಗುತ್ತಲೇ ಸಾಕಷ್ಟು ಪ್ರದೇಶ ಖಾಲಿಯಾಗುತ್ತದೆ. ಈ ಸಂದರ್ಭದಲ್ಲಿ ಮೊದಲಿನ ಭೂ ಮಾಲಿಕರಲ್ಲದೇ ಜಮೀನು ಇಲ್ಲದ ಅನೇಕರೂ ಕೂಡ ಅಲ್ಲಲ್ಲಿ ಬೆಳೆ ಬೆಳೆದು ಕೃಷಿ ಕಾರ್ಯದಲ್ಲಿ ತೊಡಗುತ್ತಾರೆ.
ಮಳೆಗಾಲದಲ್ಲಿ ಜಲಾಶಯಕ್ಕೆ ನೀರು ಹರಿದು ಬರುವ ಮೊದಲೇ ಫಸಲು ಬರುವುದರಿಂದ, ದುಡಿಮೆಗೆ ತಕ್ಕಷ್ಟು ಫಲ ಸಿಕ್ಕೆ ಸಿಗುತ್ತದೆ. ಹೀಗಾಗಿ ಕೃಷಿ ಕೂಲಿ ಕಾರ್ಮಿಕರ ಮೊಗದಲ್ಲೂ ಹರ್ಷ ಮೂಡಿದೆ. ಹಿನ್ನೀರು ಪ್ರದೇಶದಲ್ಲೇ ಅನೇಕ ರೈತರು ಬೆಳೆಗಳನ್ನು ಬೆಳೆದಿದ್ದಾರೆ. ಈ ಪ್ರದೇಶವೇ ಅವರಿಗೆ ಜಮೀನಾಗಿ ಪರಿಣಮಿಸಿದೆ. ನೀರು ಕಡಿಮೆಯಾಗುತ್ತಲೇ, ಪ್ರತಿ ಬಾರಿ ಕೃಷಿ ಚಟುವಟಿಕೆ ಬಿರುಸುಗೊಳ್ಳುತ್ತದೆ. ಈಗಾಗಲೇ ಹಿನ್ನೀರು ಪ್ರದೇಶದಲ್ಲಿ ನಾನಾ ಬೆಳೆಗಳು ಉತ್ತಮವಾಗಿ ಬೆಳೆದಿದ್ದು ಇನ್ನೆರಡು ತಿಂಗಳಲ್ಲಿ ಕೃಷಿ ಕೂಲಿ ಕಾರ್ಮಿಕರ ಕೈ ಹಿಡಿಯುವುದರಿಂದ ಬೆಳೆಗಳಲ್ಲಿ ಕಳೆಯನ್ನು ತೆಗೆದು ಕುರಿ, ದನಕರುಗಳಿಂದ ಬೆಳೆ ಹಾಳಾಗದಂತೆ ಸಂರಕ್ಷಿಸುತ್ತಾರೆ.
ಹಿನ್ನೀರಿನಿಂದ ಮುಳುಗಡೆಯಾಗಿದ್ದ ಜಮೀನನಲ್ಲಿ ಸದ್ಯ ನೀರು ಇಳಿಮುಖವಾಗಿದ್ದು ಹಲವಾರು ರೈತರು ಶೇಂಗಾ ಬಿತ್ತನೆ ಮಾಡಿದ್ದಾರೆ. ಹಿನ್ನೀರು ಪ್ರದೇಶದ ನೂರಾರು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿ ಬೆಳೆ ಪಡೆದುಕೊಳ್ಳುವ ಬಡ ಸಂತ್ರಸ್ತ ರೈತರಿಗೆ ಬೇಸಿಗೆ ವರದಾನವಾಗುತ್ತದೆ.
ಶರಣಪ್ಪ ಮುರನಾಳ,
ರೈತ, ನಿಡಗುಂದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.