ಚಿತ್ರ ಕಲಾವಿದರಿಗೆ ಹತಾಶೆ ಸಲ್ಲ
Team Udayavani, Dec 15, 2018, 1:42 PM IST
ವಿಜಯಪುರ: ಜಗತ್ತಿನ ಎಲ್ಲ ಕಲಾವಿದರಿಗೂ ಬಡತನ ಹಾಗೂ ಕಷ್ಟದ ಬದುಕು ಸಹಜವಾಗಿಯೇ ಇವೆ. ಹೀಗಾಗಿ ಕಲಾವಿದರು ಹತಾಶರಾಗಿ ತಮ್ಮ ಆಸ್ಮಿತೆಯಾಗಿರುವ ಕಲೆಯಿಂದ ವಿಮುಖರಾಗದಿರಿ ಎಂದು ಖ್ಯಾತ ಚಿತ್ರಕಲಾವಿದ,
ಲಲಿತಕಲಾ ಆಕಾಡೆಮಿ ಮಾಜಿ ಸದಸ್ಯ ಡಾ| ಜಿ.ಎಸ್. ಭೂಸಗೊಂಡ ವಿಷಾದಿಸಿದರು.
ಶುಕ್ರವಾರ ನಗರದಲ್ಲಿ ಬಾಲಕರ ಸರ್ಕಾರಿ ಪಪೂ ಕಾಲೇಜಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2018-19ನೇ ಸಾಲಿನ ಶೈಕ್ಷಣಿಕ ವರ್ಷದ ಎರಡನೇ ಅವಧಿಯ ಚಿತ್ರ ಸಿಂಚನ ಎಂಬ ಪಠ್ಯಪುಸ್ತಕ ಆಧಾರಿತದ ಒಂದು ದಿನದ ಜಿಲ್ಲಾಮಟ್ಟದ ಚಿತ್ರಕಲಾ ಶಿಕ್ಷಕರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಚಿತ್ರಕಲಾ ಶಿಕ್ಷಕರು ಧೃತಿಗಡೆದ ಕಲಾವೃತ್ತಿ ಮುಂದುವರಿಸಿಕೊಂಡು ಹೋಗಬೇಕು. ಕಲೆಯನ್ನು ಮಕ್ಕಳಲ್ಲಿ ಜಾಗೃತಿಗೊಳಿಸಿ ಅರಳಿಸಬೇಕು. ಕಲೆಯ ಅಭಿರುಚಿ ಕಳೆದುಕೊಳ್ಳದೆ ಕಲಾ ಕ್ಷೇತ್ರ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ-ಧರ್ಮವಾಗಿದೆ. ಕಾರಣ ಹತಾಶರಾಗಿ ಚಿತ್ರಕಲಾ ಕ್ಷೇತ್ರದಿಂದ ವಿಮುಖರಾಗದೇ ಖುಷಿಯಿಂದ ಕಾಯಕ ನಿರ್ವಹಿಸಬೇಕು. ಎಲ್ಲೆವರೆಗೆ ನಿಮ್ಮ ಸಾಮರ್ಥ್ಯ ವರೆಗೆ ಹಚ್ಚುವುದಿಲ್ಲವೋ ಅಲ್ಲಿವರೆಗೆ ನಿಮ್ಮ ಅಸ್ತಿತ್ವಕ್ಕೆ ಹೆಣಗಬೇಕಾಗುತ್ತದೆ. ಸಾಧಿಸುವ ಛಲಗಾರಿಕೆ ಇದ್ದಲ್ಲಿ ಸಂಕಷ್ಟಗಳನ್ನು ಸಕಾರಾತ್ಮಕ ಸವಾಲುಗಳನ್ನು ಸ್ವೀಕರಿಸಿ ಕಲಾಪ್ರೌಢಿಮೆ ಮೆರೆಯಬೇಕು ಎಂದರು.
ಸಂಘದ ಜಿಲ್ಲಾಧ್ಯಕ್ಷ ಎಸ್.ಐ. ಬಗಲಿ ಮಾತನಾಡಿ, ಇಂದಿನ ಯುವ ಸಮೂಹ ಕ್ರಿಯಾಶೀಲರಾಗಿ ಚಟುವಟಿಕೆ ಹಾಗೂ ಲವಲವಿಕೆಯಿಂದ ಶೈಕ್ಷಣಿಕ ಕಾರ್ಯ ಕೈಗೊಳ್ಳಲು ಚಿತ್ರಕಲಾ ಶಿಕ್ಷಣದ ಅಭ್ಯಾಸ ಪೂರಕವಾಗಿದೆ. ಒಗ್ಗಟ್ಟಿನಿಂದ ಕೆಲಸ
ನಿರ್ವಹಿಸಿ ಚಿತ್ರಕಲಾ ಶಿಕ್ಷಕರ ಸಂಘಟನೆ ಇನ್ನಷ್ಟು ಬಲಪಡಿಸಬೇಕು. ವೈಯಕ್ತಿಕ ಜೀವನದಲ್ಲಿ ಸ್ವಲ್ಪ ಸಮಯ ಮೀಸಲಿರಿಸಿ ತ್ಯಾಗಭಾವದಿಂದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ವಿನಯತೆಯಿಂದ ಪ್ರಾಮಾಣಿಕತೆಯಿಂದ ತನುಮನ ಧನದಿಂದ ಒಲವು ತೋರಿ ಶ್ರಮಿಸಿದರೆ ಖಂಡಿತ ಸಂಘ ಬಲಗೊಳ್ಳುತ್ತದೆ ಎಂದರು.
ಕೋಲ್ಯಾಜ್ ಆರ್ಟ ಕಲೆಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟ ಸಿಂದಗಿಯ ಕಲಾವಿದ ಈರಣ್ಣ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಈರಣ್ಣ ಅವರು ಮರದ ಚುಕ್ಕೆಯಿಂದ ಸುಂದರ ಭಾವಚಿತ್ರ ನಿರೂಪಿಸಿ ಗಮನ ಸೆಳೆದರು.
ಸರಕಾರಿ ಪಿ.ಯು. ಕಾಲೇಜ್ ಹೈಸ್ಕೂಲ್ ವಿಭಾಗದ ಹಿರಿಯ ಶಿಕ್ಷಕ ಪಿ.ಎಸ್. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ವಿಭಾಗೀಯ ಸಂಘಟನಾ ಕಾರ್ಯದರ್ಶಿ ಜಿ.ಎಸ್. ಪಾಟೀಲ, ಆರ್.ಎಸ್. ಬಿರಾದಾರ, ಗವೂರ, ಸಂಜೀವ ತೊತಭಾಗಿ, ಬಿ.ಟಿ. ಹುಲ್ಲೂರ, ನಾಗರಾಜ ಪತ್ತಾರ, ಬಿ.ಆರ್. ಪ್ರಧಾನಿ ವೇದಿಕೆಯಲ್ಲಿದ್ದರು. ಎಸ್.ಐ. ಬಗಲಿ ಸ್ವಾಗತಿಸಿದರು. ಬಾಪುಗೌಡ ಭಂಟನೂರ ನಿರೂಪಿಸಿದರು. ಸಂಜೀವ ಬಡಿಗೇರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.