ಲೋಪಗಳ ಹಿನ್ನೆಲೆ : ಸ್ಕ್ಯಾನಿಂಗ್ ಕೇಂದ್ರಗಳಿಗೆ ನೋಟಿಸ್
Team Udayavani, Mar 31, 2021, 4:43 PM IST
ವಿಜಯಪುರ : ಭ್ರೂಣಲಿಂಗ ಪತ್ತೆ ಪಿಸಿಪಿಎನ್ ಡಿಟಿ-1994 ಕಾಯ್ದೆ ಅನ್ವಯ ಲೋಪ ಕಂಡುಬಂದ ವಿವಿಧ ಸ್ಕ್ಯಾನಿಂಗ್ ಕೇಂದ್ರಗಳಿಗೆ ಆರೋಗ್ಯ ಇಲಾಖೆ ಮೂಲಕ ಪಿಸಿಪಿಎನ್ ಡಿಟಿ ಜಿಲ್ಲಾ ಸಕ್ಷಮ ಪ್ರಾಧಿಕಾರಿಯಾದ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಡಾ.ಮಹಮದ್ ಅತೀಕ ಅಹಮದ್ ಮೆಡಿಸ್ಕ್ಯಾನಿಂಗ್ ಡಿಜಿಟಲ್ ಎಕ್ಸರೇ ಕೇಂದ್ರ, ಡಾ.ಸತೀಶ ಪಾಟೀಲ ಶ್ರೀ ಬನಶಂಕರಿ ಡೈಗ್ನೋಸ್ಟಿಕ್ ಸ್ಕ್ಯಾನ್ ಸೆಂಟರ್, ಡಾ.ಎಸ್.ಐ. ಕೋರಿಶಟ್ಟಿ ಸಾಸನೂರ ಹಾಸ್ಪಿಟಲ್, ಡಾ.ರಾಜಶೇಖರ ಮುಚ್ಚಂಡಿ, ದಾನೇಶ್ವರಿ ಡೈಗ್ನೋಸ್ಟಿಕ್ ಸೆಂಟರ್, ಡಾ.ರಜನಿ ಪಿ. ಜಾಧವ್ ರಜನಿ ಸೋನೋಗ್ರಾಫಿ ಮತ್ತು ಎಕ್ಸರೇ ಕೇಂದ್ರ, ಡಾ.ಮಹಾನಂದ ಬಿ. ಪಾಟೀಲ ಆದಿತ್ಯ ಜನರಲ್ ಮತ್ತು ಮೆಟರನಿಟಿ ಹಾಸ್ಪಿಟಲ್ ಇವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ನೋಟಿಸ್ ನೀಡಿದ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ದಾಖಲೆ ನಿರ್ವಹಣೆ, ಸೂಕ್ತ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸದಿರುವುದು, ಐಇಸಿ ಬೋರ್ಡ್ ಸಣ್ಣದಾಗಿ ಅಳವಡಿಕೆ, ಸ್ಕ್ಯಾನಿಂಗ್ ರೂಮ್ ಗೆ ಹೊಂದಿಕೊಂಡು ಶೌಚಾಲಯ ಇಲ್ಲದಿರುವುದು, ಕೌನ್ಸಿಂಗ್ ರೂಮ್ ನಿರ್ವಹಣೆ ಮಾಡದಿರುವುದು, ಶಿಫಾರಸು ಮಾಡಿದ ವೈದ್ಯರು, ರೋಗಿಗಳ ಹೆಸರಿಗೆ ಹೊಂದಾಣಿಕೆ ಆಗದಿರುವುದು, ಗರ್ಭಿಣಿಯರ ಹೆಸರು, ಮೊಬೈಲ್ ಸಂಖ್ಯೆ ದಾಖಲಿಸದಿರುವುದು, ಸ್ಕ್ಯಾನಿಂಗ್ ದರಪಟ್ಟಿ ಅಳವಡಿಸದ, ರಸೀದಿ ಪುಸ್ತಕ ಇರಿಸದಂಥ ಹಲವು ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ ಎಂದು ಆಯಾ ಕೇಂದ್ರಗಳಲ್ಲಿನ ಲೋಪಗಳ ಆಧಾರದಲ್ಲಿ ನೋಟಿಸ್ ನೀಡಲಾಗಿದೆ ಎಂದು ವಿವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.