ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಎನ್‌ಟಿಪಿಸಿ ಸಿಬ್ಬಂದಿ ಪ್ರತಿಭಟನೆ
Team Udayavani, Sep 22, 2017, 1:58 PM IST
ವಿಜಯಪುರ: ಕೂಡಗಿ ಎನ್‌ಟಿಪಿಸಿ ಟೌನ್‌ಶಿಪ್ ಪ್ರದೇಶದಲ್ಲಿ ಸಿಬ್ಬಂದಿಯ ಮಕ್ಕಳಿಗೆ ಶಾಲೆ, ಆಸ್ಪತ್ರೆ ಹಾಗೂ ಕುಡಿಯುವ ನೀರಿನಂಥ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಎನ್‌ಟಿಪಿಸಿ ಸಿಬ್ಬಂದಿ ಪ್ರತಿಭಟನೆ ಇಳಿದಿದ್ದಾರೆ. ಬರುವ ಹತ್ತು ದಿನಗಳ ಕರ್ತವ್ಯಕ್ಕೆ ಅಡ್ಡಿಯಾಗದಂತೆ ಕಾಲ ನಿತ್ಯವೂ ಒಂದು ಗಂಟೆ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಗುರುವಾರ ಈ ಹೋರಾಟಕ್ಕೆ ಚಾಲನೆ ನೀಡಿದ್ದಾರೆ.
ಎನ್‌ಟಿಪಿಸಿ ಕೂಡಗಿ ಘಟಕದ ನೌಕರರ ಸಂಘದ ಅಧ್ಯಕ್ಷ ಸುನಿಲಕುಮಾರ, ಶ್ರೀನಿವಾಸರಾವ್ ನೇತ್ರುತ್ವದಲ್ಲಿ ಪ್ರತಿಭಟನೆ ಆರಂಭಿಸಿದ್ದು, ಎನ್‌ಟಿಪಿಸಿ ನೌಕರರು ಘಟಕ ಪ್ರದೇಶದಲ್ಲಿ ವಸತಿ ಮಾಡಬೇಕೆಂಬ ಸದಾಶಯದಿಂದ ಕೂಡಗಿ ಘಟಕದ ಪಕ್ಕದಲ್ಲೇ ಟೌನ್‌ಶಿಪ್ ನಿರ್ಮಿಸಿದ್ದು, ಮೂಲ ಸೌಲಭ್ಯಗಳಿಲ್ಲದೇ ಸಿಬ್ಬಂದಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ ಎಂದು ದೂರಿದರು.
ಟೌನ್‌ಶಿಪ್‌ನಲ್ಲಿ ಈಗಾಗಲೇ ತಲಾ 56 ಮನೆಗಳ ಎರಡು ವಸತಿ ಸಮುತ್ಛಯಗಳು ಹಾಗೂ ಬ್ಯಾಚುಲರ್‌ಗಳ 100 ಜನರು ಈಗಾಗಲೇ ಟೌನ್‌ಶಿಪ್‌ನ ವಸತಿ ಸಮುತ್ಛಯದ ಮನೆಗಳಿಗೆ ಕುಟುಂಬ ಸ್ಥಳಾಂತರಗೊಂಡಿದೆ.
ಆದರೆ ಸದರಿ ಸಿಬ್ಬಂದಿ ವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳ ಶೈಕ್ಷಣಿಕ ಅನುಕೂಲಕ್ಕೆ ಶಾಲೆಗಳಿಲ್ಲ. ಅನಾರೋಗ್ಯಕ್ಕೆ ಸಿಲುಕಿದರೆ ಚಿಕಿತ್ಸೆ ಪಡೆಯಲು ಆಸ್ಪತ್ರೆ ಇಲ್ಲ. ಹೀಗಾಗಿ ಟೌನ್‌ಶಿಪ್ ಗೆ ವಾಸಿಗಳು ಮೂಲಭೂತ ಸಮಸ್ಯೆ ಪರಿಹಾರಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಮಂಡಳಿಯನ್ನು ಆಗ್ರಹಿಸಿದರು.
ಸೂಕ್ತ ಶಾಲೆ ಹಾಗೂ ಆಸ್ಪತ್ರೆಯ ಸೌಲಭ್ಯಗಳಿಲ್ಲದ ಕಾರಣ ಬಹುತೇಕ ಅಧಿಕಾರಿ-ಸಿಬ್ಬಂದಿ ಟೌನ್‌ಶಿಪ್‌ಗೆ ಸ್ಥಳಾಂತರಗೊಳ್ಳಲು ನಿರಾಕರಿಸುತ್ತಿದ್ದಾರೆ. ಬರುವ ಶೈಕ್ಷಣಿಕ ವರ್ಷಾಂಭಕ್ಕೆ ಕೇವಲ ಆರು ತಿಂಗಳ ಬಾಕಿ ಇದೆ.
ಈಗಿನಿಂದಲೇ ಆಡಳಿತ ಮಂಡಳಿ ಶೆ„ಕ್ಷಣಿಕ ಸೌಲಭ್ಯಕ್ಕೆ ಸಿದ್ಧತೆ ಮಾಡಿಕೊಂಡಲ್ಲಿ ಸಿಬ್ಬಂದಿಯ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ದೊರಕಿಸಿಕೊಡಲು ಅನುಕೂಲವಾಗುತ್ತದೆ ಎಂದು ವಿವರಿಸಿದರು. ಕಳೆದ ಹಲವು ದಿನಗಳಿಂದ ಟೌನ್ ಶಿಪ್‌ನಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಬೇಡಿಕೆಗಳ ಮನವಿಯನ್ನು ಕೂಡಗಿ ಘಟನದ ವ್ಯವಸ್ಥಾಪಕ ನಿರ್ದೇಶಕರ ಮೂಲಕ ಎನ್‌ಟಿಪಿಸಿ ಆಡಳಿತಕ್ಕೆ ರವಾನಿಸಿಲಾಗಿದೆ. ಮನವಿಯಲ್ಲಿ ನೀಡಿದ್ದ 10 ದಿನಗಳ ಕಾಲಮಿತಿ ಮೀರಿದ್ದರೂ ಆಡಳಿತ ಮಂಡಳಿ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಹೀಗಾಗಿ ಗುರುವಾರದಿಂದ 10 ದಿನಗಳ ಕಾಲ ನಿತ್ಯವೂ 1 ಗಂಟೆ ಘಟಕದ ಆಡಳಿತ ಕಚೇರಿ ಎದುರು ಧರಣಿ ನಡೆಸಲು ಮುಂದಾಗಿದ್ದೇವೆ.
ಅಷ್ಟರಲ್ಲಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಹೋರಾಟ ನಿರ್ಧರಿಸುವುದಾಗಿ ಹೋರಾಟ ನಿರತ ಎನ್‌ಟಿಪಿಸಿ ಸಿಬ್ಬಂದಿ ತಿಳಿಸಿದ್ದಾರೆ. ಈ ಮಧ್ಯೆ ಎನ್‌ಟಿಪಿಸಿ ಕೂಡಗಿ ಘಟಕದ ವ್ಯವಸ್ಥಾಪಕ ನಿರ್ದೇಶಕರಾದ ಸಂಜೀವ ಕಿಶೋರ ಅವರು ಕೇಂದ್ರ ಸ್ಥಾನದಲ್ಲಿ ಇಲ್ಲದ ಕಾರಣ, ಅವರು ಬಂದ ನಂತರ ಸಮಸ್ಯೆ ಪರಿಹಾರ ಕಂಡುಕೊಳ್ಳುವುದಾಗಿ ಪ್ರಭಾರಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ
Hosanagara: ನಗರದ ಹೋಬಳಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ
Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್; ಪ್ರವಾಸಿಗರಿಗೆ ಹೊಸ ಆಕರ್ಷಣೆ
Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.