ಆನ್‌ಲೈನ್ ಔಷಧ ವ್ಯಾಪಾರ ಮಾರಕ
Team Udayavani, Oct 15, 2018, 1:59 PM IST
ವಿಜಯಪುರ: ಪ್ರಸಕ್ತ ಸಂದರ್ಭದಲ್ಲಿ ಔಷಧ ವ್ಯಾಪಾರಿಗಳಿಗೆ ಆನ್‌ಲೈನ್ ಮೂಲಕ ಔಷಧ ವಹಿವಾಟು ಮಾರಕ ಪರಿಸ್ಥಿತಿ ತಂದಿದೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು. ನಗರದ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ 36ನೇ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಔಷಧ ಆನ್‌ಲೈನ್ ವ್ಯಾಪಾರದಿಂದ ಅಧಿಕೃತ ಔಷಧ ವ್ಯಾಪಾರಸ್ಥರು ಸಮಸ್ಯೆಗೆ ಸಿಲುಕಿದ್ದಾರೆ. ಡಿ-ಫಾರ್ಮ್ಪ ದವೀಧರನಾಗಿ ಔಷಧ ವ್ಯಾಪಾರಿ ಆಗಿರುವ ನನಗೆ ಪ್ರಸಕ್ತ ಸಂದರ್ಭದಲ್ಲಿ ಔಷಧ ವ್ಯಾಪಾರಿಗಳು ಅನುಭವಿಸುತ್ತಿರುವ ಎಲ್ಲ ಸಮಸ್ಯೆಗಳ ಅರಿವಿದೆ. ಈ ವಿಷಯದಲ್ಲಿ ಔಷಧ ವ್ಯಾಪಾರಿಗಳೆಲ್ಲ ಸಂಘಟಿತವಾಗಿ ಹೋರಾಟಕ್ಕೆ ಅಣಿಯಾಗಬೇಕು. ಆಗಲೇ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲು ಸಾಧ್ಯವಿದ್ದು, ನಿಮ್ಮ ಹೋರಾಟಕ್ಕೆ ನಾನು ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.
ಈಚೆಗೆ ವೈದ್ಯರು ತಮ್ಮ ನರ್ಸಿಂಗ್ ಹೋಂಗಳಲ್ಲೇ ಸ್ವಂತ ಔಷಧ ಅಂಗಡಿ, ಪ್ರಯೋಗಾಲಯ ಕೂಡ ತೆರೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಔಷಧ ವ್ಯಾಪಾರ ಹಾಗೂ ಪ್ರಯೋಗಾಲಯದ ಮಾಲೀಕರು ನಿರುದ್ಯೋಗಿಗಳಾಗಿ ಭವಿಷ್ಯದ ಜೀವನಕ್ಕೆ ಸಂಕಟ ಪಡುವಂತಾಗಿದೆ ಎಂಬ ಸಮಸ್ಯೆ ಅರಿವು ನನಗಿದೆ ಎಂದರು. ಜನ ಸಾಮಾನ್ಯರಲ್ಲಿ ಔಷಧ ವ್ಯಾಪಾರಿಗಳಲ್ಲಿ ಅಪಾರ ವಿಶ್ವಾಸಾರ್ಹತೆ ಇದ್ದು, ಸಣ್ಣ ಆರೋಗ್ಯ ಸಮಸ್ಯೆಗೂ ಜನರು ತಕ್ಷಣ ಬರುವುದೇ ಔಷಧ ಅಂಗಡಿಗೆ. ವೈದ್ಯರು ಇಲ್ಲದ ಸಂದರ್ಭದಲ್ಲಿ ಔಷಧ ವ್ಯಾಪಾರಿಗಳೇ ಪ್ರಥಮ ಚಿಕಿತ್ಸಕರಂತೆ ಕೆಲಸ ಮಾಡುತ್ತಿದ್ದಾರೆ. ಇದು ಜನರು ಔಷಧ ವ್ಯಾಪಾರಸ್ಥರ ಮೇಲೆ ಇರಿಸಿರುವ ಅಪಾರ ನಂಬಿಕೆಯ ಒಂದು ನಿದರ್ಶನ. ಆನ್‌ಲೈನ್ ಔಷಧ ವ್ಯಾಪಾರದಿಂದ ಈ ಎಲ್ಲ ನೈಜ ಬಾಂಧವ್ಯಗಳಿಗೆ ಧಕ್ಕೆ ಉಂಟಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಔಷಧ ಹಿರಿಯ ಉದ್ಯಮಿ ಡಿ.ಎಸ್. ಗುಡ್ಡೋಡಗಿ ಅವರಿಗೆ ವಾಣಿಜ್ಯ ಭಾಸ್ಕರ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಿ.ಎಸ್.ಗುಡ್ಡೋಡಗಿ, ಔಷಧ ವ್ಯಾಪಾರಸ್ಥರು ನನ್ನ ಮೇಲೆ ಅಭಿಮಾನವಿರಿಸಿ ಪ್ರಶಸ್ತಿ ನೀಡುತ್ತಿರುವುದಕ್ಕೆ ನಾನು ಚಿರಋಣಿ ಎಂದು ತಮ್ಮ ಜೀವನಾನುಭವಗಳನ್ನು ಪ್ರೇಕ್ಷಕರ ಮುಂದೆ ಹಂಚಿಕೊಂಡರು. ಔಷಧ ವ್ಯಾಪಾರಸ್ಥರ ಸಂಘದ ರಾಜ್ಯಾಧ್ಯಕ್ಷ ರಘುನಾಥರೆಡ್ಡಿ, ಸಂಘದ ಜಿಲ್ಲಾಧ್ಯಕ್ಷ ಕೆ.ಆರ್.ಎತ್ತಿನಮನಿ, ಕಲಬುರಗಿ ವಲಯದ ಉಪ ಔಷಧ ನಿಯಂತ್ರಕ ಗೋಪಾಲ ಭಂಡಾರಿ, ಸಹಾಯಕ ಔಷಧ ನಿಯಂತ್ರಕ ಅಣ್ಣಾರಾವ್ ನಾಯಕ, ಸಹಾಯಕ ಔಷಧ ನಿಯಂತ್ರಕಿ ಶ್ವೇತಾ ನಾಗಠಾಣ, ಮನೋಹರ ಶೆಟ್ಟಿ, ಗಂಗಾಧರ ಸಾಲಕ್ಕಿ, ರಮೇಶ ಯಳಮೇಲಿ, ವಿ.ಜಿ. ಕೋರಚಗಾಂವ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.