ದೇಶಭಕ್ತಿ ಬೆಳೆಸುವ ಕಾರ್ಯಕ್ರಮ ಸಂಘಟಿಸಿ
Team Udayavani, Aug 18, 2017, 12:56 PM IST
ಇಂಡಿ: ಮಕ್ಕಳಲ್ಲಿ ದೇಶಭಕ್ತಿ ಬೆಳೆಸುವ ವಿಶೇಷ ಕಾರ್ಯಕ್ರಮ ಸಂಘಟಿಸಬೇಕು ಎಂದು ಎಸ್‌ಎಸ್‌ವಿವಿ ಸಂಘದ ಪ್ರಧಾನ
ಕಾರ್ಯದರ್ಶಿ ಪ್ರಭಾಕರ ಬಗಲಿ ಹೇಳಿದರು. ಪಟ್ಟಣದ ಶ್ರೀ ಶಾಂತೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಎ.ಜಿ.ಗಾಂಧಿ
ಬಾಲಕಿಯರ ಪ್ರೌಢಶಾಲೆ ಹಾಗೂ ಶಾಂತೇಶ್ವರ ಪ.ಪೂ. ಕಾಲೇಜ, ಮಹಿಳಾ ಪ.ಪೂ. ಕಾಲೇಜುಗಳ ಅಡಿಯಲ್ಲಿ ಹಮ್ಮಿಕೊಂಡ 71ನೇ ಸ್ವಾತಂತ್ರ್ಯದಿನದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಯುವಕರಿಗೆ ದೇಶಾಭಿಮಾನ ಬೆಳೆಸುವುದರ ಮೂಲಕ ಆ ತ್ಯಾಗಿಗಳ ಕನಸನ್ನು ನನಸಾಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದರು. ಸಂಸ್ಥೆಯ ಅಧ್ಯಕ್ಷ ಬಸವರಾಜ ದೇವರ, ಎಂ.ಎಫ್. ದೋಶಿ, ಕಾಸುಗೌಡ ಬಿರಾದಾರ, ಸದಾಶಿವಗೌಡ ಬಿರಾದಾರ, ಅಶೋಕಗೌಡ ಪಾಟೀಲ, ಸಿದ್ದಣ್ಣ ತಾಂಬೆ, ಆರ್.ವಿ. ದೇಶಪಾಂಡೆ, ಪ್ರಾಚಾರ್ಯ ಶೈಲಜಾ ತೆಲ್ಲೂರ, ಎ.ಬಿ. ಪಾಟೀಲ, ಎಸ್.ಎಸ್. ಶಿರಗೂರ, ಜಿ.ಜಿ. ಚವ್ಹಾಣ, ರಾಘವೇಂದ್ರ ಕುಲಕರ್ಣಿ ಉಪಸ್ಥಿತರಿದ್ದರು. ಇಂಡಿ: ಶತಮಾನಗಳಿಂದ ದಾಸ್ಯದ ಸಂಕೋಲೆಯಲ್ಲಿ ನರಳುತ್ತಿರುವ ಭಾರತ ಮಾತೆಯನ್ನು ಬ್ರಿಟಿಷರಿಂದ ಮುಕ್ತಿಗೊಳಿಸಲು ಅನೇಕ ದೇಶ ಭಕ್ತರು ತ್ಯಾಗ-ಬಲಿದಾನ ಮಾಡಿದ್ದಾರೆ. ಇಂತಹ ಪವಿತ್ರ ದಿನದಂದು ಶ್ರೀ ಮಂಜುನಾಥ ಸೇವಾ ಸಂಸ್ಥೆಯವರು ಪರಿಸರ ಸ್ವತ್ಛತೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಕಾಂತು ಇಂಡಿ ಹೇಳಿದರು. ಪಟ್ಟಣದ ಮಂಜುನಾಥ ಸೇವಾ ಸಂಸ್ಥೆಯಲ್ಲಿ ಹಮ್ಮಿಕೊಂಡ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ದೇಶ ವಿಶಿಷ್ಟ ಸಂಪ್ರದಾಯ ಹೊಂದಿದ ಶ್ರೀಮಂತ ರಾಷ್ಟ್ರವಾಗಿದೆ.
ಭಾರತದಲ್ಲಿ ಪ್ರಾಕೃತಿಕವಾಗಿ ಜಲ, ಅರಣ್ಯ, ಖನಿಜ ಸಂಪನ್ಮೂಲ ಹೊಂದಿದೆ. ಇವುಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಪರಿಸರದ ಬಗ್ಗೆ ಪ್ರತಿಯೊಬ್ಬರು ಕಾಳಜಿಯಿರಬೇಕು. ಗಿಡಮರಗಳನ್ನು ಬೆಳೆಸಿ ನಾಡನ್ನು ಉಳಿಸಿ ಎಂದು ಸೇವಾ ಸಂಸ್ಥೆಯ ಯೋಜನಾಧಿಕಾರಿ ಗಣೇಶ ಪ್ರಾಸ್ತಾವಿಕ ಮಾತನಾಡಿದರು. ನಂದಿ ಬಸವೇಶ್ವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ವೀರಣ್ಣಗೌಡ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಸಿದ್ದುಡಂಗಾ, ಯೋಜನಾಧಿಕಾರಿ ಗಣೇಶ ಸರ್, ಡಾ| ಕಾಂತು ಇಂಡಿ,
ಜಿ.ಜಿ.ಬರಡೋಲ, ಶಿಕ್ಷಕ ಕಡಕೋಳ, ಎಸ್.ಆಯ್.ಹಿರೇಮಠ, ವ್ಹಿ.ಪಿ.ಚಿಮ್ಮಾಗೋಳ, ವಾಯ್.ಬಿ.ತಮಶೆಟ್ಟಿ ಇದ್ದರು.
ವೈ.ಬಿ.ಚಿಮ್ಮಾಗೋಳ ಸ್ವಾಗತಿಸಿದರು. ಮೇಲ್ವಿಚಾರಕಿ ಗೀತಾ ನಿರೂಪಿಸಿದರು.ಶಿಕ್ಷಕ ಜಿ.ಜಿ ಬರಡೋಲ ವಂದಿಸಿದರು.
ಇಂಡಿ: ಅನೇಕ ವೀರಮಹನೀಯರ ಹೋರಾಟದ ಫಲದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ ಎಂದು ಬಿಜೆಪಿ ಹಿಂದುಳಿದ
ಮೋರ್ಚಾ ಉಪಾಧ್ಯಕ್ಷ ಶೀಲವಂತ ಉಮಾಣಿ ಹೇಳಿದರು. ಪಟ್ಟಣದ ಗಾಂಧಿ ಬಜಾರದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಉಚಿತ ನೋಟಬುಕ್ ವಿತರಿಸಿ ಅವರು ಮಾತನಾಡಿದರು. ಭಾರತ ದೇಶ ಅನೇಕ ಭಾಷೆ, ಧರ್ಮ ಅನೇಕ ಜಾತಿಗಳಿಂದ ಕೂಡಿದ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ದೇಶದಲ್ಲಿ ಕೋಮುವಾದ, ಭ್ರಷ್ಟಾಚಾರ, ಜಾತಿ ಸೇರಿದಂತೆ ಅನಿಷ್ಟ ಪದ್ದತಿ ನಿರ್ಮೂಲನೆಗಾಗಿ ಶ್ರಮಿಸಬೇಕಾಗಿದೆ ಎಂದರು. ಮಕ್ಕಳಿಗೆ ದೇಶಾಭಿಮಾನ ಬೆಳೆಸಲು ರಾಷ್ಟ್ರನಾಯಕರ, ಮಹಾನ್ ಪುರುಷರ , ಶರಣರ ,ದಾರ್ಶನಿಕರ ಜೀವನ ಆಧಾರಿತ ವಿಷಯ ಹೇಳಬೇಕು ಎಂದು ಹೇಳಿದರು. ಪುರಸಭೆ ಸದಸ್ಯ ಸೋಮು ನಿಂಬರಗಿಮಠ, ಎಸ್‌ಡಿಎಂಸಿ ಅಧ್ಯಕ್ಷ ಶಾಂತುಗೌಡ ಬಿರಾದಾರ, ಶ್ರೀಮಂತ ಬಾರಿಕಾಯಿ, ಸಂತು ಗವಳಿ, ಸೋಮು ಬಿರಾದಾರ, ಮಂಜು ತೆನ್ನೆಳ್ಳಿ, ರಮೇಶ ಹದಗಲ್ಲ ಭಾಗವಹಿಸಿದ್ದರು. ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿರುವ ವಿಶ್ವಭಾರತಿ ವಿದ್ಯಾಕೇಂದ್ರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಪ್ರಮೀಳಾ ಉತ್ತಮ ಶಿವಶರಣ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ವಿ. ಜಿ ಕಲ್ಮನಿ, ಬಿ.ಎಸ್.ಉಪ್ಪಿನ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವುದರ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕು ಎಂದು ಹೇಳಿದರು. ಗ್ರಾ.ಪಂ ಉಪಾಧ್ಯಕ್ಷ ದಯಾನಂದ ಹಿರೇಮಠ ಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ್ರಾ.ಕೃ.ಸ ಬ್ಯಾಂಕಿನ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಹೊನ್ನಪ್ಪ ಮೇತ್ರಿ, ಚೆನ್ನುಗೌಡ ಬಿರಾದಾರ, ಮುತ್ತಪ್ಪ ಚಿಕ್ಕಬೇನೂರ, ರಾಮ ಬಾಳಗಿ, ರಮೇಶ ತಮಶೆಟ್ಟಿ, ಡಾ| ರಾಜಶೇಖರ ವಿಜಾಪುರೆ, ಶಂಕ್ರಯ್ಯ ಮಠಪತಿ, ಶಂಕರಗೌಡ ಬಿರಾದಾರ, ಭಾಗನಗೌಡ ಪಾಟೀಲ, ಸೋಮನಾಥ ಕುಂಬಾರ, ರಂಜಾನ ಮಕಾಂದಾರ, ವಿಠuಲ ಹಂಜಗಿ, ಬಸವರಾಜ ಹಂಜಗಿ, ಶಿವು ರೇಖಾ, ಶ್ರೀಶೈಲ ರೇಖಾ, ರಾಘವೇಂದ್ರ ಹೊನಮೊರೆ ಇದ್ದರು. ಇಂಡಿ: ಪಟ್ಟಣದ ಶ್ರೀ ಗುಡ್ಡದ ಬಸವರಾಜೇಂದ್ರ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಸ್ವಾತಂತ್ರ್ಯದಿನ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಸತೀಶ ಝಂಪಾ ಧ್ವಜಾರೋಹಣ ನೆರವೇರಿಸಿದರು. ಎಸ್.ವಿ. ಲಾಳಸಂಗಿ, ಎ.ಐ. ಸುರಪುರ, ವಿ.ಬಿ. ಪಾಟೀಲ, ಜಿ.ಎಸ್. ವಾಲಿ, ಶ್ರೀಮತಿ ಎಂ.ಎ. ವಾಲಿ, ಸಿದ್ದಾರ್ಥ ಅರಳಿ, ಕೆ.ಎಂ.ಮಠ ಮತ್ತಿತರರು ಇದ್ದರು. ಆಲಮಟ್ಟಿ: ತ್ಯಾಗ-ಬಲಿದಾನದ ಮೂಲಕ ಪಡೆದಿರುವ ಸ್ವಾತಂತ್ರ್ಯವನ್ನು ಎಂದಿಗೂ ಸ್ವೇಚ್ಛಾಚಾರಕ್ಕೆ ಬಳಸಿಕೊಳ್ಳಬಾರದು ಎಂದು ಪ್ರಾಚಾರ್ಯ ಎಸ್.ಬಿ. ಪಾಟೀಲ ಹೇಳಿದರು. ಸ್ಥಳೀಯ ಮಂಜಪ್ಪ ಹಡೇìಕರ್ ಸ್ಮಾರಕ ಪ.ಪೂ ಮಹಾವಿದ್ಯಾಲಯ, ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ
ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮ ಶಾಲೆಗಳ ಸಮೂಹದಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಕೀಯರ ಕಪಿಮುಷ್ಠಿಯಿಂದ ಗುಲಾಮಗಿರಿ ದಾಸ್ಯದಿಂದ ಮುಕ್ತಗೊಳಿಸುವಲ್ಲಿ ಹೋರಾಟಗಾರರು ತಮ್ಮ ಸರ್ವಸ್ವವನ್ನೂ ಕಳೆದುಕೊಂಡಿದ್ದಾರೆ ಎಂದರು. ಪ್ರತಿಯೊಬ್ಬರೂ ದೇಶದ ಹಿತಕ್ಕಾಗಿ ಪ್ರಾಮಾಣಿಕತೆ, ನಿಷ್ಠೆ, ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುವುದು ಅಗತ್ಯವಾಗಿದೆ. ಮಹಾನ್ ನಾಯಕರನ್ನು ಪ್ರತಿಯೊಬ್ಬ ಭಾರತೀಯರು ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು. ಜಿ.ಎಂ.ಕೋಟ್ಯಾಳ, ಯು.ಎ. ಹಿರೇಮಠ, ಜಿ.ಎಂ. ಹಿರೇಮಠ, ಜಗದೇವಿ ಕೆ., ರಿಯಾನಾ ಕಾಲಿಖಾನ, ತಿಮ್ಮಣ್ಣ ದಾಸರ, ಶೇಖು ಲಮಾಣಿ ಇದ್ದರು. ಎನ್.ಎಸ್. ಬಿರಾದಾರ ಸ್ವಾಗತಿಸಿದರು. ಮಹೇಶ ಗಾಳಪ್ಪಗೋಳ ನಿರೂಪಿಸಿದರು. ಪಿ.ಎ. ಹೇಮಗಿರಿಮಠ. ವಂದಿಸಿದರು. ಮೋರಟಗಿ: ಗ್ರಾಮದ ವಿವಿಧ ಕಡೆ 71ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು.ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಎಂ.ಜಿ. ಮಂದೇವಾಲಿ ಧ್ವಜಾರೋಹಣ ನೆರವೇರಿಸಿದರು. ಬಿ.ಐ. ಮಸಳಿ, ಎಂ.ಎಸ್. ಪಾಟೀಲ, ಎಸ್.ಜಿ. ಪಾಟೀಲ, ಎಸ್.ಎಂ. ಮಂದೇವಾಲಿ, ಸಿವಪ್ಪ ಸಿಂಗಾಡಿ, ಬಿ.ಎಸ್. ಪಾಟೀಲ, ಬಿ.ಆರ್. ಬಿರಾದಾರ, ಚಂದ್ರಶೇಖರ ಪಾಟೀಲ ಇದ್ದರು. ಕೆಜಿಎಸ್ ಶಾಲೆಯಲ್ಲಿ ವಿಠ್ಠಲ ಬನ್ನೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯಗುರು ಬಿ.ಎಸ್.ಬೂದ್ಯಾಳ, ಮಹಾನಂದಾ ಪಾಟೀಲ, ಗೋದಾ ಕುಲಕರ್ಣಿ, ಅನಸೂಯಾ ಸಾರವಾಡ ಇದ್ದರು. ಅಕ್ಷರ ಕನ್ನಡ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಅಧ್ಯಕ್ಷೆ ಡಾ| ಸುನಿತಾ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಶರಣು ಮಳಗಿ, ಅನೀಲಕುಮಾರ ಕಲ್ಯಾಣಿ, ನೇಮಿನಾಥ ಪಾಟೀಲ, ಶರಣು ಹಟಗಾರ, ಹಣಮಂತ ಯಂಕಂಚಿ, ಮೈಬೂಬ ಕಣ್ಣಿ, ಸಿದ್ದು ಬಂಡಿವಡ್ಡರ ಇದ್ದರು. ಸ್ಥಳೀಯ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷೆ ರೇಖಾ ಕೇರಿಗೊಂಡ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಅರುಣ ಸಿಂಗೆ, ಗ್ರಾಪಂ ಸದಸ್ಯರಾದ ಎನ್. ಎನ್ ಪಾಟೀಲ, ಬಿ.ಟಿ. ಬೋನಾಳ. ಅಲ್ಲಾಬಕ್ಷ ಬಾಗವಾನ ಭಾಗವಹಿಸಿದ್ದರು. ದಲಿತ ಕಾಲೋನಿಯಲ್ಲಿ ಗ್ರಾಪಂ ಉಪಾಧ್ಯಕ್ಷ ಅರುಣಕುಮಾರ ಸಿಂಗೆ ಧ್ವಜಾರೋಹಣ ನೆರವೆರಿಸಿದರು. ಚನ್ನು ಬಳಗಾನೂರ, ಶರಣು ವಸ್ತಾರಿ ಇದ್ದರು. ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಕ್ಷ ಎಸ್.ವಿ. ಬಿರಾದಾರ ಧ್ವಜಾರೋಹಣ ನೆರವೇರಿಸಿದರು.ಆಡಳಿತಾ ಧಿಕಾರಿ ಎಸ್. ಎಚ್. ದೂಳಬಾ, ಸಂಗನಗೌಡ ಬಗಲೂರ, ಶಿವಾನಂದ ಬಿರದಾರ, ಆರ್.ಬಿ.ಚೌದರಿ, ಎಸ್.ಎಂ.ಲಂಗೂಟಿ ಇದ್ದರು. ನವನಿಧಿ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್‌ನಲ್ಲಿ ಅಧ್ಯಕ್ಷ ಈರಣ್ಣ ಹೂಗಾರ ಧ್ವಜಾರೋಹಣ ನೆರವೇರಿಸಿದರು. ಸದಸ್ಯರಾದ ಸುಭಾಸ ಭಾರತಿ, ಮಲ್ಲಿಕಾರ್ಜುನ ಹೂಗಾರ, ಸಂತೋಷ ಬಳಗುಂಪಿ, ಶಂಕರಲಿಂಗ ವಿಶ್ವಕರ್ಮ, ಔದುಸಿದ್ದ ಒಡೆಯರ, ರಫೀಕ್ ಮುಡ್ಡಿ, ಮಾಳಪ್ಪ ಘಾಳಿ ಇತರರು ಹಾಜರಿದ್ದರು. ಐಡಿಯಲ್ ಪ್ರಾಥಮಿಕ ಶಾಲೆಯಲ್ಲಿ ಪಂಚಮಸಾಲಿ ಮುಖಂಡ ವೀರನಗೌಡ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷ ಹುಸೇನಸಾಬ ಬಾಗವಾನ, ಮುಖ್ಯಗುರು ಶಿವಾನಂದ ವಾಲಿಕಾರ, ಗುರುರಾಜ ಹಡಪದ, ಮಲಿಕ ಬಾಗವಾನ, ಗೀತಾ ಪಾಟೀಲ ಇದ್ದರು. ಜ್ಞಾನ ಜ್ಯೋತಿ ನವೋದಯ ಶಾಲೆಯಲ್ಲಿ ಗಣ್ಯ ವ್ಯಾಪಾರಸ್ಥ ರೇವಣಸಿದ್ದ ಮಸಳಿ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷ ಎಂ.ಜಿ. ಹರವಾಳ, ಮಾನಸಾದೇವಿ ನೆಲ್ಲಗಿ, ಪ್ರಕಾಶ ನೆಲ್ಲಗಿ, ಜಯಾ ಕುಮಟಾ, ಶರಣಗೌಡ ಉಚಿತನಾವದಗಿ, ಅಪ್ಪು ನೆಲ್ಲಗಿ ಇದ್ದರು. ನೀಲಕಂಠೇಶ್ವರ ಬ್ಯಾಂಕ್‌ನಲ್ಲಿ ಹಿರಿಯ ಮುಖಂಡ ಮಲ್ಲಣ್ಣಸಾಹು ಮಂದೇವಾಲಿ ಧ್ವಜಾರೋಹಣ ನೆರವೇರಿಸಿದರು. ಅಶೋಕ ತಿವಾರಿ, ಸುಭಾಸ ಭಾರತಿ, ಮಲ್ಲಿಕಾರ್ಜುನ ಮಸಳಿ, ಚಂದು ಬಿಸ್ಟಾಕಿ ಇದ್ದರು. ಸರಕಾರಿ ಆಸ್ಪತ್ರೆಯಲ್ಲಿ ಡಾ| ಸರೋಜಿನಿ ನಾಡಗೌಡ ಧ್ವಜಾರೋಹಣ ನೆರವೇರಿಸಿದರು. ಡಾ| ಗುರುರಾಜ ಜಹಾಗಿರದಾರ, ಡಾ| ರವಿಂದ್ರ, ಗಂಗಾದಾರ ಚಾಬಕಸವಾರ, ಸಿದ್ದಪ್ಪ ಗಾಣಗೇರ ಇದ್ದರು. ಸಿದ್ದಸಿರಿ ಬ್ಯಾಂಕ್‌ನಲ್ಲಿ ಸಮಾಜ ಸೇವಕ ಪ್ರಕಾಶ ಅಡಗಲ್ಲ ಧ್ವಜಾರೋಹಣ ನೆರವೇರಿಸಿದರು. ಸಿದ್ರಾಮ ಶೀಲವಂತ, ಪ್ರಕಾಶ ನೆಲ್ಲಗಿ, ಕಲ್ಲಣ್ಣ ಬೋನಾಳ, ಶಿವರಾಜ ಬಳಗುಂಪಿ, ಬೂತಾಳಿ ಒಡೆಯರ, ಮಲ್ಲಿಕಾರ್ಜುನ ದೇಸಾಯಿ ಇದ್ದರು. ಪೊಲೀಸ್ ಹೊರಠಾಣೆಯಲ್ಲಿ ಜಿಪಂ ಸದಸ್ಯ ಬಿಂದುರಾಯಗೌಡ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಜಿಪಂ ಮಾಜಿ ಸದಸ್ಯ ನರಸಿಂಗ್‌ಪ್ರಸಾದ ತಿವಾರಿ, ಎಂ.ಕೆ. ಕಣ್ಣಿ, ಎಂ.ಟಿ. ಸಿಂಗೆ, ಬೂತಾಳಿ ವಸ್ತಾರಿ, ಪ್ರಕಾಶ ನಡುವಿನಕೆರಿ, ಪತ್ರಕರ್ತ ಈರಣ್ಣ ವಿಶ್ವಕರ್ಮ ಇದ್ದರು. ಎಂಪಿ ಕೆ.ಬಿ.ಎಸ್ ಶಾಲೆಯಲ್ಲಿ ತಾಪಂ ಸದಸ್ಯ ಎಂ.ಆರ್.ಬೋನಾಳ ಧ್ವಜಾರೋಹಣ ನೆರವೇರಿಸಿದರು. ಮುಖ್ಯಗುರು ಆರ್.ಎಲ್. ಕನ್ನೊಳ್ಳಿ, ಶಿವಾನಂದ ಮಯೂರ, ಸಂಗಣ್ಣ ಬಿಸ್ಟಾಕಿ, ಎಸ್.ಎಸ್. ಕಲ್ಯಾಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.