ವಿಶ್ವದಲ್ಲಿಯೇ ನಮ್ಮ ಸಂವಿಧಾನ ಬಲಿಷ್ಠವಾದುದು: ಆಲಗೂರ
Team Udayavani, Jan 27, 2018, 3:03 PM IST
ಚಡಚಣ: ಡಾ| ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಸಂವಿಧಾನ ಹಾಗೂ ಪ್ರಜಾತಂತ್ರ ವ್ಯವಸ್ಥೆ ವಿಶ್ವದಲ್ಲಿ ಬಲಿಷ್ಠ ಹಾಗೂ ಮಾದರಿಯಾಗಿದೆ ಎಂದು ಶಾಸಕ ರಾಜು ಆಲಗೂರ ಹೇಳಿದರು.
ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿದ್ದ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪ್ರಕ್ಷ ನೀಡಿದ ಪ್ರಣಾಳಿಕೆಯಂತೆ ರಾಜ್ಯದಲ್ಲಿ 50 ನೂತನ ತಾಲೂಕು ಕೆಂದ್ರಗಳಾಗಿ ಇಂದು ಕಾರ್ಯಾರಾಂಭಗೊಂಡಿವೆ. ಚಡಚಣ ತಾಲೂಕು ಕೇಂದ್ರವಾಗಿ ಕಾರ್ಯಾರಾಂಭಗೊಂಡಿರುವುದು ಈ ಭಾಗದ ಜನರ ಹಲವು ದಶಕಗಳ ಬೇಡಿಕೆ ಈಡೇರಿದಂತಾಗಿದೆ ಎಂದರು.
ಬಿಇಒ ಎಚ್. ತಿಪ್ಪಣ್ಣ ಮಾತನಾಡಿ, ನೂತನ ತಾಲೂಕು ಕೇಂದ್ರವಾಗಿ ಚಡಚಣ ಕಾರ್ಯಾರಾಂಭ ಮಾಡಿದ್ದು ಭಾಗದ
ಜನರಲ್ಲಿ ಹರ್ಷವನ್ನುಂಟು ಮಾಡಿದೆ. ತಾಲೂಕು ಕೇಂದ್ರವಾಗಿ ಚಡಚಣ ಪಟ್ಟಣ ರಚನೆಯಾಗಲು ಪ್ರಾಮಾಣಿಕವಾಗಿ
ಶ್ರಮಿಸಿದ ಶಾಸಕರ ಕಾರ್ಯ ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿ¨ª ಪಪಂ ಅಧ್ಯಕ್ಷ ಬಾಬುಗೌಡ ಪಾಟೀಲ
ಮಾತನಾಡಿ, ವಿವಿಧ ಕಚೇರಿಗಳು ಆರಂಭಗೊಳ್ಳಲು ಕಂದಾಯ ಇಲಾಖೆಯೊಂದಿಗೆ ಸಹಕರಿಸುವದಾಗಿ
ತಿಳಿಸಿದರು. ತಹಶೀಲ್ದಾರ್ ಎಸ್.ಎಚ್. ಮೆಳ್ಳಿಗೇರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ರಾಜು ಝಳಕಿ, ಮುಖಂಡ ಸುರೇಶ ಗೊಣಸಗಿ, ಕಾಂತೂಗೌಡ ಪಾಟೀಲ, ಸಿಪಿಐ ಎಂ.ಬಿ. ಅಸೂಡೆ, ಕರವೇ ತಾಲೂಕಾಧ್ಯಕ್ಷ ಸೋಮು ಬಡಿಗೇರ, ಜಿಲ್ಲಾ ಉಪಾಧ್ಯಕ್ಷ ಮಹಾದೇವ ಬನಸೋಡೆ, ತಾಲೂಕು ದೈಹಿಕ ಶಿಕ್ಷಣಾ ಧಿಕಾರಿ ಎ.ಪಿ. ಠಾಕೂರ, ಎಪಿಎಂಸಿ ನಿರ್ದೇಶಕಿ ದಾನಮ್ಮಗೌಡತಿ ಪಾಟೀಲ, ಹಮೀದ ದಖನಿ ಸೇರಿದಂತೆ ಪಪಂ ಸದಸ್ಯರು ಹಾಗೂ ವಿವಿಧ ಗ್ರಾಮಗಳ ಗ್ರಾಪಂ ಸದಸ್ಯರು, ಅಧ್ಯಕ್ಷರು, ವಿವಿಧ ಇಲಾಖೆಗಳ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಚಡಚಣ ನೂತನ ತಾಲೂಕು ಕೇಂದ್ರವಾದ ನಿಮಿತ್ಯ ಇದೆ ಪ್ರಥಮ ಬಾರಿಗೆ ಸ್ಥಳಿಯ ಸರಕಾರಿ ಮಾದರಿ ಪ್ರಾಥಮಿಕ
ಶಾಲೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ಪೊಲೀಸ್ ಸಿಬ್ಬಂದಿ ಪರೇಡ್ ನಡೆಸಿ
ತಹಶೀಲ್ದಾರ್‌ಗೆ ಗೌರವ ವಂದನೆ ಸಲ್ಲಿಸಿದ ಕ್ಷಣ ಎಲ್ಲರ ಗಮನ ಸೆಳೆಯಿತು. ಪರೇಡ್‌ನಲ್ಲಿ ಸ್ಥಳಿಯ ಪೊಲೀಸ್ ಠಾಣೆ
ಸಿಪಿಐ ಎಂ.ಬಿ. ಅಸೂಡೆ, ಪಿಎಸ್‌ಐ ಗೋಪಾಲ ಹಳ್ಳೂರ, ಝಳಕಿ ಪಿಎಸ್‌ಐ ಸುರೇಶ ಗಡ್ಡಿ, ಪೊಲೀಸ್ ಸಿಬ್ಬಂದಿ ಹಾಗೂ
ಗೃಹರಕ್ಷಕ ದಳದ ಸಿಬ್ಬಂದಿ ಪಾಲ್ಗೊಂಡಿದ್ದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಟ್ಟಣದ ಸರಕಾರಿ,
ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆಗಳ ಸುಮಾರು 1,500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
MUST WATCH
ಹೊಸ ಸೇರ್ಪಡೆ
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ
Tulu Film: ʼಮಿಡಲ್ ಕ್ಲಾಸ್ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು
TEENAGE: ಹುಚ್ಚುಕೋಡಿ ಮನಸ್ಸಿಗೂ ಕಡಿವಾಣ ಬೇಕಿದೆ
Ashram: ಹಿರಿಯ ಜೀವಗಳ ಶುಭಾಶೀರ್ವಾದ -ಸಾರ್ಥಕ ಭಾವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.