ಬಜೆಟ್‌ನಲ್ಲಿ ಕಡೆಗಣನೆಗೆ ಅಂಗವಿಕಲರ ಆಕ್ರೋಶ
Team Udayavani, Feb 19, 2018, 3:55 PM IST
ವಿಜಯಪುರ: ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅಂಗವಿಕಲರನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತದ ಅಂಗವಿಕಲರ ಸಂಘದ ನೇತೃತ್ವದಲ್ಲಿ ಅಂಗವಿಕಲರು ಪ್ರತಿಭಟನೆ ನಡೆಸಿದರು.
ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾ ಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದ ಅಂಗವಿಕಲರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಅಧಿ ಕಾರದಲ್ಲಿ ಮಂಡಿಸಿದ ಕೊನೆ ಬಜೆಟ್‌ನಲ್ಲಿ ಅಂಗವಿಕಲರನ್ನು ಸಂರ್ಪೂಣವಾಗಿ ಕಡೆಗಣಿಸಿದ್ದಾರೆ ಎಂದು ಹರಿಹಾಯ್ದರು.
ಈ ಸಂಧರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತ ಅಂಗವಿಕಲರ ಅಧ್ಯಕ್ಷ ನಿಮೀಷ್ ಆಚಾರ, ಕಾಂಗ್ರೆಸ್ ಸರ್ಕಾರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವಿಕಲಚೇತನರಿಗೆ 3 ಸಾವಿರ ರೂ. ಮಾಸಾಶನ ನೀಡುವುದಾಗಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ಮೇಲೆ ಈವರೆಗೆ ಮಂಡಿಸಿದ ಯಾವ ಬಜೆಟ್‌ನಲ್ಲಿ ಮಾಸಾಶನದಲ್ಲಿ ಒಂದು ರೂ. ಕೂಡ ಹೆಚ್ಚಿಸಿಲ್ಲ. ಆದರೆ ಈ ಬಾರಿ ಶೇ. 75 ಕಡಿಮೆ ಪ್ರಮಾಣ ಹೊಂದಿದ ವಿಕಲ
ಚೇತನರಿಗೆ ಕೇವಲ 100 ರೂ., 75 ಕ್ಕಿಂತ ಮೇಲ್ಪಟ್ಟು ಹೊಂದಿದದವರಿಗೆ 200 ರೂ. ಕೊಡುವ ಮೂಲಕ ವಿಕಲ ಚೇತನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.
ಸರ್ವಜ್ಞ ವಿಕಲ ಚೇತನ ಕ್ಷೇಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಪರುಶುರಾಮ ಗುನ್ನಾಪುರ ಮಾತನಾಡಿ, ರಾಜ್ಯದಲ್ಲಿ ಸುಮಾರು 27 ಸಾವಿರ ವಿಕಲ ಚೇತನ ಬ್ಯಾಕ್ ಲಾಗ್ ಹುದ್ದೆಗಳು ಖಾಲಿಯಿದ್ದು, ಇದುವರೆಗೆ ಸರ್ಕಾರ ವಿಶೇಷ ನೇಮಕಾತಿ ಮಾಡಿಕೊಂಡಿಲ್ಲ. ವಿಕಲ ಚೇತನರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದು, ಬಜೆಟ್‌ನಲ್ಲಿ ವಿಶೇಷ ಅನುದಾನ ಕಲ್ಪಿಸಿಲ್ಲ ಎಂದು ಟೀಕಿಸಿದರು. ವಿನೋದ ಖೇಡ, ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ಪ್ರತಿ ಗ್ರಾಪಂ ಸೇವೆಯಲ್ಲಿರುವ ವಿಕಲಚೇತನರ ವೇತನವನ್ನೂ ಹೆಚ್ಚಿಸಬೇಕು. ಸರ್ಕಾರ ನೀಡುವ ಪ್ರತಿ ಇಲಾಖೆಗಳಲ್ಲಿ ಶೇ.
5ರಷ್ಟು ಅನುದಾನವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ವಿಕಲ ಚೇತನ ಹೊಸ ಕಾಯ್ದೆ 2016 ಸಮಗ್ರವಾಗಿ ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿದರು.
ಸುರೇಶ ಚವ್ಹಾಣ, ಶ್ರೀರಾಮ ನಾಯಕ, ಸಾದೀಕ ಶೇಖ್, ಅನಾನ್ ಶೇಖ್, ಗುಂಡಮ್ಮ ಮಠಪತಿ, ನಾಮದೇವ ಇಳಕಲ, ಫಿರೋಜ್ ಮುಜಾವರ, ಶೈರಾಬಾನು ಬೋರಗಿ, ಸಬಿಹಾ ಕಟಂಬಿ, ಸಮೀರ ಜಮಖಂಡಿ, ಮೈನುದ್ದೀನ್ ಪಡೇಕನೂರ, ಶಂಕ್ರಮ ಕೋರಿ, ಸಬಿಹಾ ಮರ್ತೂರು, ಎ.ಎ. ಹುಕ್ಕೇರಿ, ಸಾಗರ ಲಮಾಣಿ, ಸಂತೋಷ ಬೊಮ್ಮನಹಳ್ಳಿ, ಸುನೀಲ ತೇಲಕರ, ಕಂಟೆಪ್ಪಗೌಡ ಪಾಟೀಲ, ರಾಜು ಕುಮುಟಗಿ, ರಾಜು ಭುಯ್ನಾರ, ಸದ್ದಾಂ ಹೆಬ್ಟಾಳ, ನಾಮದೇವ ದೊಡಮನಿ, ಅಶೋಕ ವಾಲೀಕಾರ, ಮಲ್ಲಿಕಾರ್ಜುನ ಉಮರಾಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.