ಯಾತ್ರಿನಿವಾಸ ಕಾಮಗಾರಿಗೆ ಪಾಟೀಲ ಚಾಲನೆ
Team Udayavani, Mar 2, 2018, 3:31 PM IST
ವಿಜಯಪುರ: ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸುತ್ತಿರುವ ಯಾತ್ರಿ ನಿವಾಸಗಳಿಗೆ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು.
ಬಬಲೇಶ್ವರ ಕ್ಷೇತ್ರ ವ್ಯಾಪ್ತಿಯ ಅರಕೇರಿಯಲ್ಲಿ ಮಧುಗೊಂಡೆಶ್ವರ ಆಶ್ರಮದ ಹತ್ತಿರ, ಲೋಹಗಾಂವದಲ್ಲಿ ವಿರಕ್ತಾನಂದ ಮಠದ ಹತ್ತಿರ, ಬಾಬಾನಗರದ ದರ್ಗಾದ ಹತ್ತಿರ, ತಿಕೋಟಾದಲ್ಲಿ ಹನುಮಾನ ದೇವಸ್ಥಾನದ ಹತ್ತಿರ, ತಾಜಪುರ ಎಚ್ ಹಾಜಿಮಸ್ತಾನ, ಮೈಬೂಬ ಸುಭಾನಿ ದರ್ಗಾದ ಹತ್ತಿರ, ನಿಡೋಣಿ ಮುಸ್ಲಿಂ ಸಮಾಜದ ದರ್ಗಾದ ಹತ್ತಿರ, ಬಬಲೇಶ್ವರ ಮುಸ್ಲಿಂ ಸಮಾಜ ಈದ್ಗಾ ಹತ್ತಿರ, ಸಂಗಾಪುರ ಎಸ್.ಎಚ್ ಸಿದ್ದಲಿಂಗೇಶ್ವರ ಕಮರಿಮಠದ ಹತ್ತಿರ, ಕಂಬಾಗಿ ಕಂಬಾಗೇಶ್ವರ ಗುಡಿ ಹತ್ತಿರ, ಚಿಕ್ಕಗಲಗಲಿ ರಾಮಲಿಂಗೇಶ್ವರ ಗುಡಿ ಹತ್ತಿರ, ಕಾಖಂಡಕಿ ಮಸೀದಿ ಹತ್ತಿರ, ಕಾರಜೋಳ ಬೀರಲಿಂಗೇಶ್ವರ ದೇವಸ್ಥಾನದ ಹತ್ತಿರ ತಲಾ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಯಾತ್ರಿ ನಿವಾಸಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಈ ವೇಳೆ ಮಾತನಾಡಿದ ಸಚಿವ ಡಾ| ಎಂ.ಬಿ. ಪಾಟೀಲ, ಕನಮಡಿ ಕೆಳಗಿನಮಠದ ಹತ್ತಿರ, ಕಣಬೂರ ರಾಚೋಟೇಶ್ವರ ದೇವಸ್ಥಾನದ ಹತ್ತಿರ ಹಾಗೂ ಬೆಳ್ಳುಬ್ಬಿಯ ಮಳೆ ಮಲ್ಲೇಶ್ವರ ದೇವಸ್ಥಾನದ ಹತ್ತಿರ ಕೂಡ ಪ್ರವಾಸೋದ್ಯಮ ಇಲಾಖೆಯಿಂದ ತಲಾ 25 ಲಕ್ಷ ರೂ. ವೆಚ್ಚದ ಯಾತ್ರಿ ನಿವಾಸಗಳು ಮಂಜೂರಾತಿ ಪಡೆದಿವೆ ಎಂದರು.
ಬಬಲೇಶ್ವರ ವಿಧಾನಸಭಾ ಕ್ಷೇತ್ರದ 15 ವಿವಿಧ ಶೃದ್ಧಾ ಕೇಂದ್ರಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸಗಳನ್ನು ನಿರ್ಮಿಸುತ್ತಿದ್ದು, ಸಮಿತಿಯವರು ಸೂಕ್ತ ನಿರ್ವಹಣೆ ಮೂಲಕ ಯಾತ್ರಿ ನಿವಾಸಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.