ತಂದೆ ಸಮಾಧಿಗೆ ನಮನ ಸಲ್ಲಿಸಿದ ಪಾಟೀಲ
Team Udayavani, Jan 4, 2019, 9:12 AM IST
ವಿಜಯಪುರ: ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ತವರು ಜಿಲ್ಲೆಗೆ ವಿಜಯಪುರಕ್ಕೆ ಆಗಮಿಸಿದ
ಎಂ.ಬಿ.ಪಾಟೀಲ ಅವರು ತಮ್ಮ ತಂದೆ ಮಾಜಿ ಸಚಿವ ದಿ.ಬಿ.ಎಂ.ಪಾಟೀಲ ಹಾಗೂ ಇತರೆ ಮಹಾತ್ಮರ ಸಮಾಧಿ ಗೆ ನಮನ ಸಲ್ಲಿಸಿದರು.
ಗುರುವಾರ ಬೆಳಗ್ಗೆ ಪತ್ನಿ ಆಶಾ ಪಾಟೀಲ, ಸಹೋದರಿ ಕಲ್ಪನಾ ಪಾಟೀಲ ಅರೊಂದಿಗೆ ಆಗಮಿಸಿದ ಸಚಿವರು ತಂದೆ ಬಿ.ಎಂ. ಪಾಟೀಲ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು.
ನಂತರ ಬಂಥನಾಳದ ಸಂಗನಬಸವ ಶ್ರೀಗಳ, ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಮಾಧಿಗೆ ಹಾಗೂ 770 ಅಮರ ಗಣಾಧೀಶರ ಲಿಂಗದ ದೇವಸ್ಥಾನಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.
ನಂತರ ಹಳಕಟ್ಟಿ ಭವನದಲ್ಲಿ ಬಿಎಲ್‌ಡಿಇ ಆಡಳಿತ ಮಂಡಳಿ ಪರವಾಗಿ ಪ್ರಧಾನ ಕಾರ್ಯದರ್ಶಿ ಜಿ.ಕೆ.ಪಾಟೀಲ, ಬಿಎಲ್
ಡಿಇ ವಿಶ್ವವಿದ್ಯಾಲಯದ ಪರವಾಗಿ ಪರವಾಗಿ ಉಪಕುಲಪತಿ ಡಾ.ಎಂ.ಎಸ್.ಬಿರಾದಾರ, ಸಂಸ್ಥೆಯ ಎಲ್ಲ ಪ್ರಾಚಾರ್ಯರ ಪರವಾಗಿ ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯ ಕೆ.ಜಿ.ಪೂಜಾರಿ ಅವರು ಸಚಿವ ಎಂ.ಬಿ.ಪಾಟೀಲ ಅವರನ್ನು ಗೌರವಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಎಂ.ಬಿ.ಪಾಟೀಲ ಅವರು, ನಮ್ಮ ಹಿರಿಯರಾದ ಸಂಗನಬಸವ ಶ್ರೀಗಳು, ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಹಾಗೂ ನನ್ನ ತಂದೆ ದಿ.ಬಿ.ಎಂ.ಪಾಟೀಲ ಅವರಿಗೆ ನಮನ ಸಲ್ಲಿಸಿ, ನನ್ನ ಕಾರ್ಯ ಆರಂಭಿಸಿದ್ದೇನೆ.
ಜ.4 ರಂದು ಬೆ.11 ಗಂ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಬಳಿಕ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.