ಢವಳಗಿ ಹೆಸ್ಕಾ ಸ್ಟೇಶನ್ ಗೆ ಮುತ್ತಿಗೆ
Team Udayavani, Mar 26, 2021, 7:29 PM IST
ಮುದ್ದೇಬಿಹಾಳ : ಸಮರ್ಪಕ ತ್ರಿಫೇಸ್ ವಿದ್ಯುತ್ ನೀಡುವಂತೆ ಆಗ್ರಹಿಸಿ ಮಡಿಕೇಶ್ವರ, ಪಡೇಕನೂರ ಗ್ರಾಮಸ್ಥರು ಗುರುವಾರ ಢವಳಗಿಯಲ್ಲಿರುವ ಹೆಸ್ಕಾಂ 33 ಕೆ.ವಿ ವಿದ್ಯುತ್ ಸ್ಟೇಶನ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ವೇಳೆ ಕಚೇರಿಯಲ್ಲಿದ್ದ ಹೆಸ್ಕಾಂ ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗ್ರಾಮಸ್ಥರು ವಿದ್ಯುತ್ ಸಮಸ್ಯೆ ಬಗೆಹರಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಸ್ಟೇಶನ್ ಕಾಂಪೌಂಡ್ ಹೊರಗೆ ಧರಣಿ ಕುಳಿತರು. ಸ್ಥಳಕ್ಕೆ ದೌಡಾಯಿಸಿದ ಮುದ್ದೇಬಿಹಾಳ ಸಿಪಿಐ ಆನಂದ ವಾಘ್ಮೋಡೆ, ಪಿಎಸೈ ಎಂ.ಬಿ. ಬಿರಾದಾರ ನೇತೃತ್ವದ ಡಿಆರ್ ಪೊಲೀಸರು ರೈತರು, ಗ್ರಾಮಸ್ಥರನ್ನು ನಿಭಾಯಿಸುವಲ್ಲಿ ಹೈರಾಣಾದರು. ಢವಳಗಿ ಸ್ಟೇಶನ್ ವ್ಯಾಪ್ತಿಯ ರೈತರಿಗೆ ಬೆಳೆಗಳಿಗೆ ನೀರುಣಿಸಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸತತ 4 ಗಂಟೆ ಗುಣಮಟ್ಟದ ವಿದ್ಯುತ್ ಕೊಡಲು ಸರ್ಕಾರ ವ್ಯವಸ್ಥೆ ಮಾಡಿದೆ. ಆದರೆ ಢವಳಗಿ ಹೋಬಳಿಯಲ್ಲಿ ಇದು ಸಮರ್ಪಕವಾಗಿ ಜಾರಿಯಾಗಿಲ್ಲ. ಇದರಿಂದಾಗಿ ಹೋಬಳಿ ವ್ಯಾಪ್ತಿಯ ಬಹುತೇಕ ರೈತರು ಬೆಳೆಗಳಿಗೆ ನೀರುಣಿಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೆಳೆಗಳು ಒಣಗುತ್ತಿವೆ. ಈ ಬಗ್ಗೆ ವಾರದ ಹಿಂದೆ ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸುವಂತೆ ಕೋರಿದ್ದರೂ ಸ್ಪಂದನೆ ದೊರೆತಿಲ್ಲ ಎಂದು ಪ್ರತಿಭಟನಾನಿರತ ರೈತರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ದಿನಕ್ಕೆ 4 ಗಂಟೆ ಬದಲಿಗೆ ಮೂರುವರೆ ಗಂಟೆ ವಿದ್ಯುತ್ ಕೊಟ್ಟರೂ ಮೇಲಿಂದ ಮೇಲೆ ಸಾಕಷ್ಟು ಬಾರಿ ಅನಿಯಮಿತತನ ಇರುತ್ತದೆ. ಮೋಟರ್ ಚಾಲು ಮಾಡಿ ನೀರು ಹರಿಸಬೇಕೆನ್ನುವಷ್ಟರಲ್ಲಿ ವಿದ್ಯುತ್ ಕಡಿತಗೊಂಡಿರುತ್ತದೆ. ಇದರಿಂದಾಗಿ ಬೆಳೆಗಳಿಗೆ ನೀರು ಹಾಯಿಸುವುದು ಇರಲಿ, ಮೋಟಾರ್ ಉಳಿಸಿಕೊಳ್ಳುವುದೇ ಸಾಹಸದ ಕೆಲಸವಾಗುತ್ತಿದೆ ಎಂದು ದೂರಿದರು.
ಕೆಲ ತಿಂಗಳ ಹಿಂದೆ 350-400ವರೆಗೆ ಓಲ್ಟೆàಜ್ ವಿದ್ಯುತ್ ಪೂರೈಕೆಯಾಗುತ್ತಿತ್ತು. ಇದೀಗ ಅದು ಕೇವಲ 160-200 ಓಲ್ಟೇಜ್‌ಗೆ ಇಳಿದಿದೆ. ಇದರಿಂದ ಪಂಪ್‌ಸೆಟ್‌ಗಳು ಚಾಲೂ ಆಗುತ್ತಿಲ್ಲ. ಢವಳಗಿಯಲ್ಲೇ 33 ಕೆ.ವಿ ಸ್ಟೇಶನ್ ಇದ್ದರೂ ಯಾವೊಬ್ಬ ಅಧಿಕಾರಿ ಸಮಸ್ಯೆ ಬಗೆಹರಿಸಲು ಮುಂದೆ ಬರುತ್ತಿಲ್ಲ. ಸಮಸ್ಯೆ ಇದೆ ಬನ್ನಿ ಎಂದು ಕರೆದಾಗ ಮಾತ್ರ ಕರೆದವರ ಹೊಲಕ್ಕೆ ಬಂದು ನೋಡುತ್ತಾರೆಯೇ ಹೊರತು ಸಾಮೂಹಿಕವಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆಇ, ಹೆಲ್ಪರ್ ವರ್ಗಾಯಿಸಲು ಪಟ್ಟು: ಗ್ರಾಮಸ್ಥರೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿರುವ ಢವಳಗಿ ಸ್ಟೇಶನ್ ಜೆಇ ಶ್ರೀದೇವಿ ಹೊನ್ನಾಕಟ್ಟಿ, ಸ್ಟೇಶನ್ ಹೆಲ್ಪರ್ ಸಂಗಮೇಶ ಹಡಪದ ಅವರನ್ನು 24 ಗಂಟೆಯೊಳಗೆ ಬೇರೆಡೆ ವರ್ಗಾಯಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ವಿದ್ಯುತ್ ಸಮಸ್ಯೆ ಬಗೆಹರಿಸಿ ಎಂದು ಕೇಳಲು ಹೋದವರೊಂದಿಗೆ ಅನುಚಿತವಾಗಿ ನಡೆದುಕೊಂಡು, ಅಸಭ್ಯ ಭಾಷೆ ಬಳಸಿ ಮಾತನಾಡುವ ಇವರ ಬಗ್ಗೆ ಸಹಿಸಲು ಸಾಧ್ಯವಿಲ್ಲವೆಂದು ದೂರಿದರು.
ಈ ಕುರಿತು ತಾಳಿಕೋಟೆ ಹೆಸ್ಕಾಂ ಎಇಇ ತುಕಾರಾಮ ರಾಠೊಡ ಅವರಿಗೆ ಲಿಖೀತ ಮನವಿಯನ್ನೂ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಜುಗೌಡ ಪಾಟೀಲ, ವಿಜಯಕುಮಾರ ದೇಸಾಯಿ, ರಾಮನಗೌಡ ಬಿರಾದಾರ, ಬಸವರಾಜ ಸಿಂಹಾಸನ, ಪ್ರಭು ಬಿರಾದಾರ, ಪ್ರಭು ಹೂಗಾರ, ತಮ್ಮಣ್ಣ ಬೇಲಾಳ, ಮಾಂತು ಹಡಪದ, ಚನ್ನಪ್ಪಗೌಡ ಬಿರಾದಾರ, ಶಾಂತು ವಡವಡಗಿ, ಅಪ್ಪು ಕೊಣ್ಣೂರ, ರಾಜು ಚಿಗರಿ, ಮುತ್ತು ಬಿರಾದಾರ ಸೇರಿದಂತೆ ಮಡಿಕೇಶ್ವರ, ಪಡೇಕನೂರ ಭಾಗದ ನೂರಾರು ರೈತರು, ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.