ಕರ್ಫ್ಯೂ ಮೀರಿ ಮಠಕ್ಕೆ ಬಂದ ಭಕ್ತ ಸಮೂಹ
Team Udayavani, May 25, 2021, 7:29 PM IST
ವಿಜಯಪುರ: ಜಿಲ್ಲೆಯ ಸ್ವಾಮೀಜಿಯೊಬ್ಬರು ಭಕ್ತರಿಗೆ ನೀಡಿದ ವಿಡಿಯೋ ಸಂದೇಶದ ಸಾರ ಅರಿಯದೇ ಅಪಾರ್ಥ ಮಾಡಿಕೊಂಡ ಭಕ್ತರು ಕೋವಿಡ್ ಕರ್ಫ್ಯೂ ಮೀರಿ ಸಾವಿರಾರು ಸಂಖ್ಯೆಯಲ್ಲಿ ಅಂಬಲಿ ನೈವೇದ್ಯ ಸಮರ್ಪಿಸಲು ಬಬಲಾದಿ ಮಠಕ್ಕೆ ಆಗಮಿಸಿದ ಘಟನೆ ಜರುಗಿದೆ.
ವಿಜಯಪುರ ಜಿಲ್ಲೆಯಲ್ಲಿ ಮದ್ಯದ ನೈವೇದ್ಯ ಜಾತ್ರೆ ನಡೆಯುವ ಮಠ ಎಂದೇ ಹೆಸರಾಗಿರುವ ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಸದಾಶಿವ ಮುತ್ಯಾನ ಮಠದ ಸಿದ್ಧರಾಮಯ್ಯ ಶ್ರೀಗಳು, ಈ ಬಾರಿ ಕೋವಿಡ್ ಕರ್ಫ್ಯೂ ಮೀರಿ ಜನರು ಮನೆಯಿಂದ ಹೊರಗೆ ಬರಬೇಡಿ. ಮದ್ಯದ ನೈವೇದ್ಯ ಬೇಡ ಬೇಡ. ಬದಲಾಗಿ ಮನೆಯಲ್ಲೇ ಬೆಳ್ಳುಳ್ಳಿ ಹಾಕಿದ ಅಂಬಲಿ ನೈವೇದ್ಯ ಮಾಡಿ, ಮುತ್ಯಾನಿಗೆ ಸಮರ್ಪಿಸಿ, ಸೇವಿಸಿ ಎಂದು ಆಡಿಯೋ ಸಂದೇಶ ನೀಡಿದ್ದರು.
ಆದರೆ ಈ ಸಂದೇಶವನ್ನು ಅರ್ಥೈಸಿಕೊಳ್ಳುವಲ್ಲಿ ಎಡವಿದ ಬಬಲಾದಿ ಮಠದ ಭಕ್ತ ಸಮೂಹ, ಕೋವಿಡ್ ಕರ್ಫ್ಯೂ ಮೀರಿ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಸೋಮವಾರ ಅಂಬಲಿ ನೈವೇದ್ಯ ಅರ್ಪಿಸಲು ಬಬಲಾದಿ ಮಠಕ್ಕೆ ಧಾವಿಸಿದ್ದು, ಪೊಲೀಸರು, ಮಠಕ್ಕೆ ಬಂದ ಭಕ್ತರನ್ನು ಮರಳಿ ಕಳಿಸುವಲ್ಲಿ ಹೆಣಗಾಡುವಂತೆ ಮಾಡಿದೆ. ಹೊಳೆ ಬಬಲಾದಿ ಮಠದ ಸದಾಶಿವ ಮಠದ ಸಿದ್ಧರಾಮಯ್ಯ ಶ್ರೀಗಳು ಎರಡು ವರ್ಷಗಳ ಹಿಂದೆ ಸದಾಶಿವ ಮಠದ ಕಾರ್ಣಿಕದ ಸಂದರ್ಭದಲ್ಲಿ ವೈದ್ಯರಿಗೂ ಮದ್ದು ತಿಳಿಯದ ವ್ಯಾದಿ ಜನರನ್ನು ಕಾಡಲಿದೆ ಎಂದು ಕಾರ್ಣಿಕ ಹೇಳಿದ್ದರು.
ಭವಿಷ್ಯದ ದಿನಗಳಲ್ಲಿ ಔಷಧಿ ಯೇ ಸಿಗದ ಕೋವಿಡ್ ಸಾಂಕ್ರಾಮಿಕ ಸೋಂಕು ರೋಗ ಬಾಧಿ ಸಿತ್ತು. ಇದೀಗ ಕೋವಿಡ್ ಎರಡನೇ ಅಲೆ ಜೋರಾಗಿರುವ ಸಂದರ್ಭದಲ್ಲಿ ಸರ್ಕಾರ ರೋಗ ನಿಗ್ರಹಕ್ಕಾಗಿ ಕೋವಿಡ್ ಕರ್ಫ್ಯೂ ಜಾರಿಗೆ ತಂದಿದೆ. ಹೀಗಾಗಿ ಆತಂಕದಲ್ಲಿರುವ ಭಕ್ತರು ಈ ಬಾರಿ ರೋಗ ಇನ್ನೂ ಉಲ್ಬಣಗೊಂಡಿದೆ. ನಿಯಂತ್ರಣಕ್ಕೆ ಪರಿಹಾರ ನೀಡಿ ಎಂದು ಹಲವು ಭಕ್ತರು ಶ್ರೀಗಳ ಮೊರೆ ಇಟ್ಟಿದ್ದರು. ಹೀಗಾಗಿ ಬಬಲಾದಿ ಸಿದ್ದರಾಮಯ್ಯ ಶ್ರೀಗಳು, ಸೋಮವಾರ ಭಕ್ತರು ಮದ್ಯದ ಬದಲಾಗಿ ಅಂಬಲಿ ನೈವೇದ್ಯ ಮಾಡಿ ಮನೆಯಲ್ಲೇ ಸಮರ್ಪಿಸಿ, ಎರಡು ಬೋಳು ಕಾಯಿ ಒಡೆಯಿರಿ. ಹುರಿದ, ಕರಿದ ಅಡುಗೆ ಮಾಡಬೇಡಿ ಹಾಗೂ ಮನೆಯಿಂದ ಹೊರಗೆ ಬರಬೇಡಿ.
ಮನೆಯಲ್ಲೇ ನೆಮ್ಮದಿಯಾಗಿರಿ ಎಂದು ವಿಡಿಯೋ ಮೂಲಕ ಮೂಲಕ ಸಾತ್ವಿಕ ಸಂದೇಶ ನೀಡಿದ್ದರು. ಆದರೆ ಸಿದ್ದರಾಮಯ್ಯ ಶ್ರೀಗಳ ಸಂದೇಶ ಅರ್ಥೈಸಿಕೊಳ್ಳುವಲ್ಲಿ ಎಡವಿದ ಭಕ್ತರು, ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಅಂಬಲಿ ನೈವೇದ್ಯ ಸಮೇತ ಗುಂಪು ಗುಂಪಾಗಿ ಶ್ರೀಮಠಕ್ಕೆ ಬಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಬಲೇಶ್ವರ ಪೊಲೀಸರು ಭಕ್ತರ ಮನವೊಲಿಸಿ ಮರಳಿ ಮನೆಗೆ ಕಳಿಸಲು ಹರಸಾಹಸ ಪಡುವಂತೆ ಮಾಡಿದೆ. ಇದರಿಂದ ಮತ್ತೂಂದು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ ಶ್ರೀಗಳು, ಭಕ್ತರು ಯಾರೂ ಕೋವಿಡ್ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರಬೇಡಿ. ಮಠಕ್ಕೂ ಆಗಮಿಸಬೇಡಿ. ಕೋವಿಡ್ ಕರ್ಫ್ಯೂ ಉಲ್ಲಂಘಿ ಸದೇ ಮನೆಯಲ್ಲೇ ಪೂಜೆ ಮಾಡಿ, ನೈವೇದ್ಯ ಸಮರ್ಪಿಸಿ ಎಂದು ಸಂದೇಶ ನೀಡಿದ್ದಾರೆ. ಅಂಬಲಿ ಎಂದರೆ ಜೋಳದ ನುಚ್ಚಿಗೆ ಮಜ್ಜಿಗೆ, ಬೆಳ್ಳುಳ್ಳಿ ಬೆರೆಸಿದ ಗಂಜಿ ರೂಪದ ತೆಳುವಾದ ಆಹಾರವೇ ಅಂಬಲಿ.
ಈ ಅಂಬಲಿ ಸೇವನೆ ಆರೋಗ್ಯ ವೃದ್ಧಿಗೆ ಸಹಕಾರಿ ಎಂಬ ಕಾರಣಕ್ಕೆ ಶ್ರೀಗಳು ಅಂಬಲಿ ಸಂದೇಶ ನೀಡಿದ್ದರು. ಕೋವಿಡ್ ಸಂಕಷ್ಟ ಕಾಲದಲ್ಲಿ ಮನೆಯಲ್ಲಿಯೇ ಇರಿ ಎಂದು ಹಾಗೂ ಪೌಷ್ಟಿಕ ಆಹಾರವಾದ ಅಂಬಲಿ ತಯಾರಿಸಿ ನೈವೇದ್ಯ ಮಾಡಿ ಕುಡಿಯಿರಿ ಎಂದು ನೀಡಿದ ಸಂದೇಶ ಅರ್ಥೈಸುವಿಕೆಯಲ್ಲಿ ಮುಗ್ಧ ಭಕ್ತರು ಮಾಡಿಕೊಂಡ ಗೊಂದಲ ಶ್ರೀಗಳನ್ನು, ಪೊಲೀಸರನ್ನು ಹೈರಾಣು ಮಾಡಿ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.