ಗಬ್ಬು ವಾಸನೆಯಲ್ಲಿಯೇ ಜನ ಜೀವನ ಸಾಗಾಟ
Team Udayavani, Nov 19, 2019, 12:56 PM IST
ಚಡಚಣ: ಪಟ್ಟಣದ ಪ್ರಮುಖ ವಾರ್ಡ್ ಗಳಲ್ಲಿ ಬೆಳಗ್ಗೆ ಆಗುತ್ತಿದ್ದಂತೆ ಚರಂಡಿ ದರ್ಶನ. ಚರಂಡಿಯಲ್ಲಿ ಹಂದಿಗಳ ಹೊರಳಾಟ. ಸುತ್ತಮುತ್ತಲೂ ಸೊಳ್ಳೆ, ನೊಣಗಳದೇ ದರ್ಬಾರ, ಗಬ್ಬು ವಾಸನೆಯಲ್ಲಿಯೇ ಇಲ್ಲಿ ಜನ-ಜೀವನ.
ಈ ದೃಶ್ಯ ಕಂಡು ಬರುವುದು ಪಟ್ಟಣದ ಹೃದಯ ಭಾಗದಲ್ಲಿರುವ ಬಜಾರ ಕಾಲೋನಿ ಹಾಗೂ ವಾರ್ಡ್ ನಂ.6ರ ಅಂಚೆ ಕಚೇರಿ ಹತ್ತಿರದ ಪ್ರದೇಶದಲ್ಲಿ. ಬಜಾರ ಕಾಲೋನಿಯಲ್ಲಿ 40 ರಿಂದ 50 ಪತ್ರಾಸ್ ಮನೆಗಳಿದ್ದು ಸುಮಾರು 200ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು, ಈ ಜನರಿಗೆ ದಿನ ನಿತ್ಯ ಗಬ್ಬು ವಾಸನೆಯದ್ದೇ ದರ್ಶನ. ರಾತ್ರಿಯಾಗುತ್ತದ್ದಂತೆ ನೊಣ-ಸೊಳ್ಳೆಗಳ ಕಾಟ. ಇವುಗಳ ಮಧ್ಯೆಯೇ ಜೀವನ ಸಾಗಿಸುವ ಜನರ ಗೋಳು ಕೇಳುವವರಾರು ಇಲ್ಲದಂತಾಗಿದೆ.
ಡೆಂಘೀ, ಚಿಕೂನ್‌ಗುನ್ಯಾ, ರೋಗಗಳಂತಹ ಸಾಕ್ರಾಮಿಕ ರೋಗಗಳ ಭೀತಿ ಕಾಡುತ್ತಿರು ಸಂದರ್ಭದಲ್ಲಿ ಈ ಇಲ್ಲಿನ ಜನರ ಬದುಕು ದುಸ್ತರವಾಗಿದೆ. ಚಂರಂಡಿಯಿಂದ ಬಂದ ಕಲುಶಿತ ನೀರು ಸಂಗ್ರಹವಾಗಿ ದುರ್ವಾಸನೆ ಇಲ್ಲಿಯ ಜನ-ಜೀವನದ ಮೇಲೆ ಪರಿಣಾಮ ಬೀರುತ್ತಿದೆ.
ಪಟ್ಟಣದಲ್ಲಿ ಬೋರೆ ಹಳ್ಳ ಇದ್ದು, ಹಳ್ಳದಲ್ಲಿ ನೀರು ಇರುವುದರಿಂದ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಈ ದಾರಿಯ ಮೂಲಕವೇ ಹೋಗಬೇಕಾದ ಅನಿವಾರ್ಯವಿದೆ. ಈ ದಾರಿಯಿಂದ ಹೋಗುವ ವಿದ್ಯಾರ್ಥಿಗಳು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ರಸ್ತೆ ಚರಂಡಿ ಅಭಿವೃದ್ಧಿಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ಸುಮಾರು 4 ಕೋಟಿ ಬಿಡುಗಡೆಯಾಗಿತ್ತು. ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಮೇಲ್ದರ್ಜೆಗೇರಿಸಲು ಶಾಸಕ ದೇವಾನಂದ ಚವ್ಹಾಣ ಚಾಲನೆ ನೀಡಿದ್ದರು. ಸರಕಾರ ಬದಲಾವಣೆ ಸರ್ಕಾರ ಅನುದಾನಹಿಂಪಡೆದ ಹಿನ್ನೆಲೆಯಲ್ಲಿ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಅಭಿವೃದ್ಧಿ ಕುಂಟಿತವಾಗಿದೆ. ಈ ಗಬ್ಬು ವಾಸನೆಯಿಂದ ಮುಕ್ತಿ ಯಾವಾಗ ಎಂಬುದು ಸ್ಥಳೀಯರನ್ನು ಕಾಡುತ್ತಿದೆ.
ಚರಂಡಿ ನೀರು ನಿಂತು ಸೊಳ್ಳೆ ಕಾಟ ಹೆಚ್ಚಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಅನುಭವಿಸುವಂತಾಗಿದೆ. ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಈ ಕುರಿತು ಮುಖ್ಯಾ ಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅನುದಾನ ಇಲ್ಲದ ಕಾರಣ ಹೇಳುತ್ತಿದ್ದಾರೆ. ಏನಾದರೂ ಮಾಡಿ ಆದಷ್ಟೂ ಬೇಗ ವ್ಯವಸ್ಥೆ ಸರಿಪಡಿಸಬೇಕು. -ಶಬ್ಬೀರ್ ನದಾಫ ಮಾಜಿ ಗ್ರಾಪಂ ಸದಸ್ಯ
-ಸಂಗಮೇಶ ಹೂಗಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.