ಅಕ್ರಮ ಗಣಿಯಲ್ಲಿ ಭಾರಿ ಸ್ಫೋಟಕ್ಕೆ ಸಿದ್ಧತೆ : ಪೊಲೀಸ್ ದಾಳಿಯಿಂದ ತಪ್ಪಿದ ಅಪಾಯ
Team Udayavani, Jul 19, 2021, 4:04 PM IST
ವಿಜಯಪುರ : ಜಿಲ್ಲೆಯ ಅನಧಿಕೃತವಾಗಿ ನಡೆಯುತ್ತಿದ್ದ ಗಣಿಗಾರಿಕೆಯಲ್ಲಿ ಅಕ್ರಮವಾವಾಗಿ ಭಾರಿ ಪ್ರಮಾಣದ ಮದ್ದು ಬಳಸಿ ಸ್ಫೋಟಕ್ಕೆ ಸಿದ್ದತೆ ಮಾಡಿದ್ದನ್ನು ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ ವಿಫಲಗೊಳಿಸಿದ ಘಟನೆ ವರದಿಯಾಗಿದೆ.
ಹೊರ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಸೊಣಕನಹಳ್ಳಿ ಪ್ರದೇಶದಲ್ಲಿ ಅಶೋಕ ಬಂಡಿ ಎಂಬ ವ್ಯಕ್ತಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ. ಅಲ್ಲದೇ ಗಣಿಯಲ್ಲಿ ಅಕ್ರಮವಾಗಿ 92 ಗುಂಡಿಗಳಲ್ಲಿ ಸಿಡಿಮದ್ದು ತುಂಬಿ, ಜಿಲಿಟಿನ್ ಕಡ್ಡಿಗಳನ್ನು ಇರಿಸಿ ಕಲ್ಲು ಸ್ಫೋಟಿಸಲು ಸಿದ್ಧತೆ ಮಾಡಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಇಂಡಿ ಡಿಎಸ್ಪಿ ಶ್ರೀಧರ ದೊಡ್ಡಿ ಗಣಿಗಾರಿಕೆ ಮೇಲೆ ದಾಳಿ ನಡೆಸಿ, ಭಾರಿ ಪ್ರಮಾಣದಲ್ಲಿ ನಡೆಯಲಿದ್ದ ಅಕ್ರಮ ಸ್ಫೋಟವನ್ನು ತಡೆದಿದ್ದಾರೆ ಎಂದು ಎಸ್ಪಿ ಅನುಪಮ ಅಗರವಾಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಘಟನೆ ವಿವರ ನೀಡಿರುವ ಡಿಎಸ್ಪಿ ಶ್ರೀಧರ ದೊಡ್ಡಿ,ಜಿಲ್ಲೆಯ ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೊಣಕನಹಳ್ಳಿ ಪ್ರದೇಶದ ಅನಧಿಕೃತ ಗಣಿಗಾರಿಕೆ ಪ್ರದೇಶದಲ್ಲಿ ಅಕ್ರಮವಾಗಿ ಸ್ಫೋಟಕ್ಕೆ ನಡೆದಿದ್ದನ್ನು ವಿಫಲ ಗೊಳಿಸಲಾಗಿದೆ.
ಅಕ್ರಮವಾಗಿ ಸ್ಫೋಟಕ ಸರಬರಾಜು ಮಾಡಿದ ಸಿಂದಗಿ ಪಟ್ಟಣದ ಮಹೇಶ ಟ್ರೇಡರ್ಸ್ ಮ್ಯಾನೇಜರ್ ಲಕ್ಷ್ಮಣ, ಸ್ಪೋಟಕ್ಕೆ ಸಿದ್ಧತೆ ಮಾಡಿದ್ದ ಅಕ್ರಮ ಗಣಿ ಮಾಲೀಕ ಅಶೋಕ ಬಂಡಿ ಇವರನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ನಡೆದಿದೆ ಎಂದು ವಿವರಿಸಿದರು.
ಇದೇ ವೇಳೆ ಸ್ಫೋಟಕ್ಕೆ ಸಿದ್ಧಗೊಂಡಿರುವ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲು ಬೆಂಗಳೂರಿನಿಂದ ಬಾಂಬ್ ನಿಷ್ಕಯ ದಳದ ತಜ್ಞರು ಸ್ಥಳಕ್ಕೆ ಆಗಮಿಸಲಿದ್ದು, ಆ ಬಳಿಕವೇ ಸ್ಫೋಟಕದ ಸಾಮರ್ಥ್ಯ, ಪ್ರಮಾಣ, ಅಪಾಯದ ಸಂಭಾವ್ಯತೆಯಂಥ ಅಂಶಗಳು ಹೊರ ಬರಲಿವೆ ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಗಳಿಂದ ಅಧಿಕೃತ ಪರವಾನಿಗೆ ಪಡೆದಿರುವ ಗಣಿಗಳಲ್ಲಿ ಲೈಸೆನ್ಸ್ ಇರುವ ಸ್ಫೋಟಕ ಸರಬರಾಜುದಾರರಿಂದ ಮಾತ್ರ ಸಿಡಿಮದ್ದು ಖರೀಸಬೇಕು. ಅಲ್ಲದೇ ಪರವಾನಿಗೆ, ಲೈಸೆನ್ಸ್ ಇದ್ದರೂ ಏಕಕಾಲಕ್ಕೆ 5-10 ಕ್ಕಿಂತ ಹೆಚ್ಚಿನ ಸ್ಪೋಟ ಮಾಡುವಂತಿಲ್ಲ. ಹೀಗೆ ಪ್ರತಿ ಹಂತದಲ್ಲೂ ಸೊಣಕನಹಳ್ಳಿ ಪ್ರದೇಶದ ಅಕ್ರಮ ಗಣಿಗಾರಿಕೆಯಲ್ಲಿ ಕಾನೂನು ಉಲ್ಲಂಘನೆ ಆಗಿದೆ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.