ಮುದ್ದೇಬಿಹಾಳ ತಾಲೂಕಿನಲ್ಲಿ ಅಂಚೆ ಸೇವೆ ಬಂದ್
Team Udayavani, Mar 29, 2022, 5:39 PM IST
ಮುದ್ದೇಬಿಹಾಳ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರವ್ಯಾಪಿ ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಇಲ್ಲಿನ ಕೇಂದ್ರ ಸರ್ಕಾರ ಅಧೀನದ ಅಂಚೆ ಇಲಾಖೆಯ ಸಿಬ್ಬಂದಿ ಬೆಂಬಲ ನೀಡಿ ಎರಡು ದಿನಗಳ ಮುಷ್ಕರದಲ್ಲಿ ಪಾಲ್ಗೊಂಡಿರುವ ಹಿನ್ನೆಲೆ ತಾಲೂಕಿನಾದ್ಯಂತ ಸೋಮವಾರ ಅಂಚೆ ಸೇವೆ ಬಂದ್ ಆಗಿ ಸಾರ್ವಜನಿಕರು ಪರದಾಡುವಂತಾಯಿತು.
ಗ್ರಾಮೀಣ ಅಂಚೆ ನೌಕರರನ್ನು ಇಲಾಖೆಯ ನೌಕರರೆಂದು ಪರಿಗಣಿಸಬೇಕು. ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕು. ದಿನ ನಿತ್ಯದ ಕೆಲಸದಲ್ಲಿ ಅಡ್ಡಿಯಾಗುತ್ತಿರುವ ಎಲ್ಲ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು. 7ನೇ ವೇತನ ಆಯೋಗದ ಕನಿಷ್ಠ ವೇತನ ಹಾಗೂ ಫಿಟ್‌ಮೆಂಟ್ ಸೂತ್ರಗಳ ಬಗ್ಗೆ ರಾಷ್ಟ್ರೀಯ ಜಂಟಿ ಕ್ರಿಯಾ ಸಮಿತಿಗೆ ನೀಡಿದ ಆಶ್ವಾಸನೆಗಳನ್ನು ಜಾರಿಗೊಳಸಬೇಕು. ಜನವರಿ 2020ರಿಂದ ಜೂನ್ 2021ರವರೆಗೆ ತಡೆ ಹಿಡಿಯಲಾಗಿರುವ ತುಟ್ಟಿ ಭತ್ಯೆ ಪರಿಹಾರದ ಬಾಕಿ ಹಣವನ್ನು ನೀಡುವುದು. ಹೊಸ ಪಿಂಚಣಿ ಪದ್ಧತಿ ರದ್ದುಗೊಳಿಸಿ ಹಳೆಯ ಪಿಂಚಣಿ ಪದ್ಧತಿ ಜಾರಿಗೊಳಿಸುವುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಅಂಚೆ ನೌಕರರು ಒತ್ತಾಯಿಸಿದರು.
ಮುಷ್ಕರ ಹಿನ್ನೆಲೆ ತಮ್ಮೆಲ್ಲ ಕೆಲಸ ಕಾರ್ಯ ಸ್ಥಗಿತಗೊಳಿಸಿ ತಾಲೂಕಿನ ವಿವಿಧ ಗ್ರಾಮಗಳಿಂದ ಇಲ್ಲಿನ ಮುಖ್ಯ ಅಂಚೆ ಕಚೇರಿಗೆ ಆಗಮಿಸಿದ್ದ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್‌ಗಳು ಅಂಚೆ ನೌಕರರ ಒಕ್ಕೂಟದ ಬೇಡಿಕೆಗಳ ಪಟ್ಟಿಯನ್ನು ಉಪವಿಭಾಗದ ಅಂಚೆ ನಿರೀಕ್ಷಕ ಕೆ.ಎಸ್.ಸಂಕರಟ್ಟಿ ಅವರಿಗೆ ಮನವಿ ಮೂಲಕ ಸಲ್ಲಿಸಿದರು.
ಎಂ.ಎಸ್.ಗಡೇದ, ಪಿ.ಕೆ.ಜೋಶಿ, ಆರ್.ವೈ.ವಾಲೀಕಾರ, ಇಬ್ರಾಹಿಂ ಬಿದರಕುಂದಿ, ಶ್ರೀಶೈಲ ಮುದ್ದೇಬಿಹಾಳ, ಎಸ್ .ಡಿ. ಗಂಜಿಹಾಳ, ಶಾಂತು ಬೈಲಗೊಂಡ, ಚಂದ್ರಶೇಖರ ತೊಂಡಿಹಾಳ, ಎಸ್.ಎಸ್.ಬಿದ್ನಾಳಮಠ, ಜಿ.ಬಿ.ಯಾಳವಾರ, ಸೋಮಸಿಂಗ ನಾಯಕ, ಸುರೇಶ ಹುಲ್ಲೂರ, ವಿಜಯಲಕ್ಷ್ಮೀ ಇಲಕಲ್ಲ, ರೇಖಾ ಈಳಗೇರ, ಸರೋಜಾ ದೊಡಮನಿ, ಶೃತಿ ಭೋಸಲೆ, ಸಂಗಣ್ಣ ಲಾಯದಗುಂದಿ, ಎಂ.ಜಿ.ಕುಲಕರ್ಣಿ, ಶರಣಪ್ಪ ಹಡಪದ, ಕರಿಯಪ್ಪ ಕುರಿ, ಗುರುಲಿಂಗಪ್ಪ ಹೊಲೇರ, ಸಂತೋಷ ಪಾಟೀಲ, ಪ್ರಭು ಪತ್ತಾರ, ಹಣಮಂತ ಹಣಮಸಾಗರ, ಬಸವರಾಜ ಕಲ್ಹಾರಿ, ಹಣಮಂತ ಪೂಜಾರಿ, ನಿಂಗರಾಜ ಮಾಳಗಿಮನಿ, ಚನ್ನಪ್ಪ ಟಕ್ಕೋಡ, ಪವಾಡೆಪ್ಪ ಗುಡಸಲಮನಿ, ಬಸವರಾಜ ಹುಲ್ಲೂರ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.