ಅಂತರ್ಜಲ ಸಂರಕ್ಷಣೆಗೆ ಮುಂದಾಗಿ
Team Udayavani, Feb 5, 2018, 1:16 PM IST
ಚಡಚಣ: ಅಂತರ್ಜಲ ಎನ್ನುವುದು ಬ್ಯಾಂಕ್ನ ಉಳಿತಾಯ ಖಾತೆ ಇದ್ದಂತೆ. ಖಾತೆಗೆ ಆಗಾಗ ಹಣ ಜಮೆ ಮಾಡುತ್ತಿದ್ದರೆ ಮಾತ್ರ ಖಾತೆಯಿಂದ ಹೇಗೆ ಹಣ ಬಳಸಿಕೊಳ್ಳಬಹುದೋ ಹಾಗೆಯೇ ಅಂತರ್ಜಲ ಎಂಬ ಖಾತೆಯನ್ನು ಮರುಪೂರಣ ಮಾಡುವ ಕೆಲಸ ಆಗಬೇಕಾಗಿದೆ ಎಂದು ವಿಜಯಪುರ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ದೇಶಕ ಡಾ| ಬಾಬು ಸಜ್ಜನ ಹೇಳಿದರು.
ಹಿರಿಯ ಭೂ ವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ ಹಾಗೂ ಅಂತರ್ಜಲ ನಿರ್ದೇಶನಾಲಯಗಳ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಸಂಗಮೇಶ್ವರ ಮಾಧ್ಯಮಿಕ ಶಾಲೆಯಲ್ಲಿ ಅಂತರ್ಜಲ ಕುರಿತು ಮಕ್ಕಳಿಗೆ ಹಮ್ಮಿಕೊಂಡಿದ್ದ ಜಾಗೃತಿ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.
ನಾವೀಗ ಅಂತರ್ಜಲ ಎಂಬ ಖಾತೆಯನ್ನು ಬರಿದು ಮಾಡುವುದರಲ್ಲಿ ನಿರತರಾಗಿದ್ದೇವೆ. ಮರುಪೂರಣದ
ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಬಳಸಿಕೊಂಡಿದ್ದೇವೆ, ಈಗಲೂ ಬಳಸಿಕೊಳ್ಳುತ್ತಿದ್ದೇವೆ. ಅದರ ಕಹಿ ಫಲಗಳು ನಮ್ಮೆಲ್ಲರ ಅನುಭವಕ್ಕೆ ಬಂದಿದ್ದು, ಎಷ್ಟೋ ಕಡೆ ಸದ್ಯ ಸಾವಿರ ಅಡಿ ಆಳ ಭೂಮಿ ಕೊರೆದರು ನೀರು ದೊರಕುತ್ತಿಲ್ಲ ಎಂದು ಹೇಳಿದರು.
ನೆಲದಾಳಕ್ಕೆ ಹೋದಂತೆ ನೀರಿನ ಗುಣಮಟ್ಟ ಕೂಡ ವಿಷಮಿಸುತ್ತದೆ. ಕುಡಿಯಲು ಮತ್ತು ಬಳಸಲು ಯೋಗ್ಯವಲ್ಲದ ನೀರಿನಿಂದ ಅಪಾಯವೇ ಹೆಚ್ಚು. ಆದ್ದರಿಂದ ಅಂತರ್ಜಲದ ಮರು ಭರ್ತಿ ನಮ್ಮೆಲ್ಲರ ನಿತ್ಯ ಬದುಕಿನ ಒಂದು ಭಾಗವಾಗಬೇಕು. ಇಲ್ಲದೆ ಹೋದರೆ, ಪಾತಾಳಕ್ಕಿಳಿದರೂ ನಮಗೆ ನೀರು ದೊರಕದ ಪರಿಸ್ಥಿತಿ ಎದುರಾದಿತು ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ವಿಜ್ಞಾನ ವಿಷಯ ಪರಿವೀಕ್ಷಕಿ ವಿಮಲಾ ಹಂದಿಗೋಳ ಹಾಗೂ ಮನಗೂಳಿ ಗ್ರಾಮದ ಪಪೂ
ಮಹಾವಿದ್ಯಾಲಯದ ಪ್ರಾಚಾರ್ಯ ಆರ್. ಕೆ. ಹನನಗಂಡಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಬಾಬುಗೌಡ ಪಾಟೀಲ, ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಶಿಕ್ಷಣ ಸಂಸ್ಥೆಯ
ನಿರ್ದೇಶಕಿ ನಾಗಮ್ಮ ಅಂಕದ, ಮುಖ್ಯಗುರು ಎಚ್.ಆರ್. ಬಗಲಿ, ಐಆರ್ಡಿ ಸಂಸ್ಥೆ ಸಿಬ್ಬಂದಿಗಳಾದ ದಶರಥ ಬನಸೋಡೆ, ಬಿ.ಎಫ್. ನಾಯ್ಕರ ಸೇರಿದಂತೆ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್ಎಫ್ಡಿಪಿ ಪೋರ್ಟಲ್ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.