ವಿಶ್ವಕ್ಕೆ ಸಂಖ್ಯಾಶಾಸ್ತ್ರಜ್ಞ ನೋಬಿಸ್ ಕೊಡುಗೆ ಅನನ್ಯ: ಡಾ| ಔದ್ರಾಮ್
Team Udayavani, Jul 5, 2020, 9:55 AM IST
ವಿಜಯಪುರ: ಜಗತ್ತಿನಲ್ಲಿ ಸಂಖ್ಯಾಶಾಸ್ತ್ರದ ಮಹತ್ವದ ಮನವರಿಕೆ ಮಾಡಿಕೊಟ್ಟ ಮೊದಲಿಗ ಸಂಖ್ಯಾಶಾಸ್ತ್ರದ ಪಿತಾಮಹ ಪ್ರೊ| ಪಿ.ಸಿ. ಮಹಾಲೋನೋಬಿಸ್, ಪಂಚವಾರ್ಷಿಕ ಯೋಜನೆಗಳ ನಿರೂಪಣೆಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ| ಔದ್ರಾಮ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಖ್ಯಾಶಾಸ್ತ್ರಜ್ಞ ಪ್ರೊ| ಪಿ.ಸಿ. ಮಹಾಲ್ ನೋಬಿಸ್ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ನಿತ್ಯದ ಜೀವನದಲ್ಲಿ ನೋಬಿಸ್ ನೀಡಿದ ಕೊಡುಗೆ ಸ್ಮರಿಸಬೇಕು. ಪ್ರಸಕ್ತ ಸಂದರ್ಭದಲ್ಲಿ ಯಾವುದೇ ದೇಶ ತನ್ನ ಯೋಜನೆ ರೂಪಿಸಲು ಅಂಕಿ-ಅಂಶಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟವರು ನೋಬಿಸ್ ಎಂದು ವಿಶ್ಲೇಷಿಸಿದರು.
ಲಿಂಗ ಸಮಾನತೆ ಕುರಿತು ತಿಳಿಸಿ ಸ್ತ್ರೀ-ಪುರುಷರು ಸಮಾನರು. ಗಂಡು, ಹೆಣ್ಣು ಎಂಬ ಭೇದವಿಲ್ಲದೆ ಸಮಾನ ಶಿಕ್ಷಣ ಪಡೆಯಬೇಕು. ವಾಯುಮಾಲಿನ್ಯ, ಜಲಮಾಲಿನ್ಯದ ಜೊತೆಗೆ ಆರೋಗ್ಯ ಮತ್ತು ಮನಸ್ಸಿನ ಮಾಲಿನ್ಯ ತೊಡೆದು ಹಾಕಬೇಕು. ಹಿರಿಯರನ್ನು ಹಿರಿಯರಾಗಿ ಕಾಣದೇ ವೃದ್ಧಾಶ್ರಮಗಳಲ್ಲಿ ಕಳುಹಿಸುತ್ತಿರುವುದು ಖೇದಕರ ಹಾಗೂ ಆತಂಕದ ಸಂಗತಿ. ನಾವು ನಿಸರ್ಗವನ್ನು ಕಾಪಾಡಿದರೆ ನಿಸರ್ಗ ನಮ್ಮನ್ನು ಕಾಪಾಡುತ್ತದೆ ಎಂಬ ನೈಜತೆಯನ್ನು ಎಲ್ಲರೂ ಅರಿಯಬೇಕು ಎಂದರು.
ಈ ವೇಳೆ ಸುಸ್ಥಿರ ಅಭಿವೃದ್ಧಿಯ 17 ಗುರಿಗಳ ಪ್ರಚಾರ ಪರಿಕರಗಳನ್ನು ಬಿಡುಗಡೆ ಮಾಡಲಾಯಿತು. ಜಿಪಂ ಮುಖ್ಯ ಯೋಜನಾಧಿಕಾರಿ ಎನ್.ಕೆ. ಗೋಠೆ, ಜಿಪಂ ವಿಜಯಪುರ ಕಚೇರಿಯ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಎ.ಬಿ. ಅಲ್ಲಾಪುರ ಸಹಾಯಕ ಯೋಜನಾ ನಿರ್ದೇಶಕ ಸಿ.ಬಿ. ಕುಂಬಾರ, ಎಸ್.ಬಿ. ಆರ್ಟ್ಸ್ ಮತ್ತು ಕೆಸಿಪಿ ಸೈನ್ಸ್ ಕಾಲೇಜಿನ ಉಪನ್ಯಾಸಕ ಆರ್.ಆರ್. ಬಿರಾದಾರ, ಜಿಪಂ ಕೌಶಲಾಭಿವೃದ್ಧಿ ಅಧಿಕಾರಿಗಳು ಇದ್ದರು. ಎ.ಬಿ. ಮನಿಯಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಅಧ್ಯಕ್ಷ ಖರ್ಗೆಗೆ ರಾಜಕಾರಣ ಸಾಕು; ಅವರು ಮನೆಯಲ್ಲಿರಲಿ: ಸಂಸದ ಜಿಗಜಿಣಗಿ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್
Vijayapura: ಇಟ್ಟಿಗೆ ಭಟ್ಟಿ ಕಾರ್ಮಿಕರ ಮೇಲೆ ಅಮಾನುಷ ಹಲ್ಲೆ; ಇಬ್ಬರ ಬಂಧನ
Vijayapura: ತಂದೆ ಸಹಿ ನಕಲು ಮಾಡಿದ ಬಿವೈವಿ ಒಪ್ಪಲ್ಲ; ಯತ್ನಾಳ್