ಪೌರ ನೌಕರರ ಪ್ರತಿಭಟನೆ
Team Udayavani, Jul 8, 2017, 1:54 PM IST
ಸಿಂದಗಿ: ಪೌರ ಕಾರ್ಮಿಕರ ಮೇಲೆ ಪುರಸಭೆ ಸದಸ್ಯ ಹಲ್ಲೆ ಮಾಡಿದ್ದನ್ನು ಖಂಡಿಸಿ ಶುಕ್ರವಾರ ಪೌರ ನೌಕರರು ಕಚೇರಿ ಕೆಲಸ, ನೈರ್ಮಲೀಕರಣ ಹಾಗೂ ನೀರು ಸರಬರಾಜು ಬಂದ್ ಮಾಡಿ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ರಮೇಶ ಇಮ್ಮನದ ಅವರಿಗೆ ಪೌರ ನೌಕರರು ಮನವಿ ಸಲ್ಲಿಸಿದರು.
ಪಟ್ಟಣದ ಪುರಸಭೆಯ ಜಲ ಶುದ್ಧಿಕರಣ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ನೌಕರರಾದ ಖಾಜು ಭಾಗಪ್ಪ
ಭಾವಿಮನಿ, ಭೀಮಣ್ಣ ಸಂಗಪ್ಪ ಕಟ್ಟಿಮನಿ ಅವರ ಮೇಲೆ ಪುರಸಭೆ ವಾರ್ಡ್ ನಂ. 16ರ ಸದಸ್ಯ ಗುರುಪಾದ ಮನಗೂಳಿ
ತಮ್ಮ ಬೆಂಬಲಿಗರೊಂದಿಗೆ ವಿನಾಕಾರಣ ಹಲ್ಲೆ ನಡೆಸಿ ನಿಂದನೆ ಮಾಡಿದ್ದಾರೆ. ಮನಗೂಳಿ ಅವರು ಕ್ಷಮೆ ಕೆಳಬೇಕು ಎಂದು
ಒತ್ತಾಯಿಸಿದರು.
ಪೌರ ನೌಕರರ ಮೇಲೆ ಹಲ್ಲೆ ಮಾಡಿದ ಸದಸ್ಯ ಗುರುಪಾದ ಮನಗೂಳಿ ಅವರ ಸದಸ್ಯತ್ವ ರದ್ದು ಮಾಡಬೇಕು. ಇಲ್ಲದ
ಪಕ್ಷದಲ್ಲಿ ಉಗ್ರಾವದ ಹೋರಾಟದ ಎಚ್ಚರಿಕೆ ನೀಡಿದರು. ರಮೇಶ ಪಾಟೀಲ, ಅಬ್ಟಾಸಲಿ ಕಾಖಂಡಕಿ, ಸುನೀಲಕುಮಾರ ಸಾಬೋಜಿ,
ಅಭಿಷೇಕ ಪಾಂಡೆ, ಬಿ.ಆರ್. ಹಿರೇಮನಿ, ಎಸ್.ಬಿ. ಗೋನಜಾಳ, ಡಿ.ಎಸ್. ಅವರ್ಗಿ, ರೂಪಾ ಸಿಂಧೆ, ಪರಶುರಾಮ ಜವಳಿ, ದಯಾನಂದ ಕಲಬುರ್ಗಿ, ಜಗು ದೊಡಮನಿ, ಮಹಾದೇವಿ ಬಡಿಗೇರ, ಪರಶುರಾಮ ಜವಳಿ, ಎಸ್.ಎ. ಗತ್ತರಗಿ, ಡಿ.ಎಸ್. ಗೊಳಸಂಗಿ, ಭೀಮು ಕಾಂಬಳೆ, ಬಸು ಸಿನ್ನೂರ, ಸರೋಜಿನಿ ಬಸವರಾಜ, ಸಾವಿತ್ರಿ ಬಿಸಲಾನಳ, ಮಲ್ಲವ್ವ ಬ್ಯಾಕೋಡ, ಯಲ್ಲವ್ವ ಎಮ್ಮಿ, ಪೀರವ್ವ, ರೇಣುಕಾ ಚೌರ ಸೇರಿದಂತೆ ಪೌರ ನೌಕರರು ಹಾಗೂ ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.