ಗೌರಿ ಹತ್ಯೆ ಖಂಡಿಸಿ ವಿವಿಧೆಡೆ ಪ್ರತಿಭಟನೆ


Team Udayavani, Sep 8, 2017, 3:37 PM IST

vij-3.jpg

ಮುದ್ದೇಬಿಹಾಳ: ಹಿರಿಯ ಪತ್ರಕರ್ತೆ, ವಿಚಾರವಾದಿ ಚಿಂತಕಿ ಗೌರಿ ಲಂಕೇಶ ಹತ್ಯೆ ಖಂಡಿಸಿ ಪಟ್ಟಣದ ಪ್ರಗತಿಪರ ವಿಚಾರವಾದಿಗಳ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ತೋಳಿಗೆ ಕಪ್ಪುಪಟ್ಟಿ ಧರಿಸಿ ದುಷ್ಕೃತ್ಯಕ್ಕೆ ವಿಷಾಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಬಸವೇಶ್ವರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು. ಹತ್ಯೆಗೆ ಕಾರಣರಾದವರನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸುವಂತೆ ಒತ್ತಾಯಿಸಿದರು. ನಂತರ ಮಿನಿ ವಿಧಾನಸೌಧವರೆಗೆ ರ್ಯಾಲಿ ನಡೆಸಿ ಗ್ರೇಡ್‌-2 ತಹಶೀಲ್ದಾರ ಎಸ್‌.ಎಸ್‌. ಹೂನಳ್ಳಿ ಅವರಿಗೆ ಪ್ರಧಾನಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.

ಪ್ರಜಾಪ್ರಭುತ್ವ ಪದ್ಧತಿ ಹೊಂದಿರುವ ದೇಶದಲ್ಲಿ ಎಡ, ಬಲ ವಿಚಾರಗಳ ಸಂಘರ್ಷ ಇದ್ದರೂ ಭಿನ್ನತೆಯಿಂದಾಗಿ ಒಬ್ಬ ವ್ಯಕ್ತಿ ಮತ್ತೂಬ್ಬ ವ್ಯಕ್ತಿ ಹತ್ಯೆ ಮಾಡುವುದು ಹೇಯ ಕೃತ್ಯ. ಇದು ಖಂಡನೀಯ. ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ನಾಗರಿಕ ಸಮಾಜದ ಲಕ್ಷಣವಲ್ಲ. ಗೌರಿ ಲಂಕೇಶ ಅವರ ಹತ್ಯೆ ಜತೆಗೆ ದೇಶದ ವೈಚಾರಿಕ ಸಿದ್ಧಾಂತದ ಹತ್ಯೆಯೂ ನಡೆದಂತಾಗಿದೆ ಎಂದು ದೂರಿದರು.

ಏಕತೆ ಹಿನ್ನೆಲೆ ಕೋಮು ಸೌಹಾರ್ದದ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಸಹಿಸದ ಹಿಂದು ಕೋಮುವಾದಿಗಳು, ವೈಚಾರಿಕತೆ ಸಹಿಸದ ಕಂದಾಚಾರಿಗಳು, ಮೌಡ್ಯ ಬೆಂಬಲಿತ ಶಕ್ತಿಗಳು ಹತ್ಯೆ ಮಾಡಿರುವ ಸಂಭವ ಇದೆ. ದೇಶದಲ್ಲಿ ಮುದ್ರಣ, ಡಿಜಿಟಲ್‌ ಮಾಧ್ಯಮಗಳು ಸಂವಿಧಾನಬದ್ಧವಾಗಿ ಒದಗಿಬಂದ ವಾಕ್‌ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಬೆಂಬಲದಿಂದ ಕೆಲಸ ಮಾಡುತ್ತಿವೆ. 2-3 ವರ್ಷಗಳಿಂದ ಈ ದೇಶದಲ್ಲಿ ದೇವರು, ಧರ್ಮ, ಜಾತಿ, ಮತ, ಪಂಥ, ಆಹಾರ, ಸಂಸ್ಕೃತಿ, ಉಡುಗೆ ತೊಡುಗೆ ವಿಚಾರವಾಗಿ ಧರ್ಮಾಂಧತೆ, ಕೋಮುದ್ವೇಷ, ಅಸಹಿಷ್ಣುತೆ ಹೆಚ್ಚಾಗುತ್ತಿವೆ. ಇದರ ನೆರಳಲ್ಲಿ ವಿಚಾರವಾದಿಗಳ, ಪ್ರತಕರ್ತರ ಹತ್ಯೆ ಆಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಗೌರಿ ಲಂಕೇಶ ಅವರ ಹತ್ಯೆ ತೀವ್ರ ದುಃಖಕ್ಕೆ ಕಾರಣವಾಗಿದ್ದು ಆತಂಕ ಸೃಷ್ಟಿಸಿದೆ. ನಾಡಿನ ಉದ್ದಗಲಕ್ಕೂ ಇಂಚಿಂಚು
ಜಾಲಾಡಿ ದುಷ್ಕರ್ಮಿಗಳನ್ನು ಬಂಧಿಸಿ ಉಗ್ರ ಶಿಕ್ಷೆಗೊಳಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಹಿರಿಯ ಸಾಹಿತಿ ಪ್ರೊ| ಬಿ.ಎಂ. ಹಿರೇಮಠ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಬಿ. ನಾವದಗಿ, ಮನೆಯಲ್ಲಿ ಮಹಾಮನೆ ಬಳಗದ ಎಸ್‌.ಬಿ. ಬಂಗಾರಿ, ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಡಿ.ಬಿ. ಮುದೂರ, ಡಾ|ಪಿ.ಎಚ್‌. ಉಪ್ಪಲದಿನ್ನಿ, ಪ್ರಗತಿಪರ ಚಿಂತಕರಾದಅರವಿಂದ ಕೊಪ್ಪ, ಜೆ.ಡಿ. ಮುಲ್ಲಾ, ಎಸ್‌.ಎಂ.ನೆರಬೆಂಚಿ, ಎಸ್‌.ಕೆ. ಘಾಟಿ, ಈರಯ್ಯ ಹಿರೇಮಠ, ಮಹಾಂತೇಶ ಪಟ್ಟಣದ, ಬಿ.ಎಸ್‌. ಕುಂಟೋಜಿ, ಎಂ.ವಿ. ಕಾರಗನೂರ, ರಮೇಶ ವಗ್ಗರ, ನಾಗೇಶ ಅಮರಾವತಿ, ಬಸವರಾಜ ಮೇಟಿ, ಅಲ್ತಾಪ್‌ ಬಾಗವಾನ, ಬಲಭೀಮ ನಾಯಕಮಕ್ಕಳ, ಪರಶುರಾಮ ಮುರಾಳ, ಪಾವಡೆಪ್ಪ ಚಲವಾದಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾನಪದ ಸಾಹಿತ್ಯ ಪರಿಷತ್ತು, ವಿಕಲಚೇತನರ ಒಕ್ಕೂಟ, ವಾಲ್ಮೀಕಿ ಸಂಘ, ದಲಿತ ಸಂಘರ್ಷ ಸಮಿತಿ, ರಾಜ್ಯ ಐಟಿಐಗಳ ಸಂಘ ಸೇರಿದಂತೆ ಪ್ರಗತಿಪರ ವಿಚಾರವಾದಿ ಸಂಘಟನೆಗಳು ಪ್ರತಿಭಟನೆ
ಬೆಂಬಲಿಸಿ ಅವುಗಳ ನೂರಾರು ಸದಸ್ಯರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ತಾಳಿಕೋಟೆ: ಖ್ಯಾತ ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆ ಖಂಡಿಸಿ ಪಟ್ಟಣದಲ್ಲಿ ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಹಾಗೂ ಎಸ್‌ಐಒ ಒಳಗೊಂಡು ವಿವಿಧ ಪ್ರಗತಿ ಪರ ಸಂಘಟನೆಗಳ ಚಿಂತಕರ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ವಿವಿಧ ಪ್ರಗತಿಪರ ಸಂಘಟನೆ ಕಾರ್ಯಕರ್ತರು ವಿಜಯಪುರ ವೃತ್ತದಲ್ಲಿ ಕೆಲವು ಘಂಟೆಕಾಲ ರಸ್ತೆ ತಡೆ ನಡೆಸಿ ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಉಪಾಧ್ಯಕ್ಷ ಜೈಭೀಮ ಮುತ್ತಗಿ, ವಲಯ ಘಟಕದ ಅಧ್ಯಕ್ಷ ನಿಸಾರ ಬೇಪಾರಿ, ಜಯ ಕರ್ನಾಟಕ ಸಂಘಟನೆ ಗೌರವಾಧ್ಯಕ್ಷ ಕುಮಾರಗೌಡ ಪಾಟೀಲ, ಕೆಜೆಯು ಸಂಘಟನೆ ಸದಸ್ಯ, ಪತ್ರಕರ್ತ ಅಬ್ದುಲ್‌ಗ‌ನಿ ಮಕಾಂದಾರ ಹಾಗೂ ಎಪಿಸಿಆರ್‌ ಸಂಘಟನೆಯ ಮೇರು ಬ್ಯಾಗವಾಟ ಮಾತನಾಡಿದರು. ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಸಂಘಟನೆ ಕಾರ್ಯದರ್ಶಿ ಅಂಬಾಜಿ ಘೋರ್ಪಡೆ, ಪ್ರವೀಣ ಘೋರ್ಪಡೆ, ಕರವೇ ವಲಯ ಘಟಕದ ಅಧ್ಯಕ್ಷ ನಿಸಾರ ಬೇಪಾರಿ, ಪ್ರಭು ಪಾಟೀಲ, ನಬಿ ಲಾಹೋರಿ, ಪ್ರಭು ಅಣ್ಣಿಗೇರಿ, ನಾಗೇಶ ಪತ್ತಾರ, ಅಶೋಕ
ಗುರ್ಜಲಕರ, ಗೌಸ ನಾವದಗಿ, ಸುಭಾಸ ಮಡಿವಾಳ, ಅಬುಬಕರ ಲಾಹೋರಿ, ಚಂದ್ರು ಕಸಬೇಗೌಡರ, ಎಸ್‌ಐಒ ಜಿಲ್ಲಾ ಸಂಚಾಲಕ ಮುಜಾಹೀದಿನ್‌ ನಮಾಜಕಟ್ಟಿ, ಇರ್ಫಾನ್‌ ಖಾಜಿ, ಮುಬಸ್ಸಿರ ಶಿವಣಗಿ, ಫಯಾಜ್‌ ಉತ್ನಾಳ, ಜಯ ಕರ್ನಾಟಕ ಸಂಘಟನೆ ನಗರ ಘಟಕ ಅಧ್ಯಕ್ಷ ನಾಗರಾಜ ಮೋಟಗಿ, ವೀರೇಶ ತಾಳಿಕೋಟಿ, ಗೋಪಾಲ ಕಟ್ಟಿಮನಿ, ಕಾಶಿನಾಥ ನಾಯೊಡಿ, ಸಂತೋಷ ಪೂಜಾರಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.