ಎಸಿ ಕಚೇರಿ ಆರಂಭಕ್ಕೆ ಆಗ್ರಹಿಸಿ ಇಂದು ಪ್ರತಿಭಟನೆ


Team Udayavani, Oct 10, 2018, 1:09 PM IST

vij-4.jpg

ಮುದ್ದೇಬಿಹಾಳ: ಮುದ್ದೇಬಿಹಾಳದಲ್ಲಿ ಎಸಿ ಕಚೇರಿ ಆರಂಭಿಸುವಂತೆ ಆಗ್ರಹಿಸಿ ಅ. 10ರಂದು ಬೆಳಗ್ಗೆ 10:30ಕ್ಕೆ
ಬೃಹತ್‌ ಮೆರವಣಿಗೆ ನಡೆಸಲಾಗುತ್ತಿದೆ. ಬಸವೇಶ್ವರ ವೃತ್ತದಲ್ಲಿ ಒಂದು ಘಂಟೆ ರಸ್ತಾ ರೋಖೋ ಮಾಡಿ ನಂತರ
ತಹಶೀಲ್ದಾರ್‌ಗೆ ಮನವಿ ನೀಡಲಾಗುತ್ತದೆ ಎಂದು ಎಸಿ ಕಚೇರಿ ಹೋರಾಟಗಾರರು ತಿಳಿಸಿದರು.

ಇಲ್ಲಿನ ಗಾರ್ಡನ್‌ನಲ್ಲಿ ಪೂರ್ವಭಾವಿ ಸಭೆ ನಡೆಸಿ ನಂತರ ಮಾತನಾಡಿದ ಪ್ರಮುಖ ಹೋರಾಟಗಾರ ನಗರಾಭಿವೃದ್ಧಿ ಯುವ ವೇದಿಕೆ ಸಂಚಾಲಕ ಬಸಯ್ಯಸ್ವಾಮಿ ನಂದಿಕೇಶ್ವರಮಠ, ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಬಿಜೆಪಿ, ಜೆಡಿಎಸ್‌ ಸಮ್ಮಿಶ್ರ ಸರಕಾರದ ಆಡಳಿತಾವಧಿಯಲ್ಲಿ ಆಡಳಿತದ ಅನುಕೂಲಕ್ಕಾಗಿ ರಾಜ್ಯಾದ್ಯಂತ ಹತ್ತು ಕಡೆಗಳಲ್ಲಿ
ಉಪ ವಿಭಾಗಾಧಿಕಾರಿಗಳ ಕಚೇರಿಗಳನ್ನು ಆರಂಭಿಸಬೇಕು ಎಂದು ತೀರ್ಮಾನಿಸಿದಾಗ ಆ ಹತ್ತರಲ್ಲಿ ಮುದ್ದೇಬಿಹಾಳ ಕೂಡಾ ಒಂದಾಗಿತ್ತು. ಅಂದಿನ ಸರಕಾರಗಳು ಅತಂತ್ರ ಸ್ಥಿತಿಯಲ್ಲಿ ಇದ್ದ ಕಾರಣ ಈ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳಲಿಲ್ಲ. ಈ ಹಿಂದಿನ ಆಡಳಿತಗಳ ಅವಧಿಯಲ್ಲಿ ಇದ್ದವರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸದ ಕಾರಣದಿಂದಾಗಿ ಮುದ್ದೇಬಿಹಾಳದಲ್ಲಿ ಎಸಿ ಕಚೇರಿ ಆರಂಭಕ್ಕೆ ವಿಳಂಬವಾಗಿದೆ. ಸರಕಾರದ ಈ ವಿಳಂಬ ನೀತಿಯಿಂದ ಈ ಭಾಗದ ರೈತರಿಗೆ ಬಹಳ ಅನ್ಯಾವಾಗುತ್ತಿದೆ ಎಂದರು. ಉಪ ವಿಭಾಗಾಧಿಕಾರಿ ಕಚೇರಿಗೆ ಮುದ್ದೇಬಿಹಾಳ ಸೂಕ್ತ ಸ್ಥಳವಾಗಿದೆ.

ಆದ್ದರಿಂದ ಆದಷ್ಟು ಬೇಗನೆ ನಗರದಲ್ಲಿ ಈಗಾಗಲೇ ನ್ಯಾಯಾಲಯದ ಕಟ್ಟಡ, ಹಳೆ ತಹಶೀಲ್ದಾರ್‌ ಕಚೇರಿ ಮತ್ತು
ಈಗಿನ ಹೊಸ ತಹಶೀಲ್ದಾರ್‌ ಕಚೇರಿಯಲ್ಲಿ ತಕ್ಷಣ ಉಪ ವಿಭಾಗಾಧಿಕಾರಿಗಳ ಕಚೇರಿ ಆರಂಭಿಸಬಹುದು. ಇದಲ್ಲದೆ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಸಾವಿರಕ್ಕೂ ಹೆಚ್ಚು ಭೂನ್ಯಾಯಗಳು ಇತ್ಯರ್ಥವಾಗದೇ ನನೆಗುದುಗೆ ಬಿದ್ದಿವೆ. ಈಗ ಇಂತಹ ಪ್ರಕರಣಗಳ ವಿಚಾರಣೆಗೆ ಈಗ ವಿಜಯಪುರದಿಂದ ಅಧಿಕಾರಿಗಳು ಬರುತ್ತಿದ್ದಾರೆ.

ಒಮ್ಮೊಮ್ಮೆ ಇವರು ಬರುವದಿಲ್ಲ ಹೀಗಾಗಿ ಸಾಕಷ್ಟು ಖರ್ಚು ಮಾಡಿಕೊಂಡ ಬಂದ ರೈತರು ನಿರಾಶರಾಗುತ್ತಾರೆ. ಪ್ರಕರಣ
ನನೆಗುದಿಗೆ ಬಿದ್ದು ರೈತರ ದೈನಂದಿನ ಜೀವನಕ್ಕೆ ಬಹಳ ತೊಂದರೆಯಾಗುತ್ತಿದೆ. ಹೀಗಾಗಿ ಬರುವ ಹಣಕಾಸು ವರ್ಷದಲ್ಲಿಯೇ ಮುದ್ದೇಬಿಹಾಳದಲ್ಲಿ ನಿಯೋಜಿತ ಎಸಿ ಕಚೇರಿ ಆರಂಭಿಸಬೇಕೆಂದು ಸರಕಾರವನ್ನು ಒತ್ತಾಯಿಸಲು ನಿರ್ಧರಿಸಲಾಯಿತು.

ಹೋರಾಟದಲ್ಲಿ ನಗರದ ಎಲ್ಲ ಸಮಾಜಗಳ ಮುಖಂಡರು, ಎಲ್ಲ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಮಾಜಿ ಸೈನಿಕರು, ವ್ಯಾಪಾರಸ್ಥರ ಸಂಘಗಳು, ಯುವಕ ಸಂಘಗಳು, ಮಹಿಳಾ ಸಂಘಗಳು, ನಿವೃತ್ತ ನೌಕರರು, ಮುಂತಾದ ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಳಲಿದ್ದಾರೆ. ಹೋರಾಟದಲ್ಲಿ ಎ.ಸಿ ಕಚೇರಿ ಆರಂಭದ ಜೊತೆಗೆ, ಆರ್‌ಟಿಒ ಕಚೇರಿ ಮತ್ತು ಮುದ್ದೇಬಿಹಾಳ ನಗರ ಪೊಲೀಸ್‌ ಠಾಣೆಗೂ ಬೇಡಿಕೆ ಇಡಲಾಗುತ್ತದೆ ಎಂದು ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಧುರೀಣರಾದ ಪ್ರಭು ಕಡಿ, ಎಸ್‌.ಎನ್‌. ಪಟ್ಟಣಶೆಟ್ಟಿ (ವಕೀಲರು), ಎಸ್‌.ಎಂ. ಬನೋಶಿ, ಎಸ್‌.ಎಂ.
ಚಿಲ್ಲಾಳಶೆಟ್ಟರ (ವಕೀಲರು), ಶಿವಬಸಪ್ಪ ಸಜ್ಜನ, ಚಂದ್ರಶೇಖರ ಅಂಬಿಗೇರ, ರಾಜು ಬಳ್ಳೊಳ್ಳಿ, ಮಹಾಂತೇಶ ಸಜ್ಜನರ, ಪುಂಡಲೀಕ ಮುರಾಳ, ಗುಲಾಂ ಧಪೇದಾರ, ಮಂಜುನಾಥ ಕುಂದರಗಿ, ಹನುಮಂತ ನಲವಡೆ, ರಾಜು ಹೊಳಿ, ಪುನೀತ ಹಿಪ್ಪರಗಿ, ಬಿ.ಎಚ್‌. ಚಲವಾದಿ, ಪರಶುರಾಮ ಕೊನ್ನೂರ, ಮಲ್ಲಪ್ಪ ಹೊಸಮನಿ, ಮಹಾಂತೇಶ ಬೂದಿಹಾಳಮಠ, ವೀರೇಶ ಗುರುಮಠ ಮುಂತಾದವರು ಭಾಗವಹಿಸಿದ್ದರು.

ಟಾಪ್ ನ್ಯೂಸ್

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Leopard spotted in Vijayapura city: CCTV footage captured

Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

arrested

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.