ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ
Team Udayavani, May 24, 2020, 12:10 PM IST
ಮುದ್ದೇಬಿಹಾಳ: ರಾಜ್ಯದಲ್ಲಿ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯ ಕಾರ್ಮಿಕರ ಪರಿಸ್ಥಿತಿ ಅತಂತ್ರವಾಗಿದ್ದು, ಸರ್ಕಾರ ಅಂಥವರ ನೆರವಿಗೆ ಧಾವಿಸಬೇಕು ಎಂದು ಬಹುಹಳ್ಳಿ ಕುಡಿಯುವ ನೀರು ಸರಬರಾಜು ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಆಗ್ರಹಿಸಿದ್ದಾರೆ.
ನಾಗರಬೆಟ್ಟದಲ್ಲಿರುವ ಅಡವಿಸೋಮನಾಳ ಮತ್ತು 30 ಹಳ್ಳಿಗಳ ಬಹುಹಳ್ಳಿ ಯೋಜನಾ ಘಟಕದಲ್ಲಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್
ಲಾಕಡೌನ್ ನಂತರ ಕಠಿಣ ಪರಿಸ್ಥಿತಿಯಲ್ಲೂ ಬಹುಹಳ್ಳಿ ಯೋಜನೆ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಪ್ರತಿ ಹಳ್ಳಿಗೂ ಶುದ್ಧ ನೀರು ತಲುಪಿಸುವ ಕೆಲಸ ಮಾಡಿದ್ದಾರೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ ಸೌಲಭ್ಯವನ್ನು ಎಲ್ಲ ಬಹುಹಳ್ಳಿ ಯೋಜನೆಯ ಕಾರ್ಮಿಕರಿಗೂ ವಿಸ್ತರಿಸಬೇಕು. ಕನಿಷ್ಠವೇತನ, ಮೂಲಭೂತ ಸೌಲಭ್ಯ, ಇಪಿಎಸ್, ಇಎಸ್‌ಐ ಕಾರ್ಡ್, ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು. ಕಾರ್ಮಿಕರಾದ ಪರಸಪ್ಪ ವಳಕಲದಿನ್ನಿ, ಯಲ್ಲಪ್ಪ ಚಲವಾದಿ, ಪರಮಪ್ಪ ರಕ್ಕಸಗಿ, ಬಸವರಾಜ ವಳಕಲದಿನ್ನಿ, ಸಿದ್ದಪ್ಪ ವಾಲಿಕಾರ, ಹಣಮಂತ ಚಲವಾದಿ, ಮಹಾಂತೇಶ ಹಿರೇಮಠ, ನಾಗಪ್ಪ ಮುರಾಳ, ಅಮ್ಮಪ್ಪ ಚಲವಾದಿ, ಪರಸಪ್ಪ ಮುರಾಳ, ಪರಮಣ್ಣ ವಳಕಲದಿನ್ನಿ, ಭೀಮಪ್ಪ ವಳಕಲದಿನ್ನಿ, ಶರಣಪ್ಪ ವಳಕಲದಿನ್ನಿ, ಶರಣಪ್ಪ ಕೊಂಡಗೂಳಿ, ನಿಸ್ಸಾರುದ್ದೀನ ಪಾಶಾ, ರಾಜಶೇಖರ ದೊಡಮನಿ ಇದ್ದರು. ಈ ವೇಳೆ ಗುತ್ತಿಗೆಪದ್ಧತಿ ರದ್ದುಗೊಳಿಸುವ ಬರಹದ ಬೋರ್ಡ್ ಹಿಡಿದು ಸಾಂಕೇತಿಕ ಧರಣಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.