2 ವರ್ಷದ ಪುನೀತ್‌ಗೆ ಮದ್ರಾಸ್‌ನಲ್ಲಿ ಲಿಂಗದೀಕ್ಷೆ!
Team Udayavani, Oct 30, 2021, 5:52 AM IST
ಸಿಂದಗಿ: ಪವರ್‌ಸ್ಟಾರ್ ಪುನೀತ್ ರಾಜಕುಮಾರ ಕುಟುಂ ಬಕ್ಕೂ ವಿಜಯಪುರ ಜಿಲ್ಲೆಯ ಸಿಂದಗಿಗೂ ಎಲ್ಲಿಲ್ಲದ ನಂಟು.
ಗದುಗಿನ ಲಿಂ|ಪುಟ್ಟರಾಜ ಗವಾಯಿಗಳು ಸಂಗೀತ ಸಮಾ ರಂಭಕ್ಕಾಗಿ 1977ರಲ್ಲಿ ಮದ್ರಾಸ್‌ಗೆ ತೆರಳಿದ್ದ ಸಂದರ್ಭ ಅವರ ಜತೆ ಸಿಂದಗಿ ಪಟ್ಟಣದ ಊರನ ಹಿರಿಯ ಮಠದ (ಹಾವೇ ರಿಯ ಸಿಂದಗಿ ಮಠ) ಪೀಠಾಧಿಪತಿಗಳಾಗಿದ್ದ ಲಿಂ|ಶಾಂತವೀರ ಪಟ್ಟಾಧ್ಯಕ್ಷರು ಇದ್ದರು. ಪುಟ್ಟರಾಜ ಗವಾಯಿಗಳ ಶಿಷ್ಯರಾದ ವೀರೇಶ ಮದರಿ ಎನ್ನುವವರು ಕನ್ನಡ ಚಿತ್ರರಂಗದ ಗೀತೆಗಳಿಗಾಗಿ ವಯಲಿನ್ ನುಡಿಸುತ್ತಿದ್ದರು.
ಅವರು ಮೇರುನಟ ಡಾ|ರಾಜಕುಮಾರ ಅವರಿಗೆ ನಿಮ್ಮ ಮನೆಗೆ ಪುಟ್ಟರಾಜ ಗವಾಯಿಗಳನ್ನು ಊಟಕ್ಕೆ ಕರೆದುಕೊಂಡು ಬರುತ್ತಿರುವೆ ಎಂದು ವಿನಂತಿಸಿಕೊಂಡಿದ್ದರು. ಆಗ ಡಾ|ರಾಜ್ ಅವರು ನಿಸ್ಸಂಕೋಚವಾಗಿ ಕರೆದುಕೊಂಡು ಬನ್ನಿ ಎಂದಿದ್ದರು.
ಇದನ್ನೂ ಓದಿ:ಚುನಾವಣಾ ಆಯೋಗದ “ಐಕಾನ್’ ಆಗಿದ್ದ ಪುನೀತ್
ಆದರೆ, ಪುಟ್ಟರಾಜ ಗವಾಯಿಗಳು ಲಿಂಗದೀಕ್ಷೆ ತೆಗೆದುಕೊಳ್ಳ ದವರ ಮನೆಯಲ್ಲಿ ಉಪಾಹಾರ-ಊಟ ಸೇವನೆ ಇಲ್ಲ ಎಂಬ ಪದ್ಧತಿ ಅನುಸರಿಸುತ್ತಿದ್ದರು. ಈ ಸಂಗತಿ ಗೊತ್ತಾದ ಬಳಿಕ ಅವರ ಜೊತೆಯಲ್ಲಿಯೇ ಇದ್ದ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ಡಾ|ರಾಜಕುಮಾರ ಕುಟುಂಬಕ್ಕೆ ಲಿಂಗದೀಕ್ಷೆ ನೀಡಿದ್ದರು. ಬಳಿಕ ಡಾ|ರಾಜ್‌ಕುಮಾರ ಮನೆಯಲ್ಲಿ ಪುಟ್ಟರಾಜ ಗವಾಯಿಗಳು, ಶಾಂತವೀರ ಪಟ್ಟಾಧ್ಯಕ್ಷರು ಅವರ ಶಿಷ್ಯ ಬಳಗ ಊಟ ಸೇವಿಸಿ ದ್ದರು. ಆಗ ಪುನೀತ್ ಎರಡು ವರ್ಷದವರಾಗಿದ್ದರು ಎನ್ನುವು ದನ್ನು ಸ್ಥಳೀಯ ಊರನ ಮಠದ ಪೀಠಾಧಿ ಪತಿಗಳಾದ ಶಿವಾ ನಂದ ಶಿವಾಚಾರ್ಯರು ತಿಳಿಸಿದ್ದಾರೆ. ಇದಾದ ಬಳಿಕ ಗಜಲ್ ಗಾಯಕ ದಿ| ರವೀಂದ್ರ ಹಂದಿಗನೂರ ಅವರು ಶಾಂತವೀರ ಪಟ್ಟಾಧ್ಯಕ್ಷರು ಅವರ ಹೆಸರಿನ ಮೇಲೆ ಹಾಡುಗಳನ್ನು ಹಾಡು ವಂತೆ ಡಾ| ರಾಜಕುಮಾರಗೆ ತಿಳಿಸಿದಾಗ ಅವರು ಎರಡು ಗೀತೆಗಳನ್ನು ಹಾಡಿದ್ದರು. ಹೀಗಾಗಿ ಪುನೀತ್ ರಾಜಕುಮಾರ ಕುಟುಂಬಕ್ಕೂ ಸಿಂದಗಿಗೂ ಎಲ್ಲಿಲ್ಲದ ನಂಟು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Muddebihal: ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಪ್ರತಿಭಟನೆ
Waqf ಜೆಪಿಸಿ ಅಧ್ಯಕ್ಷ ಭೇಟಿ ಹಿನ್ನೆಲೆ: ವಿಜಯಪುರಕ್ಕೆ ಬಂದ ಜೊಲ್ಲೆ ದಂಪತಿ, ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.