ರಾಟೆ: ಬಾಗಲಕೋಟೆಗೆ ನಾಲ್ಕು ಚಿನ್ನ
Team Udayavani, Jun 4, 2018, 10:48 AM IST
ಬಾಗಲಕೋಟೆ: ನವದೆಹಲಿಯ ಟಲಕಾಟೋರ ಇಂಡೋರ್ ಸ್ಟೆಡಿಯಂನಲ್ಲಿ ನಡೆದ ಆಲ್ ಇಂಡಿಂಯ ಸೆಶಿಂಕೈ ಶಿಟೋರು ಕರಾಟೆ ಡು ಫೆಡ್‌ರೇಷನ್ ಆಯೋಜಿಸಿದ್ದ 17ನೇ ಆಲ್ ಇಂಡಿಂಯ ಇಂಟರ್ ಸ್ಕೂಲ್ ಹಾಗೂ ಸೀನಿಯರ್
ನ್ಯಾಶನಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ರಾಜ್ಯದ ಸೌತ್ ಇಂಡಿಯನ್ ಕರಾಟೆ ಫೆಡ್‌ರೇಷನ್ ಸಂಸ್ಥೆಯ 9 ಕರಾಟೆ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಆಡಲಿಕ್ಕೆ ಅವಕಾಶ ಪಡೆದಿದ್ದಾರೆ.
ಸಾಕಷ್ಟು ಕಸರತ್ತುಗಳೊಂದಿಗೆ ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದ ಮೂರು ಸಾವಿರಕ್ಕೂ ಅಧಿಕ ಕರಾಟೆ ಕ್ರೀಡಾ ವಿದ್ಯಾರ್ಥಿಗಳ ಜೊತೆಗೆ ಸೆಣಸಾಡಿ ಅದ್ಭುತ ಆಟದ ವೈಖರಿಯಿಂದ ಪಶ್ಚಿಮ ಬಂಗಾಳ, ಹರಿಯಾಣ, ಗುಜರಾತ್,
ಆಂಧ್ರಪ್ರದೇಶ, ತಮಿಳುನಾಡು, ಆಸ್ಸಾಂ, ಸಿಕ್ಕಿಂ, ಓರಿಸ್ಸಾ, ಬಿಹಾರ, ಕೇರಳ, ಮಹಾರಾಷ್ಟ್ರ, ರಾಜಸ್ತಾನ, ಪಂಜಾಬ್, ಜಾರ್ಖಂಡ, ತೆಲಂಗಾಣ, ಮಧ್ಯಪ್ರದೇಶ, ಉತ್ತರಾಖಂಡ್, ದೆಹಲಿ ಹಾಗೂ ವಿವಿಧ ರಾಜ್ಯಗಳ ಕರಾಟೆ ಆಟಗಾರರ
ಜೊತೆ ಕಠಿಣ ಆಟದ ಸೋಲು ಗೆಲುವಿನ ಮೆಲುಗೈದೊಂದಿಗೆ 4 ಚಿನ್ನ, 3 ಬೆಳ್ಳಿ ಮತ್ತು 4 ಕಂಚು ಪದಕಗಳನ್ನು ಪಡೆಯುವಲ್ಲಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಆಟಗಾರರು ಪಡೆದರು.
ಪದಕ ಪಡೆದ ವಿದ್ಯಾರ್ಥಿಗಳು: ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಶಾಂತೇಶ ಚವ್ಹಾಣ (ಚಿನ್ನ ) ಪ್ರಜ್ವಲ್ ರಾಠೊಡ (ಚಿನ್ನ ಮತ್ತು ಬೆಳ್ಳಿ) ಸಾಗರ ಚವ್ಹಾಣ (ಚಿನ್ನ ಮತ್ತು ಕಂಚು) ಹಾಗೂ ಕಲರ್ ಬೆಲ್ಟ್ ವಿಭಾಗದಲ್ಲಿ ಸಂಜಯ ಕೋಡಿಹಾಳ (ಚಿನ್ನ), ವಾದಿರಾಜ ಕುಲಕರ್ಣಿ (ಬೆಳ್ಳಿ) ಶ್ರೇಯಸ್ ದೊಡಮನಿ (ಬೆಳ್ಳಿ) ಸುನೀಲ ರಾಠೊಡ (ಕಂಚು) ಕಾರ್ತಿಕ ಹೆಬ್ಬಳ್ಳಿ (ಕಂಚು) ಪ್ರಥಮ ಪವಾರ (ಕಂಚು) ಅವರು ವಿವಿಧ ಪದಕ ಪಡೆದಿದ್ದಾರೆ ಎಂದು ಸೌತ್ ಇಂಡಿಯನ್ ಕರಾಟೆ ಫೆಡ್‌ರೇಷನ್ ಅಧ್ಯಕ್ಷ ಎಸ್.ಆರ್.ರಾಠೊಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.