ಗುಮ್ಮಟ ನಗರಿಯಲ್ಲಿಮಳೆ ಸಿಂಚನ
Team Udayavani, Jul 13, 2018, 12:45 PM IST
ವಿಜಯಪುರ: ಬಿರು ಬಿಸಿಲಿಗೆ ಹೆಸರಾದ ಗುಮ್ಮಟನಗರಿ ಜನರಿಗೆ ಇದೀಗ ತುಂತುರು ಮಳೆ ಹಾಗೂ ಛಳಿಯ ಹಿತಾನುಭವ ಆಗುತ್ತಿದೆ. ಮೂಲೆ ಸೇರಿದ್ದ ಕೊಡೆಗಳು ಧೂಳು ಕೊಡವಿಕೊಂಡು ತುಂತುರು ಮಳೆಯ ಸಿಂಚನ ಮಾಡಿಸಿಕೊಳ್ಳುವ ಮೂಲಕ ಕೊಡೆಯ ಕೈ ಹಿಡಿದವರನ್ನು ಮಳೆ ಹನಿಗಳಿಂದ ರಕ್ಷಿಸುತ್ತಿವೆ.
ಗುರುವಾರ ನಗರದಲ್ಲಿ ಪ್ರಮುಖ ವಾಣಿಜ್ಯ ಕೇಂದ್ರ ಲಾಲ ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ ಪ್ರದೇಶ, ಮಹಾತ್ಮಾ ಗಾಂಧೀಜಿ ವೃತ್ತ, ಸಿದ್ದೇಶ್ವರ ರಸ್ತೆ, ಬಸ್ ನಿಲ್ದಾಣ, ಎಪಿಎಂಸಿ ಪ್ರದೇಶದ ರಸ್ತೆಗಳು ಹೀಗೆ ಹಲವು ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆಯಿಂದ ತುಂತುರು ಮಳೆ ಸುರಿಯತ್ತಲೇ ಇದ್ದು, ನೀಲಿ ಮೋಡ ಬಿಳಿ ಮಿಶ್ರಿತ ನೀಲಿ ವರ್ಣದ ಹೊದಿಕೆ ಹಾಕಿಕೊಂಡಿರುವ ಕಾರಣ ಇಡೀ ದಿನ ಸೂರ್ಯ ರಜೆ ಘೋಷಿಸಿದ್ದ.
ಶಾಲೆಗೆ ಹೊರಟ ಮಕ್ಕಳು ತುಂತುರು ಮಳೆ ರಕ್ಷಣೆಗೆ ಕಿರುಗೊಡೆಗಳನ್ನು ಹಿಡಿದು ಹಾಗೂ ತಂಪನೆಯ ಹಿತವಾತಾವರಣದ ಅನುಭವ ಪಡೆಯುತ್ತಿದ್ದರು. ಪರಿಣಾಮ ಛಳಿಯ ಹಿತ ಅನುಭವಸುತ್ತಲೇ ಮೈಕಾವು ಇರಿಸುವ ವಿವಿಧ ಬಗೆಯ ರೇನ್ ಕೋಟು, ಟೋಪಿ, ಹಾಕಿಕೊಂಡು ರಸ್ತೆಗಳಲ್ಲಿ ಹರಿಯುತ್ತಿದ್ದ ನೀರಿನ ಕಿರು ಝರಿಗಳಲ್ಲಿ ಕಾಲುಗಳನ್ನು ಕಿಲಕಿಲ ಮಾಡಿ ಮೋಜು ಅನುಭವಿಸುತ್ತ ಸಾಗುತ್ತಿದ್ದರು.
ನಿತ್ಯದ ಕೆಲಸಕ್ಕೆ ಹೊರಡುವ ಹಿರಿಯರು ಕೂಡ ಕೊಡೆ, ರೇನ್ ಕೋಟು ಧರಿಸಿಕೊಂಡು ಮನೆಯಿಂದ ಹೊರಗೆ ಅಡಿ ಇಟ್ಟರೆ, ಹಾನಗಳ ಮೇಲೆ ಸಾಗುವಾಗ ಮಳೆ ಹನಿಗಳಿಂದ ರಕ್ಷಣೆಗಾಗಿ ತಲೆ ಮೇಲೆ ನೀರು ನಿರೋಧಕ ಟೋಪಿ ಹಾಕಿಕೊಂಡು ಓಡಾಡುತ್ತಿದ್ದರೆ, ಹಲವರು ಮೈಗೆ ಮಳೆಯ ಹನಿ ನೀರಿನ ಸಿಂಚನವನ್ನು ತಾಗಿಸಿಕೊಂಡೇ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದವು.
ತುಂತುರು ಮಳೆಯಲ್ಲೂ ರಸ್ತೆ ಸಂಚಾರ ನಿಯಂತ್ರಿಸುವ ಕರ್ತವ್ಯ ನಿಭಾಯಿಸುತ್ತಿದ್ದ ಪೊಲೀಸರು, ಮಕ್ಕಳನ್ನು ಶಾಲೆಗೆ ಕಳಿಸಿ-ಕರೆ ತರವಲು ಹೊರಟ ತಾಯಂದಿರು, ಕಾಲೇಜಿಗೆ ಹೊರಟ ಯುವ ಸಮೂಹ, ಮಾರುಕಟ್ಟೆಗೆ ಬಂದಿದ್ದ ಗ್ರಾಹಕರು, ಕೆಲಸಕ್ಕೆ ಹೊರಟವರು ಬಿಚ್ಚಿದ ಕೊಡೆ ಕೈಯಲ್ಲಿ ಹಿಡಿದೇ ಸಾಗುತ್ತಿದ್ದ ಹಲವು ಬಗೆಯ ವಿಭಿನ್ನ ನೋಟಗಳು ಕಂಡು ಬಂದವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.