ಈ ಬಾರಿಯೂ ನೆಮ್ಮದಿ ಕಸಿದ ಮುಂಗಾರು
Team Udayavani, Sep 2, 2017, 2:07 PM IST
ವಿಜಯಪುರ: ಸತತ ಮೂರು ವರ್ಷಗಳ ಭೀಕರ ಬರದಿಂದ ತತ್ತರಿಸಿರುವ ಜಿಲ್ಲೆಯ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲೂ ಮಳೆಯ ವಿಳಂಬದ ಕಾರಣ ಕೊಂಚ ಬೆಳೆ ಹಾನಿ ಅನುಭವಿಸಿದೆ. ಜುಲೈ ತಿಂಗಳ ಮಳೆಯ ಕೊರತೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ.
ಪ್ರಸಕ್ತ ಮುಂಗಾರು ಹಂಗಾಮಿನ ಜೂನ್ ತಿಂಗಳಲ್ಲಿ 89.2 ಮಿ.ಮೀ. ಸುರಿಯಬೇಕಿದ್ದ ಮಳೆ 120.9 ಮಿ.ಮೀ. ಸುರಿದ ಕಾರಣ ಜಿಲ್ಲೆಯಲ್ಲಿ 4.39 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿ ತಲುಪಲಾಗಿತ್ತು. ಆದರೆ ಜುಲೈನಲ್ಲಿ 86.6 ಮಿ.ಮೀ. ಸುರಿಯಬೇಕಿದ್ದ ಮಳೆಯಲ್ಲಿ ಕೇವಲ 18 ಮಿ.ಮೀ. ಮಾತ್ರ ಸುರಿದ ಕಾರಣ 68 ಮಿ.ಮೀ. ಮಳೆಯ ಕೊರತೆ ಆಗಿತ್ತು.
ಇದರಿಂದ ಮುಂಗಾರು ಬಿತ್ತನೆಯಲ್ಲಿ 24 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಹಾಗೂ ಉದ್ದು ಬೆಳೆ ಹಾನಿಯಾಗಿದೆ. ಇತ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಆಗದ ಕಾರಣ 174 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಲಿಂಬೆ ಬೆಳೆ ಸಂಪೂರ್ಣ ಒಣಗಿ ಹಾಳಾಗಿದೆ.
ಹೆಸರು-ಉದ್ದು ಬೆಳೆಯನ್ನು ಹೊರತುಪಡಿಸಿದರೆ ಆಗಸ್ಟ್‌ನಲ್ಲಿ 85 ಮಿ.ಮೀ. ಮಳೆ ಸುರಿಯಬೇಕಿದ್ದರೂ 109.8 ಮಳೆ ಆಗಿರುವ ಕಾರಣ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಇತರೆ ಬೆಳೆ ಉತ್ತಮವಾಗಿವೆ. 45 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆ ಆಗಿದ್ದರೆ, 2.68 ಲಕ್ಷ ಹೆಕ್ಟೇರ್ ನಲ್ಲಿ ತೊಗರಿ, 27 ಸಾವಿರ ಹೆಕ್ಟೇರ್ ಸಜ್ಜೆ, 11 ಸಾವಿರ ಹೆಕ್ಟೇರ್ ಹತ್ತಿ, 23 ಸಾವಿರ ಹೆಕ್ಟೇರ್ ಸೇಂಗಾ, 19 ಸಾವಿರ ಹೆಕ್ಟೇರ್ ಸೂರ್ಯಕಾಂತಿ, 10 ಸಾವಿರ
ಹೆಕ್ಟೇರ್‌ನಲ್ಲಿ ನಾಟಿ ಕಬ್ಬು ನಳನಳಿಸುತ್ತಿದೆ. ಇನ್ನು ಆಗಸ್ಟ್‌ನಲ್ಲಿ ವಾಡಿಕೆಗಿಂದ ಹೆಚ್ಚಾಗಿ ಉತ್ತಮ ಮಳೆ ಆಗಿರುವ ಕಾರಣ 60 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಬೇಡಿಕೆಯಲ್ಲಿ 57,500 ಮೆ.ಟ. ರಸಗೊಬ್ಬರ ದಾಸ್ತಾನಿದೆ. ಹಿಂಗಾರು ಬಿತ್ತನೆ ಸೆಪ್ಟೆಂಬರ್ ಮಧ್ಯಾವ ಧಿಯಿಂದ ಆರಂಭಗೊಳ್ಳುವ ಕಾರಣ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನಿಗೆ ಕೃಷಿ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಾರಿ ಹಿಂಗಾರು ಹಂಗಾಮಿನಲ್ಲಿ 5.20 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ.
ಮುಂಗಾರು ಹಂಗಾಮಿನಲ್ಲಿ ಜುಲೈ ತಿಂಗಳ ಮಳೆಯ ಕೊರತೆಯ ಮಧ್ಯೆಯೂ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆ ಬೆಳೆಗಳಿಗೆ ಸಹಕಾರಿ ಆಗಿದೆ. ಹೆಸರು, ಉದ್ದು ಕೊಂಚ ಮಟ್ಟಿಗೆ ಹಾನಿ ಆಗಿರುವುದನ್ನು ಹೊರತುಪಡಿಸಿದರೆ ಇತರೆ ಎಲ್ಲ ಬೆಳೆ ಉತ್ತಮವಾಗಿವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಚೇರಿ ಸ್ಪಷ್ಟಪಡಿಸಿದೆ. ತೋಟಗಾರಿಕೆಯಲ್ಲಿ ಜುಲೈ ತಿಂಗಳಲ್ಲಿ ಉತ್ತಮ ಮಳೆ ಸುರಿಯದ ಕಾರಣ ವಾಡಿಕೆಯಂತೆ ಮುಂಗಾರಿ ಹಂಗಾಮಿನ ತರಕಾರಿ ಬಿತ್ತನೆಯೂ
ವಿಳಂಬವಾಗಿದೆ. ಈರುಳ್ಳಿ, ಟೊಮ್ಯಾಟೋ, ಬದನೆ, ಹಸಿರು ಮೆಣಸಿನಕಾಯಿ ಸೇರಿ ಕೇವಲ 7 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ತರಕಾರಿ ಬಿತ್ತನೆ ಆಗಿದೆ. ಬೇಸಿಗೆಯಲ್ಲಿನ ನೀರಿನ ಕೊರತೆಯ ಕಾರಣ ಪ್ರಸಕ್ತ ವರ್ಷ 30 ಲಕ್ಷ ರೂ. ಮೌಲ್ಯದ ಲಿಂಬೆ ಬೆಳೆ ಹಾನಿಯಾಗಿದೆ. ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ
ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.