ಮತ್ತೆ ದಲಿತ ಸಿಎಂ ವಿಷಯ ಪ್ರಸ್ತಾಪಿಸಿದ ಸಂಸದ ರಮೇಶ ಜಿಗಜಿಣಗಿ
Team Udayavani, Mar 27, 2021, 3:23 PM IST
ವಿಜಯಪುರ: ರಾಜ್ಯದಲ್ಲಿ ಶೇ. 2-3 ರಷ್ಟು ಜನಸಂಖ್ಯೆ ಇರುವವರು ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಶೇ.23 ರಷ್ಟು ಜನಸಂಖ್ಯೆ ಇರುವ ದಲಿತರು ಈವರೆಗೂ ಮುಖ್ಯಮಂತ್ರಿ ಆಗಿಲ್ಲ. ಹೀಗಾಗಿ ರಾಜ್ಯದಲ್ಲಿ ಇನ್ನಾದರೂ ದಲಿತರು ಮುಖ್ಯಮಂತ್ರಿ ಆಗಲೇಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಮತ್ತೊಮ್ಮೆ ದಲಿತ ಮುಖ್ಯಮಂತ್ರಿ ವಿಷಯ ಪ್ರಸ್ತಾಪಿಸಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಆಗ್ರಹ ಮಾಡಿದ ಅವರು, ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಆಗ್ರಹಿಸಿದ ಮಾತ್ರಕ್ಕೆ ನಾನೇ ಸಿ.ಎಂ. ಆಗಬೇಕೆಂಬ ದುರಾಸೆ ಇಲ್ಲ. ಪಕ್ಷ ರಾಜ್ಯ ರಾಜಕಾರಣಕ್ಕೆ ಮರಳಲು ಸೂಚಿಸಿದರೆ ಸಮರ್ಥವಾಗಿ ನಿಭಾಯಿಸಬಲ್ಲೆ ಎಂದರು. ಆ ಮೂಲಕ ಪರೋಕ್ಷವಾಗಿ ದಲಿತ ಮುಖ್ಯಮಂತ್ರಿ ವಿಷಯ ಪ್ರಸ್ತಾಪವಾದರೆ ನಾನೂ ಮುಂಚೂಣಿ ಆಕಾಂಕ್ಷಿ ಎಂಬುದನ್ನೂ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ವಿದ್ಯುತ್ ಸಮಸ್ಯೆ: ಮುಖ್ಯಮಂತ್ರಿ ನಿರ್ಲಕ್ಷ್ಯ ಎದ್ದುಕಾಣುತ್ತಿದೆ ಎಂದ ಬಿಜೆಪಿ ಸಂಸದ
ಸದ್ಯ ನಾನು ಕೇಂದ್ರ ರಾಜಕಾರಣದಲ್ಲಿದ್ದೇನೆ. ಪಕ್ಷ ಬಯಸಿದರೆ ರಾಜ್ಯ ರಾಜಕಾರಣಕ್ಕೆ ಮರಳಲು ಸಿದ್ಧ. ಇಷ್ಟಕ್ಕೂ ರಾಜ್ಯ ರಾಜಕಾರಣ ನನಗೇನೂ ಹೊಸತಲ್ಲ. ಇಲ್ಲಿಯೂ ಮಂತ್ರಿಯಾಗಿದ್ದ ನಾನು ಇಲ್ಲಿಂದಲೇ ನಾನು ಅಲ್ಲಿಗೆ ಹೋಗಿ ಕೇಂದ್ರದಲ್ಲಿ ಮಂತ್ರಿ ಆಗಿದ್ದವನು. ಅಂದರೆ ಇಲ್ಲಿಂದಲೇ ಅಲ್ಲಿಗೆ ಹೋದದ್ದು. ಹೀಗಾಗಿ ರಾಜ್ಯ ರಾಜಕಾರಣಕ್ಕೆ ಮರಳಿದರೂ ಸಮರ್ಥವಾಗಿ ನಿಭಾಯಿಸಬಲ್ಲೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.