ನ್ಯಾಯಬೆಲೆ ಅಂಗಡಿಕಾರರ ಪ್ರತಿಭಟನೆ
Team Udayavani, Oct 13, 2020, 5:27 PM IST
ವಿಜಯಪುರ: ನ್ಯಾಯಬೆಲೆ ಅಂಗಡಿ ಲೈಸೆನ್ಸ್ ಹೊಂದಿದವರನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸುವಂತೆ ಆಗ್ರಹಿಸಿ ಜಿಲ್ಲೆಯ ನ್ಯಾಯಬೆಲೆ ಅಂಗಡಿಕಾರರ ಸಂಘ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷಜ್ಯೋತಿರಾಮ ಪವಾರ, ನ್ಯಾಯಬೆಲೆ ಅಂಗಡಿಕಾರರು ಕೂಡ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಕಾರರಿಗೆ ಸರ್ಕಾರದಿಂದ ಕಳೆದ 4 ತಿಂಗಳಿಂದ ಕಮಿಷನ್ ಹಣ ಬಂದಿಲ್ಲ. ಕಮಿಷನ್ ನಂಬಿಯೇ ಜೀವನ ನಡೆಸುವ ನ್ಯಾಯಬೆಲೆ ಅಂಗಡಿಕಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅಂಗಡಿ ಬಾಡಿಗೆ ಭರಿಸುವುದ, ವಿದ್ಯುತ್ ಬಿಲ್ ಪಾವತಿ, ಸಹಾಯಕರ ವೇತನ ಪಾವತಿಯಂಥ ಸಮಸ್ಯೆ ನೀಗುವಲ್ಲಿ ಸಹಕಾರಿ ಆಗಲಿದೆ. 32 ಜನ ನ್ಯಾಯಬೆಲೆ ಅಂಗಡಿಕಾರರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಸೂಕ್ತ ಪರಿಹಾರ ಧನ ನೀಡಿ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಸರ್ಕಾರ ಪೌರ ಕಾರ್ಮಿಕರು, ಆರೋಗ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ಸೇರಿದಂತೆ ಇತರರನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿದಂತೆ ನ್ಯಾಯ ಬೆಲೆ ಅಂಗಡಿಗಳನ್ನು ನಡೆಸುವ ಮಾಲೀಕರನ್ನು ಕೋವಿಡ್ ವಾರಿಯರ್ ಎಂದು ಪರಿಗಣಿಸುವಂತೆ ಆಗ್ರಹಿಸಿದರು. ಕೆ.ಎನ್. ಮೂಲಿಮನಿ. ಬಿ.ಜಿ. ತಿಕೋಟಿ. ಸತೀಶ ಬಿಜ್ಜರಗಿ, ಐ.ಎಂ. ಆಸಂಗಿ, ಬಿ.ವಿ. ಸಾಖರೆ, ಮಹೇಶ, ಪಿ.ಎಸ್. ಪಾಟೀಲ, ಎಸ್.ಎಸ್. ಕೊಪ್ಪದ ಪಾಲ್ಗೊಂಡಿದ್ದರು.
ಜನತಾ ಕಾಲೋನಿಗೆ ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯ :
ವಿಜಯಪುರ: ರಾಷ್ಟ್ರೀಯ ಹೆದ್ದಾರಿ 218ರ ಪಕ್ಕಕ್ಕೆ ಹೊಂದಿಕೊಂಡಿರುವ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಜನತಾ ಕಾಲೋನಿಗೆ ರಸ್ತೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರವೇ ಹೊನಗನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಶರಣಗೌಡ ಬಿರಾದಾರ ಮಾತನಾಡಿ, ಜನತಾ ಕಾಲೋನಿಗೆ ಆರು ರಸ್ತೆಗಳು ಸಾರ್ವಜನಿಕರಿಗೆ ಓಡಾಡಲು ಬಹಳ ಅನುಕೂಲಕರವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಇಲಾಖೆ ರಸ್ತೆ ನೆಪದಲ್ಲಿ ರಸ್ತೆಗಳನ್ನು ಬಂದ್ ಮಾಡಿ ಚರಂಡಿ ನಿರ್ಮಿಸುತ್ತಿದೆ. ಹೀಗಾದರೆ ಜನಸಂಚಾರಕ್ಕೆ ರಸ್ತೆಯೇ ಇಲ್ಲದಂತಾಗಿ ಅನೇಕ ಬಡಾವಣೆ ನಿವಾಸಿಗಳಿಗೆ ತೀವ್ರ ತರ ಸಮಸ್ಯೆ ಎದುರಾಗುತ್ತದೆ ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ಸಂಗೀತಾ ಹೂಗಾರ ಮಾತನಾಡಿ, ಶಾಲಾ ಮಕ್ಕಳಿಗೆ ಈ ಹಿಂದೆ ಸಂಪರ್ಕ ರಸ್ತೆಯಿಂದಾಗಿ ರೈತರು ತಮ್ಮ ಹೊಲಗದ್ದೆಗಳಿಗೆ ಹೋಗಲು ಅನುಕೂಲವಾಗಿತ್ತು. ಈಗ ದಾರಿ ಮೇಲೆ ಮಣ್ಣು ಕಲ್ಲು ಎಸೆದು ಗಲೀಜು ಮಾಡಿ ಕಲ್ಮಷ ವಾತಾವರಣ ನಿರ್ಮಾಣ ಮಾಡಿ ಸಾಂಕ್ರಾಮಿಕ ರೋಗ ಹರಡಲು ಅನುವು ಮಾಡಿಕೊಟ್ಟಂತಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಸ್ಥಾನಿಕ ಚೌಕಾಶಿ ಮಾಡಿಸಿ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕೆಂದು ಕೋರಿದರು.
ಮುತ್ತು ಕಿರಸೂರ, ರಮೇಶ ಜಮಖಂಡಿ, ಬಸವರಾಜ ಜಮಖಂಡಿ, ಮಹಾದೇವ ಹಾಲಪ್ಪಗೋಳ, ಯಲಗೂರ ಹಾಲಪ್ಪಗೋಳ, ಸುರೇಶ ಕೊಂಚೂರ, ಗಂಗಪ್ಪ ಜಿಗರಿ, ಬಿ.ಬಿ. ನಾವಿ, ನಿಂಗಪ್ಪ ಹೂಗಾರ, ಎಸ್.ಎಸ್. ಕವಟಗಿ, ಎಸ್.ಆರ್. ಹಿರೇಮಠ, ಮೀನಾಕ್ಷಿ ನಾಗರಳ್ಳಿ, ಮಂಜುಳಾ ಹಿರೇಮಠ, ಚಂದ್ರವ್ವ ಹಾಲಪ್ಪಗೋಳ,ಪಾರವ್ವ ಕುರಿ, ಹನುಮಂತ ಶೇಲಿಕೇರಿ ಡಾಕಪ್ಪ, ಶರಣಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.