ಉಳವಿ ಕೆರೆ ತುಂಬಿಸಲು ಯೋಜನೆ ಸಿದ್ಧ
Team Udayavani, Jul 10, 2017, 3:30 PM IST
ವಿಜಯಪುರ: ಮಹಾಜ್ಞಾನಿ ಚನ್ನಬಸವಣ್ಣ, ಹರಳಯ್ಯ ಶರಣರ ನೆನಪಿಗಾಗಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ
ಉಳವಿ ಹಾಗೂ ಸುತ್ತಲಿನ ಕೆರೆ ತುಂಬಿಸಲು ರಾಜ್ಯ ಸರ್ಕಾರ ಯೋಜನೆ ಸಿದ್ಧಪಡಿಸಿದೆ ಎಂದು ಜಲ ಸಂಪನ್ಮೂಲ ಸಚಿವ
ಡಾ| ಎಂ.ಬಿ. ಪಾಟೀಲ ಹೇಳಿದರು.
ರವಿವಾರ ವಿಜಯಪುರ ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ನಿರ್ಮಿಸಿರುವ ಶಿವಶರಣ
ಹರಳಯ್ಯ ಸಮುದಾಯ ಭವನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ವಚನಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚನ್ನಬಸವಣ್ಣ ಅವರ ಪವಿತ್ರ ಕ್ಷೇತ್ರ ಎಂಬ ಕಾರಣಕ್ಕೆ ಉಳವಿ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಅಧಿ ಕ ಮಳೆ ಸುರಿಯುವ ಮಲೆನಾಡಿನಲ್ಲೂ ಮಳೆ ಇಲ್ಲದೇ ಬಹುತೇಕ ಕೆರೆಗಳೆಲ್ಲ ಖಾಲಿಯಾಗಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ.
ಇತ್ತೀಚೆಗೆ ಉಳವಿ ಕ್ಷೇತ್ರಕ್ಕೆ ತೆರಳಿದ ವೇಳೆ ಅಲ್ಲಿನ ಬತ್ತಿದ ಕೆರೆ ತುಂಬಿಸುವಂತೆ ಬೇಡಿಕೆ ಬಂದಿದೆ. ಹೀಗಾಗಿ ಶರಣರ ಪವಿತ್ರ ಕ್ಷೇತ್ರವಾಗಿರುವ ಉಳವಿ ಭಾಗದ ಎಲ್ಲ ಕೆರೆಗಳನ್ನು ತುಂಬಿಸಲು ಕರ್ನಾಟಕ ನೀರಾವರಿ ನಿಗಮದಿಂದ ಯೋಜನೆ
ಜಾರಿಗೊಳಿಸಲಾಗುತ್ತದೆ ಎಂದರು.
ಪಾದರಕ್ಷೆ ತಯಾರಿಸುವ ಕಾಯಕ ಮಾಡಿ ಬಸವಾದಿ ಶರಣರ ಅಂತರಂಗ ಗೆದ್ದಿದ್ದ ಹರಳಯ್ಯ ಶಿವಯೋಗಿಯಾಗಿ ರೂಪುಗೊಂಡಿದ್ದರು. ಇಂಥ ಅಪ್ರತಿಮ ಶರಣ ನಮ್ಮ ಸೋದರ ಬಂಧಿ ಶೇಗುಣಸಿ ಗೌಡರ ತೋಟದಲ್ಲಿ ತಪಗೈದು ಲಿಂಗಪೂಜೆ
ಮಾಡಿದ್ದರು. ಅವರ ಪೂಜೆಯ ನೀರಾಗಿ ತೆಗೆದ ಗುಂಡಿ-ವರತೆ ಇಂದಿಗೂ ಹರಿಯುತ್ತಿದೆ. ಇಂದು ಸುಕ್ಷೇತ್ರ ಹರಳಯ್ಯನ ಗುಂಡದ ಹೆಸರಿನಲ್ಲಿ ಪ್ರವಾಸಿ, ಪ್ರಾಕೃತಿಕ ತಾಣವಾಗಿ ಅಭಿವೃದ್ಧಿªಗೊಂಡಿದೆ. ಇಂತಹ ಅಪ್ರತಿಮ ಹರಳಯ್ಯ ಶರಣರ ಪ್ರತಿಮೆಗಳನ್ನು ದೇವರ ಜಗಲಿ ಮೇಲೆ ಇರಿಸಿಕೊಂಡು ನಮ್ಮ ಸಹೋದರರು ಇಂದಿಗೂ ಪೂಜಿಸುತ್ತಿದ್ದಾರೆ. ಇದು ನನ್ನ ಸೌಭಾಗ್ಯ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಹರಳಯ್ಯ ಯುವ ಸಂಘದಿಂದ ಸಚಿವ ಡಾ| ಎಂ.ಬಿ. ಪಾಟೀಲ ಅವರನ್ನು ರಾಹುಲ್ ಜಾಧವ, ಸಾಬು
ಹೊನಕಂಡಿ, ಚಂದ್ರಕಾಂತ ಜಾಧವ, ಮೋತಿಲಾಲ್ ಕಾಂಬಳೆ, ಯಶವಂತ ಜಾಧವ ಸನ್ಮಾನಿಸಿದರು. ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಯಡವೆ, ಟಕ್ಕಳಕಿ ಗ್ರಾಪಂ ಅಧ್ಯಕ್ಷ, ರಾಜೀವ್ ಗಾಂಧಿ ವಸತಿ ನಿಗಮ ನಿರ್ದೇಶಕ ಮಧುಕರ ಜಾಧವ, ಜಿಪಂ ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ವಾಮನ್ ಚವ್ಹಾಣ, ರಾಜುಗೌಡ ಜಾಲಗೇರಿ, ಅಡಿವೆಪ್ಪ ಸಾಲಗಲ್, ಕಾಂತಾ ನಾಯಕ, ಜಕ್ಕಪ್ಪ ಹೊನಕಟ್ಟಿ, ಜವಾಹರ್ ಜಾಧವ, ಮುದಕು ಚಲವಾದಿ, ವಿಠಲ ಪೂಜಾರಿ, ಪ್ರಶಾಂತ ಝಂಡೆ ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.