ಎಸ್‌ಟಿ ಪ್ರಮಾಣ ಪತ್ರಕ್ಕೆ ಆಗ್ರಹ


Team Udayavani, Feb 10, 2022, 5:30 PM IST

28ST

ವಿಜಯಪುರ: ಬೇಡ ಜಂಗಮ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ಅಖೀಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ ವಿಜಯಪುರ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಹಾಸಭೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧರಾಮಯ್ಯ ಸಾವಳಗಿಮಠ ಮಾತನಾಡಿ, ಸಣ್ಣ ಕಾರಣದ ನೆಪವೊಡ್ಡಿ ಕರ್ನಾಟಕದಲ್ಲಿ ಜಂಗಮ ಜಾತಿಯನ್ನು ರಾಜ್ಯ ಸರಕಾರ ಯಾವದೇ ಜಾತಿಗಳ ಪ್ರವರ್ಗದಲ್ಲಿ ಸೇರಿಸದೇ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

ಜಂಗಮ ಸಮುದಾಯ 1921ರಲ್ಲಿ ದುರ್ಬಲ ವರ್ಗದಲ್ಲಿ ಇದ್ದ ಪಟ್ಟಿಯನ್ನೇ 1935ರ ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ ಎಂದು ಉಪ ಬಂಧಿಸಿದೆ. ಸದರಿ ಪರಿಶಿಷ್ಟ ಜಾತಿ ಪಟ್ಟಿಯನ್ನು ಆಧರಿಸಿ 11-8-1950ರಲ್ಲಿ ರಚಿಸಲಾದ ಭಾರತ ಸಂವಿಧಾನ ಅಧಿ ನಿಯಮ 341ರ ಪ್ರಕಾರ ರಾಷ್ಟ್ರಪತಿಗಳು ವಂಶ ಪಾರಂಪರ್ಯ ಧಾರ್ಮಿಕ ಭಾಷಾ ವೃತ್ತಿಯಾದ ಕುಲ ಕಸುಬಿನ ಆಧಾರದ ಅಡಿಯಲ್ಲಿ ಬರುವ ಜಾತಿಗಳ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿ ಎಂದು ಒಪ್ಪಿಕೊಂಡಿದೆ. ಇದನ್ನು ಆಧರಿಸಿ 1950 ಆದೇಶ 18-11-1950ರಂದು ಜಾರಿಗೊಳಿಸಿದೆ ಎಂದು ವಿವರಿಸಿದರು.

ಭಾಷಾವಾರು ರಾಜ್ಯಗಳ ಪುನಾರಚನೆ ಸಂದರ್ಭದಲ್ಲಿ ಹೈದರಾಬಾದ್‌ ರಾಜ್ಯದಲ್ಲಿದ್ದ ಕಲಬುರಗಿ, ಬೀದರ, ರಾಯಚೂರು ಜಿಲ್ಲೆಗಳನ್ನು ಅಂದಿನ ಮೈಸೂರು ರಾಜ್ಯಕ್ಕೆ ವರ್ಗಾಯಿಸಿ, ಈ ಜಲ್ಲೆಗಳಲ್ಲಿ ವಾಸಿಸುತ್ತಿರುವ ಜಂಗಮ ಸಮುದಾಯದ ಬೇಡ ಜಂಗಮರಿಗೆ ಜಿಲ್ಲಾ ಸಿಮಿತಗೊಳಿಸಿ ಕೇಂದ್ರ ಸರಕಾರ ಜಾರಿಗೊಳಿಸಿದೆ. ನಂತರ ವಿಧಿಸಿದ ಕ್ಷೇತ್ರ ನಿರ್ಭಂದನೆಯನ್ನು 1976ರಲ್ಲಿ ತೆಗೆದು ಹಾಕಿ 27-7-1977ರಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯಾದ್ಯಂತ ಬೇಡ ಜಂಗಮರು ವಾಸಿಸುತ್ತಾರೆ. ಇದು ಇಡಿ ರಾಜ್ಯದ ಬೇಡ ಜಂಗಮರು ಪರಿಶಿಷ್ಟ ಜಾತಿಯ ಎಲ್ಲ ಸೌಲಭ್ಯ ಪಡೆಯುವ ಅರ್ಹತೆಯ ತಿದ್ದುಪಡಿ ಆದೇಶ ಹೊರಡಿಸಿದೆ. ಸಂವಿಧಾನದ ಅನುಚ್ಛೇದದಲ್ಲಿ ಸೂಚಿಸಿದ ಜಾತಿಗಳ 101ರ ಪಟ್ಟಿಯಲ್ಲಿ ಕ್ರಮಾಂಕ 19ರಲ್ಲಿ ಬೇಡ ಜಂಗಮ ಜಾತಿ ಎಂದು ನಮೂದಾಗಿರುತ್ತದೆ ಎಂದು ವಿವರಿಸಿದರು.

ಜಂಗಮರೆಂದ ಕೂಡಲೇ ಲಿಂಗಾಯತರು ಅಥವಾ ವೀರಶೈವರೆಂದೆ ಅನೇಕರು ಭಾವಿಸುತ್ತಾರೆ. ಈ ತಿಳಿವಳಿಕೆ ಯಿಂದಾಗಲೇ ಜಂಗಮರು ಸಹ ತಮ್ಮ ಶಾಲೆಯ ದಾಖಲೆ ಮುಂತಾದವುಗಳಲ್ಲಿ ಜಾತಿ ಕಾಲಂದಲ್ಲಿ ಲಿಂಗಾಯತ ಅಥವಾ ವೀರಶೈವ ಜಂಗಮ ಎಂದು ಬರೆಯುವ ರೂಢಿಯಾಗಿದೆ. ಆದ ಕಾರಣ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಮಹಾಸಭೆ ಜಿಲ್ಲಾಧ್ಯಕ್ಷ ಸಂಜೀವ ಹಿರೇಮಠ ಮಾತನಾಡಿ, ಕರ್ನಾಟಕ ಉತ್ಛ ನ್ಯಾಯಾಲಯ ಗೀತಾ ಕುಲಕರ್ಣಿ ಪ್ರಕರಣದಲ್ಲಿ ವೀರಶೈವ ಲಿಂಗಾಯತ ಇದು ಜಾತಿ ಎ ಅಲ್ಲ ಅದು ಒಂದು ಪಂಥ ಎಂದು ತೀರ್ಪುಕೊಟ್ಟಿದೆ. ಆದರು ಸಹ ಕರ್ನಾಟಕ ಸರಕಾರ ಪ್ರವರ್ಗ 3ಬಿ ಯಲ್ಲಿ ಜಾತಿ ಪ್ರಮಾಣ ಪತ್ರ ಕೊಡುತ್ತ ಬಂದಿದೆ. ಅದು ಸಹ ನ್ಯಾಯಾಂಗ ನಿಂದನೆ ಎಂದು ತಿಳಿದುಕೊಂಡರು ಸಹಿತ ಇನ್ನೂವರೆಗೆ 3ಬಿಯನ್ನು ಮುಂದುವರಿಸಿಕೊಂಡು ಬಂದಿದೆ ಎಂದು ದೂರಿದರು.

ಬೇಡ ಜಂಗಮ ಸಮಾಜದ ನೀಲಕಂಠ ಮಠ, ಶಾಂತೇಶ ನಿಂಬರಗಿಮಠ, ಎಸ್‌.ಎಸ್‌. ರೂಗಿಮಠ, ಐ.ಬಿ. ಮಠ, ಸಿ.ಎನ್‌. ಹಿರೇಮಠ, ಬಿ.ಐ. ಹಿರೇಮಠ, ಷಡಕ್ಷರಿ ಹಿರೇಮಠ, ಸದಾಶಿವಯ್ಯ ಅರಕೇರಿಮಠ, ಘನಕುಮಾರ, ಮಲ್ಲಯ್ಯ ಹಿರೇಮಠ, ಸಂಗಮೇಶ ಹಿರೇಮಠ, ಶ್ರೀಕಾಂತ ಹಿರೇಮಠ, ವಿಶ್ವನಾಥ ಹಿರೇಮಠ, ರಾಚಯ್ಯ ಚೌಕಿಮಠ, ಕುಮಾರ ವಿಭೂತಿಮಠ, ಸಂಗಮೇಶ ಹಿರೇಮಠ, ದಾನಮ್ಮ ತೆಗ್ಗಳ್ಳಿ, ಶಾಂತಾ ಹಿರೇಮಠ ಇರಿದ್ದರು.

ಟಾಪ್ ನ್ಯೂಸ್

Janapada-Academy

Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Vijayapura: Protest against Waqf led by many Seers

Vijayapura: ವಕ್ಫ್ ವಿರುದ್ಧ ಹಲವು ಮಠಾಧೀಶರ ನೇತೃತ್ವದಲ್ಲಿ ಹೋರಾಟ

Waqf Issue:  Must Be Get Protected from Land Terrorism, Land Jihad: Shobha Karandlaje

Waqf Issue: ಲ್ಯಾಂಡ್ ಟೆರರಿಸಂ, ಲ್ಯಾಂಡ್ ಜಿಹಾದ್ ನಿಂದ ಬಚಾವಾಗಬೇಕು: ಶೋಭಾ ಕರಂದ್ಲಾಜೆ

Jammer

Waqf Property: ಬೊಮ್ಮಾಯಿ ಕಾಲದಲ್ಲೂ ವಕ್ಫ್ ಆಸ್ತಿ ತೆರವಿಗೆ ಹೇಳಿದ್ರು: ಸಚಿವ ಜಮೀರ್‌

Vijayapura: ವಕ್ಫ್ ವಿವಾದ… ನಾಳೆಯಿಂದ ಅಹೋರಾತ್ರಿ ಧರಣಿ ಆರಂಭ: ಶಾಸಕ ಯತ್ನಾಳ

Vijayapura: ವಕ್ಫ್ ವಿವಾದ… ನಾಳೆಯಿಂದ ಅಹೋರಾತ್ರಿ ಧರಣಿ ಆರಂಭ: ಶಾಸಕ ಯತ್ನಾಳ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

DK-Shivakuamar

By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ

Janapada-Academy

Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ

High-Court

Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್‌ ಸೂಚನೆ

current

Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು

mob

WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್‌ ಅಧಿಕಾರಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.