ಜವಳಿ ವ್ಯಾಪಾರಕ್ಕೂ ಅನುಮತಿಸಲು ಮನವಿ
Team Udayavani, Jun 16, 2021, 6:05 PM IST
ವಿಜಯಪುರ: ಕೋವಿಡ್ ಲಾಕ್‌ಡೌನ್ ಸಡಿಲಿಕೆ ಸಂದರ್ಭದಲ್ಲಿ ಬಟ್ಟೆ ಅಂಗಡಿ ವ್ಯಾಪಾರಕ್ಕೆ ಅನುಮತಿಸುವಂತೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ವಿಜಯಪುರ ಜವಳಿ ವ್ಯಾಪಾರಸ್ಥರ ಸಂಘದಿಂದ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಜವಳಿ ವ್ಯಾಪಾರಿಗಳು, ಸರ್ಕಾರದ ಕೋವಿಡ್ ಮಾರ್ಗಸೂಚಿ ಪ್ರಕಾರ ಮಾರುಕಟ್ಟೆಯಲ್ಲಿ ಕೆಲವು ಅಂಗಡಿ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ.
ಆದರೆ ಬಟ್ಟೆ ಅಂಗಡಿ ಆರಂಭಕ್ಕೆ ಅನುಮತಿಸಿಲ್ಲ. ಕಳೆದ ವರ್ಷ 2020 ಅತಿ ಹೆಚ್ಚು ವ್ಯಾಪಾರ ವಿರುವ ಸಮಯ ಏಪ್ರಿಲ್, ಮೇ ತಿಂಗಳಲಿನಲ್ಲಿ ಲಾಕ್‌ಡೌನ್ ವಿ ಧಿಸಿದ್ದರಿಂದ ವ್ಯಾಪಾರ ಕಳೆದುಕೊಂಡಿದ್ದೆವೆ. ಪ್ರಸಕ್ತ ವರ್ಷವೂ ಅದೇ ರೀತಿಯಾಗಿ ನಾವು ವ್ಯಾಪಾರ ಕಳೆದುಕೊಂಡು ಜವಳಿ ವ್ಯಾಪಾರಿಗಳು ಕಷ್ಟದಲ್ಲಿದ್ದೇವೆ ಎಂದು ಸಮಸ್ಯೆ ನಿವೇದಿಸಿಕೊಂಡರು. ಕಷ್ಟದಲ್ಲಿರುವ ಜವಳಿ ವ್ಯಾಪಾರಿಗಳಿಗೆ ಸರಕಾರದಿಂದ ಯಾವುದೇ ಸಹಾಯವಾಗಿಲ್ಲ.
ಲಾಕ್ ಡೌನ್ ಆದರೂ ಅಂಗಡಿ ಬಾಡಿಗೆ, ಕರೆಂಟ್ ಬಿಲ್, ಮಹಾನಗರ ಪಾಲಿಕೆಯ ತೆರಿಗೆ, ನೀರಿನ ಕರ, ಬ್ಯಾಂಕ್‌ನ ಸಾಲ-ಬಡ್ಡಿ ಹೀಗೆ ಎಲ್ಲವನ್ನೂ ಪಾವತಿಸಿದ್ದೇವೆ. ಜವಳಿ ಸಂಘದಡಿ ದುಡಿಯುವವರಿಗೆ ಸರಕಾರ ಪ್ಯಾಕೇಜ್ ಘೋಷಿಸಿಲ್ಲ, ಯಾವುದೇ ಆರ್ಥಿಕವಾಗಿ ಅನುಕೂಲ ಕಲ್ಪಿಸದಿದ್ದರೂ ನಾವೇ ಸಂಬಳ ನೀಡಿದ್ದೇವೆ ಎಂದು ಕಷ್ಟಗಳನ್ನು ವಿವರಿಸಿದರು.
ಆದ್ದರಿಂದ ಸರ್ಕಾರ ಜವಳಿ ವ್ಯಾಪಾರಿಗಳಿಗೆ ವಾರದಲ್ಲಿ ಮೂರು ದಿನವಾದರೂ ವ್ಯಾಪಾರ ಮಾಡಲು ಅನುಮತಿ ನೀಡಬೇಕು. ದಿನಸಿ ಅಂಗಡಿಗಳಿಗೂ ಮೂರು ದಿನ ವ್ಯಾಪಾರಕ್ಕೆ ಅನುಮತಿ ನಿಗದಿ ಮಾಡಬೇಕು. ದಿನಸಿ ವ್ಯಾಪಾರಸ್ಥರಿಗೆ ಬೆಳಗ್ಗೆ 6ರಿಂದ 10ರವರೆಗೆ, ಹಾಗೆ ನಮಗೆ ಬಟ್ಟೆ ವ್ಯಾಪಾರಸ್ಥರಿಗೆ ಬೆಳಗ್ಗೆ 10ರಿಂದ 3ರವರೆಗೆ ಅನುಮತಿ ನೀಡಿ ಎಂದು ಮನವಿಯಲ್ಲಿ ಕೋರಿದರು. ಜವಳಿ ವ್ಯಾಪಾರಸ್ತರ ಸಂಘದ ಅಧ್ಯಕ್ಷ ಗೋಪಾಲ ಮಹೇಂದ್ರಕರ, ವಿಕಾರ ದರಬಾರ, ವಿಶ್ವನಾಥ ಬೀಳಗಿ, ಮಹೇಶ ಭಾವಿ, ಪ್ರದೀಪ ಮೊಗಲಿ, ಸಾಗರ ಮೊಗಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.