ಜಮೀನು ವಹಿವಾಟು ದಾರಿ ಸಮಸ್ಯೆ ಪರಿಹರಿಸಿ
Team Udayavani, Jul 6, 2021, 7:45 PM IST
ವಿಜಯಪುರ: ರೈತರು ತಮ್ಮ ತಮ್ಮ ಜಮೀನಿಗೆ ಹೋಗಲು ದಾರಿ ಇಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಜಮೀನಿನ ವಹಿವಾಟು ದಾರಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ಬಬಲೇಶ್ವರದಲ್ಲಿ ತಹಶೀಲ್ದಾರ್ ಎಂ.ಎಸ್. ಅರಕೇರಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ಇತ್ತೀಚೆಗೆ ಹಳ್ಳಿಗಳಲ್ಲಿ ವಹಿವಾಟು ದಾರಿ ಸಮಸ್ಯೆಯ ಕಾರಣದಿಂದ ರೈತರು ಮಳೆಯಾದರೂ ಬಿತ್ತನೆಗಾಗಿ ಹೊಲಕ್ಕೆ ಹೋಗಲಾಗದೇ ಜಮೀನು ಪಾಳು ಬಿದ್ದಿವೆ. ಬಹುತೇಕ ರೈತರು ತಮ್ಮ ಹೊಲದಲ್ಲಿ ಇತರೆ ರೈತರು ಹಾಯ್ದುಹೋಗಲು ಅವಕಾಶ ನೀಡದೇ, ನಕ್ಷೆಯಲ್ಲಿ ದಾರಿ ಗುರುತಿದ್ದರೆ ಹಾಯ್ದು ಹೋಗಲು ಅವಕಾಶ ಕೊಡುತ್ತಾರೆ. ಇಲ್ಲದಿದ್ದರೆ ನ್ಯಾಯಾಲಯಕ್ಕೆ ಹೋಗಬೇಕು ಎಂದು ಸಮಸ್ಯೆ ನಿವೇದಿಸಿದರು.
ಈ ಹಿಂದೆ ಅನುಭೋಗದ ಹಕ್ಕಿನಡಿ ತಹಶೀಲ್ದಾರರೇ ದಾರಿ ಸಮಸ್ಯೆಗೆ ಪರಿಹಾರ ಕಂಡುಕೊಡುತ್ತಿದ್ದು, ಈ ಹಿಂದೆ ಈ ಅಧಿ ಕಾರವನ್ನು ತಹಶೀಲ್ದಾರರಿಂದ ಕಿತ್ತುಕೊಳ್ಳಲಾಗಿದೆ. ಹೀಗಾಗಿ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ರೈತರ ಜಮೀನಿನ ಸಮಸ್ಯೆ ಇತ್ಯರ್ಥಕ್ಕೆ ಮೊದಲಿನಂತೆಯೇ ತಹಶೀಲ್ದಾರರಿಗೆ ಅಧಿ ಕಾರ ನೀಡಬೇಕು ಎಂದು ಆಗ್ರಹಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಮಾತನಾಡಿ, ಬಬಲೇಶ್ವರ ಪಟ್ಟಣ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ ಮೂರು ವರ್ಷಗಳಾದರೂ ಪೂರ್ಣ ಪ್ರಮಾಣದಲ್ಲಿ ತಾಲೂಕಿನ ಎಲ್ಲ ಕಚೇರಿಗಳು ಸ್ಥಾಪನೆಗೊಂಡಿಲ್ಲ.
ಇದರಿಂದ ತಾಲೂಕಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಕೂಡಲೇ ತಾಲೂಕಿನಲ್ಲಿ ಇರಬೇಕಾದ ಎಲ್ಲ ಕಚೇರಿಗಳನ್ನು ಆರಂಭಿಸಬೇಕು. ಫಸಲ್ ಬಿಮಾ ಯೋಜನೆ ಅಡಿಯಲ್ಲಿ ರೈತರು ವಿಮಾ ಕಂಪನಿಗಳು ವಿಮಾ ಹಣವನ್ನು ಪಾವತಿಸಬೇಕು. 2020-21ನೇ ಸಾಲಿನಲ್ಲಿ ವಿಮೆ ಹಣ ಬಿಡುಗಡೆಗೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಪಾಂಡು ಹ್ಯಾಟಿ, ಸಿದ್ರಾಮ ಅಂಗಡಗೇರಿ, ಹೊನಕೇರೆಪ್ಪ ತೆಲಗಿ, ಸಂಗಪ್ಪ ಕಾಗಿ, ಅರ್ಜುನ ಹಾವಗೊಂಡ, ಈರಣ್ಣ ದೇವರಗುಡಿ, ಶಾಂತಗೌಡ ಬಿರಾದಾರ, ಕೃಷ್ಣಪ್ಪ ಬಮರಡ್ಡಿ, ಬಸವರಾಜ ಜಂಗಮಶೆಟ್ಟಿ, ನಂದುಗೌಡ ಬಿರಾದಾರ, ಚಾಂದಸಾಬ ಗೋಠೆ, ಶಿವಪ್ಪ ನಾಗರಾಳ, ಮುತ್ತಪ್ಪ ಬಿರಾದಾರ, ಸಂಗನಗೌಡ ಬಿರಾದಾರ, ಗುರುಗೌಡ ಬಿರಾದಾರ, ರಾಮು ದಿಗಂಬರಮಠ, ಸೋಮು ಕೊಣ್ಣೂರ, ಗುರು ನಿಂಗ್ಯಾಗೋಳ, ಅರ್ಜುನ ಬಿರಾದಾರ, ಸಿದ್ದಪ್ಪ ಕಲಬೀಳಗಿ, ನಿಂಗಪ್ಪ ಕಾಗಿ, ಶೇಖು ಕೋಟ್ಯಾಳ, ಸಂಗಪ್ಪ ಮುದಗನೂರ, ಮಲ್ಲಪ್ಪ ಸೊನ್ನಗಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.