ಸಮಾಜ ಸೇವಕರನ್ನು ಗೌರವಿಸಿ: ಹುಲ್ಲೂರ
Team Udayavani, Jun 10, 2018, 12:14 PM IST
ವಿಜಯಪುರ: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸೇವಾ ಚಟುವಟಿಕೆಯಲ್ಲಿ ಸಮಾಜದ ಪರಿವರ್ತನೆಗಾಗಿ ಕ್ರಿಯಾಶೀಲರಾಗಿ ಶ್ರಮಿಸಿದಾಗ ಸಮಾಜದ ಅಭಿವೃದ್ಧಿ ಸಾಧ್ಯ. ಎಲೆ ಮರೆ ಕಾಯಿಯಂತೆ ಸಮಾಜಕ್ಕೆ ತಮ್ಮನ್ನು ಮುಡಿಪಾಗಿಸಿರಿಸಿಕೊಂಡ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸುವುದು ಕೂಡ ಸಮಾಜದ ಹೊಣೆಗಾರಿಕೆ ಎಂದು ಏಡ್ಸ್ ಜಾಗೃತಿ ಮಹಿಳಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಹಾದೇವಿ ಹುಲ್ಲೂರ ಹೇಳಿದರು.
ಸಿದ್ದೇಶ್ವರ ನಗರದ ಏಡ್ಸ್ ಜಾಗೃತಿ ಮಹಿಳಾ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆರ್ಯಭಟ
ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ವೈದ್ಯ ಡಾ| ಅಮರೇಶ ಮಿಣಜಗಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಎಲೆಮರೆ ಕಾಯಿಯಂತೆ ಯಾವುದೇ ಫಲಾಪೇಕ್ಷೆ ಬಯಸದೇ ದುಡಿಯುವ ಇಂತ ವ್ಯಕ್ತಿಗಳಿಗೆ ನೀಡುವ ಪ್ರಶಸ್ತಿಗಳಿಗೂ ಬೆಲೆ ಬರುವ ಜೊತೆಗೆ, ಸಮಾಜಕ್ಕೂ ಆದರ್ಶಪ್ರಾಯ ಸಂದೇಶ ರವಾನೆಯಾಗುತ್ತದೆ ಎಂದರು.
ಜಗತ್ತಿಗೆ ಸ್ತ್ರೀ ಸಮಾನತೆ ಸ್ವಾತಂತ್ರ್ಯ ನೀಡಿ ಸರ್ವರಿಗೂ ಲೇಸನ್ನೇ ಬಯಸಿದ ವಿಶ್ವಗುರು ಬಸವೇಶ್ವರರ ಆದರ್ಶ
ತತ್ವ ಸಿದ್ಧಾಂತ ಮೈಗೂಡಿಸಿಕೊಂಡಲ್ಲಿ ಸಮಾಜದಲ್ಲಿ ಸಮಾನತೆಯ ಬೀಜ ಬಿತ್ತಲು ಸಾಧ್ಯವಾಗುವುದು. ಮತ್ತೂಂದೆಡೆ ಪ್ರಶಸ್ತಿಗಳು ವ್ಯಕ್ತಿಯ ಜವಾಬ್ದಾರಿ ಹೆಚ್ಚಿಸಿ ಇನ್ನೂ ಹೆಚ್ಚಿನ ಸಾಧನೆಯಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗಿದ್ದು, ಸಮಾಜಕ್ಕೂ ಇದರಿಂದ ನಿರೀಕ್ಷೆ ಮೀರಿ ಉಪಯೋಗ ಆಗಲಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ| ಅಮರೇಶ ಮಿಣಜಗಿ, ಬಾಲ್ಯದಿಂದಲೇ ಬಸವೇಶ್ವರರ ವಿಚಾರಧಾರೆಗೆ ಪ್ರಭಾವಿತರಾಗಿ ಬಸವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ವಚನಗಳು ಕೇವಲ ಶಬ್ದಗಳ ಆಗರವಲ್ಲ, ಮನುಷ್ಯ ಜೀವನಕ್ಕೆ ಆದರ್ಶದ ಬದುಕು ರೂಪಿಸಿಕೊಳ್ಳುವ ಅಂಶಗಳಿವೆ. ಬಸವ ತತ್ವ-ಸಂದೇಶಗಳನ್ನು ಮನೆ, ಮನಕ್ಕೆ ತಲುಪಿಸುವ ಕಾರ್ಯ ನಿರಂತರ ಆಗಬೇಕಿದೆ. ಶಿಸ್ತುಬದ್ಧ ಜೀವಿಗಳಾಗಿದ್ದು ಸ್ವಯಂ ಪ್ರಯತ್ನದಿಂದಲೇ ಸಾಧಿಸುವ ಛಲ ಹೊಂದಿದಾಗ ಮಾತ್ರ ಸಮಾಜದಲ್ಲಿ ಸಾಧಕರಾಗಲು ಸಾಧ್ಯ ಹಾಗೂ ಅಂದುಕೊಂಡ ಗುರಿಯನ್ನೂ ಮುಟ್ಟಲು ಸಾಧ್ಯ ಎಂದರು.
ಎ.ಎಂ. ಸಗರನಾಳ ಮಾತನಾಡಿದರು. ಏಡ್ಸ್ ಜಾಗೃತಿ ಮಹಿಳಾ ಸಂಘದ ಜಿಲ್ಲಾ ಘಟಕ ಪ್ರಮುಖರಾದ ಕಸ್ತೂರಿಬಾಯಿ ಪಾಟೀಲ, ಸುನಂದಾ ತೆವರೆಟ್ಟಿ, ಸಂಗೀತಾ ಹೊನ್ನಿಕ್ಯಾಳ, ರವಿ ಬಳಮಕಾರ, ಆನಂದ ಯಾದವ, ಪ್ರಮೋದ ದೊಡ್ಡಮನಿ, ಸುರೇಶ ಕುಮಟಗಿ ವೇದಿಕೆಯಲ್ಲಿದ್ದರು. ಮಹಿಳಾ ಸಂಘದ ಕಾರ್ಯಕರ್ತರು ಜಾನಪದ ಗೀತೆ ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.